ಲಖನೌ ( ಉತ್ತರ ಪ್ರದೇಶ):ಬಿಜೆಪಿ ಶಾಸಕರೊಬ್ಬರ ಸಂಬಂಧಿಯ ಮೇಲೆ ಇಂದು ನಸುಕಿನಲ್ಲಿ ಗುಂಡಿನ ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಬೆಳಗ್ಗೆ ಸುಮಾರು 5.30ರ ವೇಳೆಗೆ ಪಾರ್ಕ್‌ನಲ್ಲಿ ವಾಕಿಂಗ್ ನಡೆಸುತ್ತಿದ್ದ ವೇಳೆ ನರೇಶ್‌ ತ್ಯಾಗಿ (60) ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ನರೇಶ್‌ ಅವರು, ಮುರಾದನಗರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅಜಿತ್ ಪಾಲ್ ಅವರ ಚಿಕ್ಕಪ್ಪ ಎಂದು ತಿಳಿದುಬಂದಿದೆ. ನರೇಶ್‌ ಅವರು ಪಿಡಬ್ಲ್ಯುಡಿ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಗಾಜಿಯಾಬಾದ್‌ನ ಸಿಹಾನಿ ಗೇಟ್ ಬಳಿ ಇಂದು ನಸುಕಿನಲ್ಲಿ ಈ ಘಟನೆ ಸಂಭವಿಸಿದೆ. ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ ಅವರ ನಿವಾಸದ ಸಮೀಪವೇ ಇದು ಸಂಭವಿಸಿದೆ.
ಇದನ್ನೂ ಓದಿ:ಭಾರತಕ್ಕೆ ಮರಳುತ್ತಿದ್ದ ಏಳು ಮಂದಿ ಭಾರತೀಯರ ಅಪಹರಣ ಮಾಡಿದ ಲಿಬಿಯಾ
ನರೇಶ್‌ ಅವರು ದಿನನಿತ್ಯವೂ ವಾಕಿಂಗ್‌ಗೆ ಹೋಗುತ್ತಿದ್ದರು. ಇದನ್ನು ಗಮನಿಸಿ ಸ್ಕೆಚ್‌ ಹಾಕಿರುವ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಕೂಟರ್‌ನಲ್ಲಿ ಬಂದಿರುವ ವ್ಯಕ್ತಿಗಳನ್ನು ಕಂಡ ನರೇಶ್‌ ಅವರು ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಸ್ವಲ್ಪ ದೂರ ಓಡಿದ್ದಾರೆ. ಓಡುವ ರಭಸದಲ್ಲಿ ಅವರು ಕೆಳಕ್ಕೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಅದು ನೇರವಾಗಿ ಅವರ ತಲೆಗೆ ಹೊಕ್ಕಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಆರಂಭವಾಗಿದೆ.
ಹಾಥರಸ್‌ ಕೇಸ್‌: ಎಫ್‌ಐಆರ್‌ ಇಲ್ಲ, ಸರ್ಕಾರದ ಪ್ರಶ್ನೆಗೆ ಉತ್ತರವೂ ಇಲ್ಲ… ತನಿಖೆಗೆ ಒಪ್ಪುತ್ತಿಲ್ಲವೆ ಸಿಬಿಐ?

ಸಾವಿರಾರು ಮಂದಿಗೆ ಊಟ ಹಾಕುವ ದಂಪತಿ ತುತ್ತು ಅನ್ನಕ್ಕೆ ಪರದಾಡಿದಾಗ… ನಡೆಯಿತೊಂದು ಪವಾಡ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty + twelve =
Remember me
