ಲಖನೌ:ತಾನು ಪ್ರೀತಿಸುತ್ತಿರುವ ಹುಡುಗಿಯೊಬ್ಬಳನ್ನು ಸ್ನೇಹಿತ ಪ್ರೀತಿಸುತ್ತಿರುವುದಾಗಿ ಹೇಳಿದ ಕಾರಣ, ಯುವಕನೊಬ್ಬ ಇಬ್ಬರನ್ನೂ ಸಾಯಿಸಲು ಪ್ರಯತ್ನಿಸಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
ಕಾಲೇಜಿಗೇ ನುಗ್ಗಿ ಸ್ನೇಹಿತನ ಮೇಲೆ ಗುಂಡುಹಾರಿಸಿದ್ದರೆ, ಮನೆಗೆ ನುಗ್ಗಿ ಯುವತಿಯ ಮೇಲೆ ಗುಂಡು ಹಾರಿಸಲಾಗಿದೆ.
ಈತನ ಈ ಕೃತ್ಯಕ್ಕೆ ಯುವತಿ ಪ್ರಾಣ ಕಳೆದುಕೊಂಡಿದ್ದರೆ, ಯುವಕ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ಇಂಥ ಒಂದು ಕೃತ್ಯ ಎಸಗಿದವನ ಹೆಸರು ಮಂಥನ್‌ ಸಿಂಗ್‌ ಸೇಂಜರ್‌. ಈತನ ಈ ಕೃತ್ಯಕ್ಕೆ ಬಲಿಯಾದವಳು 22 ವರ್ಷದ ಕೃತ್ತಿಕಾ ತ್ರಿವೇದಿ. ಎಂಎ ಮನಃಶಾಸ್ತ್ರ ವಿದ್ಯಾರ್ಥಿಯಾಗಿರುವ ಹುಕುಮೇಂದ್ರ ಗುರ್ಜರ್‌ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಝಾನ್ಸಿಯ ಬಿಕೆಡಿ ಕಾಲೇಜಿನಲ್ಲಿ ಓದುತ್ತಿರುವ ಈ ಮೂವರು ಸ್ನೇಹಿತರ ನಡುವೆ ನಡೆದ ಘಟನೆ ಇದಾಗಿದೆ. ಮಂಥನ್‌ ಸಿಂಗ್‌ ಮತ್ತು ಕೃತ್ತಿಕಾ ಸ್ನೇಹಿತರಾಗಿದ್ದರು. ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಹುಕುಮೇಂದ್ರ ಗುರ್ಜರ್‌ ತಾನು ಕೃತ್ತಿಕಾಳನ್ನು ಪ್ರೀತಿಸುತ್ತಿರುವುದಾಗಿ ಎಲ್ಲೆಡೆ ಸುದ್ದಿ ಹರಡಿದ್ದ.
ಇದರಿಂದ ಸಿಟ್ಟುಗೊಂಡ ಮಂಥನ್‌ ಸಿಂಗ್‌ ಇಬ್ಬರನ್ನೂ ಕೊಲೆ ಮಾಡುವ ಭಯಾನಕ ಯೋಚನೆ ಮಾಡಿದ್ದಾನೆ. ನಿನ್ನೆ ಮಧ್ಯಾಹ್ನ ತರಗತಿ ನಡೆಯುತ್ತಿರುವ ಸಂದರ್ಭದಲ್ಲಿಯೇ ಹುಕುಮೇಂದ್ರನ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ಅವರಿಬ್ಬರ ಮಧ್ಯೆ ಸಂಬಂಧ ಇರುವುದು ನಿಜವೇ, ಸುಳ್ಳೇ ಎಂಬುದನ್ನು ತಿಳಿಯುವ ಗೋಜಿಗೂ ಹೋಗದ ಈತ ನೇರವಾಗಿ ಕೃತ್ತಿಕಾ ಮನೆಗೆ ನುಗ್ಗಿ ಆಕೆಯ ಮೇಲೂ ಗುಂಡು ಹಾರಿಸಿದ್ದಾನೆ.
ಆರೋಪಿಯನ್ನು ಬಂಧಿಸಲಾಗಿದೆ. ಆತನಿಗೆ ಪಿಸ್ತೂಲ್‌ ವಶಪಡಿಸಿಕೊಳ್ಳಲಾಗಿದೆ. ಗಾಯಗೊಂಡಿರುವ ಹುಕುಮೇಂದ್ರನನ್ನು ಝಾನ್ಸಿಯ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಸ್‍ಎಸ್‍ಪಿ ದಿನೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ
ಮುಂದುವರೆದಿದೆ ಚಿತ್ರತಾರೆಯರ ಆತ್ಮಹತ್ಯೆಯ ಸರಣಿ: ತಮಿಳು ನಟ ನೇಣಿಗೆ ಶರಣು!

ಏನೋ ಮಾಡಲು ಹೋಗಿ ಮಾಡಬಾರದ್ದನ್ನು ಮಾಡಿ ದಿಶಾಳನ್ನು ಸಂಕಷ್ಟಕ್ಕೆ ಸಿಲುಕಿಸಿದ ಗ್ರೇಟಾ ಮಾಡಿದಳೊಂದು ಟ್ವೀಟ್‌…

ಶಿಕ್ಷಕನ ಕಾಮಪುರಾಣ: ಮೊದಲು ಎರಡು ಮದುವೆಯಾದ, ಲಾಕ್‌ಡೌನ್‌ನಲ್ಲಿ ಇನ್ನಿಬ್ಬರಿಗೆ ತಾಳಿ ಕಟ್ಟಿದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
