ಅಹಮದಾಬಾದ್:ಪತ್ನಿ ತನ್ನ ಜತೆ ಇರಲು ನಿರಾಕರಿಸಿ ಬಿಟ್ಟು ತವರಿಗೆ ಹೋದದ್ದನ್ನು ಅರಗಿಸಿಕೊಳ್ಳಲಾಗದ ಪತಿಯೊಬ್ಬ ತನ್ನ ಜತೆ ಪತ್ನಿಯ ದೇಹವನ್ನೂ ಛಿದ್ರಛಿದ್ರಗೊಳಿಸಿರುವ ಘಟನೆ ಗುಜರಾತ್‌ನ ಅರಾವಳಿ ಜಿಲ್ಲೆಯಲ್ಲಿ ನಡೆದಿದೆ
ಮೊಡಸಾದಿಂದ ಸುಮಾರು 30 ಕಿಮೀ ದೂರದಲ್ಲಿರುವ ಮೇಘರಾಜ್ ತಾಲೂಕಿನ ಬಿಟಿ ಛಪ್ರಾ ಗ್ರಾಮದಲ್ಲಿ ಇದು ನಡೆದಿದೆ. ಬಿಟ್ಟುಹೋಗಿರುವ ಪತ್ನಿ ಮತ್ತೆ ಸಂಸಾರ ಮಾಡುವಂತೆ ಮನವೊಲಿಸಿದರೂ ಆಕೆ ಬರದ ಹಿನ್ನೆಲೆಯಲ್ಲಿ ಇಂಥದ್ದೊಂದು ಭಯಾನಕ ನಿರ್ಧಾರವನ್ನು ಪತಿ ಲಾಲಾ ಪಾಗಿ (47) ತೆಗೆದುಕೊಂಡಿದ್ದಾನೆ.
ಪತ್ನಿ ಶಾರದಾಬೆನ್‌ಳ (43) ಮನವೊಲಿಸಿ ಮನೆಗೆ ವಾಪಾಸ್ ಕರೆತರಲು ಸಾಕಷ್ಟು ಪ್ರಯತ್ನ ಮಾಡಿದ್ದ ಪತಿ. ಆದರೆ ಆಕೆ ಒಪ್ಪಿರಲಿಲ್ಲ. ಕೊನೆಗೆ ಭಯಾನಕ ನಿರ್ಧಾರ ತೆಗೆದುಕೊಂಡು ಒಂದೇ ಒಂದು ಸಲ ನಿನ್ನನ್ನು ಅಪ್ಪಿಕೊಳ್ಳಬೇಕು, ಮತ್ತೆಂದೂ ನಿನ್ನ ತಂಟೆಗೆ ಬರುವುದಿಲ್ಲ ಎಂದಿದ್ದಾನೆ. ಪತಿಯಿಂದ ತಪ್ಪಿಸಿಕೊಂಡರೆ ಸಾಕು ಎನ್ನುತ್ತಿದ್ದ ಪತ್ನಿ, ಒಂದು ಬಾರಿ ತಾನೇ ಎಂದು ಅಪ್ಪಿಕೊಂಡಿದ್ದಾಳೆ. ನಿಜಕ್ಕೂ ಅದು ಕೊನೆಯ ಬಾರಿ ಆಗಿದೆ.
ಆಗಿದ್ದೇನೆಂದರೆ ಪತಿ ತನ್ನ ಜತೆ ಸ್ಫೋಟಕವನ್ನು ಕೊಂಡೊಯದ್ದುದ್ದಾನೆ, ನಂತರ ಪತ್ನಿಯನ್ನು ತಬ್ಬಿಕೊಂಡು ಅದನ್ನು ಸ್ಫೋಟಿಸಿದ್ದಾನೆ. ಅರೆಕ್ಷಣದಲ್ಲಿ ಇಬ್ಬರ ದೇಹವೂ ಛಿದ್ರ ಛಿದ್ರವಾಗಿದೆ.
ಕೆಲವು ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್ ಸ್ವಿಚ್ ಮತ್ತು ಸಂಪರ್ಕದ ತಂತಿಗಳನ್ನು ತನ್ನ ದೇಹಕ್ಕೆ ಸುತ್ತಿಕೊಂಡು ತನ್ನ ಅತ್ತೆಯ ಮನೆಗೆ ಹೋಗಿದ್ದ. ಅಲ್ಲಿ ಪತ್ನಿಯನ್ನು ತಬ್ಬಿಕೊಂಡು ಡಿಟೋನೇಟರ್ ಸ್ವಿಚ್ ಒತ್ತಿ, ಸ್ಫೋಟಿಸಿದ್ದಾನೆ.
ಕಟ್ಟಡ ಕಾರ್ಮಿಕನಾಗಿರುವ ಪಾಗಿ, ಮೊಡಸ ತಾಲೂಕಿನ ಮುಳೋಜ್ ಗ್ರಾಮದವರಾಗಿದ್ದು, ಕಳೆದ 20 ವರ್ಷಗಳ ಹಿಂದೆ ಶಾರದಾಬೆನ್ ಎಂಬುವರನ್ನು ಮದುವೆಯಾಗಿದ್ದ. ಹೆಂಡತಿಗೆ ಪದೇಪದೇ ಥಳಿಸುತ್ತಿದ್ದರಿಂದ ಆಕೆ ಕಳೆದ ಒಂದು ತಿಂಗಳಿನಿಂದ ತನ್ನ ತವರಿಗೆ ಹೋಗಿದ್ದಳು. ಜಿಲೆಟಿನ್ ಕಡ್ಡಿಗಳು ಕಡಿಮೆ ತೀವ್ರತೆಯ ಸ್ಫೋಟಗಳನ್ನು ಮಾಡುವ, ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಗಣಿಗಾರಿಕೆ ವಲಯದಲ್ಲಿ ಬಾವಿಗಳನ್ನು ಅಗೆಯಲು ಬಳಸಲಾಗುವ ಅಗ್ಗದ ಸ್ಫೋಟಕ ವಸ್ತುಗಳಾಗಿವೆ.
2016ರಲ್ಲಿ ರದ್ದಾದ ನೋಟನ್ನು ಬದಲಾಯಿಸಲು ಇವರಿಗೆ ಈಗ ಹೈಕೋರ್ಟ್​ ನೀಡಿತು ಅನುಮತಿ…

ಆಂಧ್ರದಲ್ಲಿ ಕ್ಷಾಮ ಬಂದಾಗ ಹುಟ್ಟಿಕೊಂಡದ್ದು ಮುಂಬೈನ ಕಾಮಾಟಿಪುರ! 200 ವರ್ಷಗಳ ಇತಿಹಾಸ ಇದಕ್ಕಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + fourteen =
Remember me
