ಕಾರ್ಗಹಾರ್ (ಬಿಹಾರ):ಬಿಹಾರದ ಕಾರ್ಗಹಾರ್ ಶಾಸಕ ಸಂತೋಷ್ ಮಿಶ್ರಾ ಅವರ ಸೋದರಳಿಯನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.ಶಾಸಕ ಸಂತೋಷ್ ಮಿಶ್ರಾ ಸೋದರಳಿಯ ಸಂಜೀವ್ ಮಿಶ್ರಾ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿ ಬಂದ ಮೂವರು ಬಂದೂಕುಧಾರಿಗಳು ಈ ಕೃತ್ಯ ಎಸಗಿದ್ದಾರೆ. ನಿನ್ನೆ ಶನಿವಾರ ರಾತ್ರಿ ಈ ಘಟನೆ ನಡೆದಿದೆ.ಇವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ಅದರಂತೆ ಸಂಜೀವ್ ಮಿಶ್ರಾ ಅವರು ಮನೆಯಿಂದ ಹೊರಬಂದಾಗ ಅವರ ಮೇಲೆ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕೂಡಲೇ ಸಾಗಿಸಲಾಯಿತಾದರೂ ನಡುರಸ್ತೆಯಲ್ಲಿಯೇ ಅವರು ಮೃತಪಟ್ಟಿರುವುದಾಗಿ ವರದಿಯಾಗಿದೆ.ಈ ಕೊಲೆಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ. ಆದರೆ ಸಂಜೀವ್ ಮಿಶ್ರಾ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಂತೋಷ್ ಮಿಶ್ರಾ ಪರವಾಗಿ ಪ್ರಚಾರ ಮಾಡಿದ್ದರು. ಈ ಬಾರಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಸಂಜೀವ್ ಮಿಶ್ರಾ ಯೋಜನೆ ಹಾಕಿಕೊಂಡಿದ್ದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

ನಾಳೆಯಿಂದ ಸಾರ್ವಜನಿಕರಿಗೂ ಕರೊನಾ ಲಸಿಕೆ ಭಾಗ್ಯ- ಎಲ್ಲಿ? ಹೇಗೆ? ಯಾರಿಗೆ? ಇಲ್ಲಿದೆ ಮಾಹಿತಿ…
ವೇಶ್ಯೆಯ ಸಹವಾಸ ಮಾಡಿ 33 ವರ್ಷಗಳ ದಾಂಪತ್ಯ ಮುರಿದುಹೋಗಿದ್ದಾರೆ- ಒಂಟಿ ಜೀವಕ್ಕೊಂದು ದಾರಿತೋರಿ ಪ್ಲೀಸ್‌…
ಹೀಗೊಂದು ಆತ್ಮೀಯ ಬೀಳ್ಕೊಡುಗೆ: ಪೊಲೀಸ್‌ ವ್ಯಾನ್‌ನ ಬಾನೆಟ್‌ ಮೇಲೆ ಕುಳ್ಳರಿಸಿ ಊರೆಲ್ಲಾ ನಡೆಯಿತು ಮೆರವಣಿಗೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × one =
Remember me
