ರಾಯ್ಪುರ:ಸೆಲ್ಫಿ ಹುಚ್ಚಿನಿಂದಾಗಿ ಜೀವ ಕಳೆದುಕೊಂಡವರು ಅದೆಷ್ಟೋ ಮಂದಿ. ಆದರೂ ಜನರಿಗೆ ಬುದ್ಧಿ ಬರುತ್ತಲೇ ಇಲ್ಲ. ಹೆಚ್ಚು ಹೆಚ್ಚು ಲೈಕ್ಸ್​, ಕಮೆಂಟ್​ ಗಳಿಸಲು ಹುಚ್ಚು ಸಾಹಸ ಮಾಡುವವರು ಹಲವು ಮಂದಿ. ಇದೀಗ ಅಂಥದ್ದೇ ಒಂದು ಹುಚ್ಚು ಆರು ಮಂದಿಯ ಪ್ರಾಣವನ್ನು ತೆಗೆದಿರುವ ಘಟನೆ ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ರಾಮದಾಹ ಜಲಪಾತದಲ್ಲಿ ಒಂದೇ ಕುಟುಂಬದ 6 ಮಂದಿ ಮೃಪಟ್ಟಿದ್ದಾರೆ. ಕೊಟಾಡೋಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರಾಮದಾಹ ಜಲಪಾತವು ರಾಜ್ಯದ ರಾಜಧಾನಿ ರಾಯ್‌ಪುರದಿಂದ 300 ಕಿ.ಮೀ ದೂರದಲ್ಲಿದೆ. ಸೆಲ್ಫಿ ತೆಗೆಯಲು ಹೋದ ಇಬ್ಬರನ್ನು ಉಳಿಸಲು ಹೋಗಿ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಆ ಕುಟುಂಬದ ಇಬ್ಬರು ಮಹಿಳೆಯರು ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದಾಗ ಈ ಘಟನೆ ಸಂಭವಿಸಿದೆ.
ಜಲಪಾತದ ನಡುವೆ ಸೆಲ್ಫಿಗಾಗಿ ಇಬ್ಬರು ಮಹಿಳೆಯರು ಹೋಗಿದ್ದಾರೆ. ನೀರು ಜೋರಾಗಿ ಬಂದು, ಅವರು ಆಯತಪ್ಪಿ ಬಿದ್ದಿದ್ದಾರೆ. ಕೊಚ್ಚಿಕೊಂಡು ಹೋಗುತ್ತಿದ್ದ ಅವರನ್ನು ರಕ್ಷಿಸಲು ಕುಟುಂಬದ ಇನ್ನು ನಾಲ್ವರು ನೀರಿಗೆ ಹಾರಿದ್ದಾರೆ. ನೀರಿನ ವೇಗ ಹೆಚ್ಚಾದುದರಿಂದ ಎಲ್ಲರೂ ಕೂಡ ನೀರಿನಲ್ಲಿ ಮುಳುಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಜಲಪಾತದಲ್ಲಿ ಜನರು ಸ್ನಾನ ಮಾಡದಂತೆ ಸ್ಥಳದಲ್ಲಿ ಎಚ್ಚರಿಕೆ ಫಲಕವನ್ನು ಹಾಕಿದ್ದರೂ, ಪ್ರವಾಸಿಗರು ಆಳವಾದ ನೀರಿನಲ್ಲಿ ಇಳಿದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್​)
ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕಾರು ಅಪಘಾತ: ರಸ್ತೆ ಬದಿಗೆ ಬಿದ್ದು ದುರ್ಘಟನೆ

ಗಂಡನ ಆಫೀಸ್​ಗೆ ಹೋಗಿ ನಿಂದಿಸೋದು ಮಾನಸಿಕ ಕ್ರೌರ್ಯ: ಪತ್ನಿಗೆ ಡಿವೋರ್ಸ್ ಕೊಡಲು ಪತಿಗೆ ಹೈಕೋರ್ಟ್ ಅನುಮತಿ

ಕಾಂಗ್ರೆಸ್​ ಪಕ್ಷಕ್ಕೆ ಮಾಜಿ ಶಾಸಕ ಲಕ್ಷ್ಮೀನಾರಾಯಣ ಗುಡ್​ಬೈ: ಪುನಃ ಬಿಜೆಪಿಯ ಕೈಹಿಡಿಯಲು ನಿರ್ಧಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + nineteen =
Remember me
