ಇಟಲಿ:ಮಾಲ್​ಗಳಲ್ಲಿ ಶಾಪಿಂಗ್​ ಮಾಡುವಾಗ ಹೇಗೆಲ್ಲಾ ಸೆಕ್ಸಿಯಾಗಿರಬಹುದು ಎಂದು “ಸೆಕ್ಸಿ ಶಾಪಿಂಗ್​” ಹೆಸರಿನ ಕಾರ್ಯಕ್ರಮ ನಡೆಸಿಕೊಟ್ಟ ಟಿ.ವಿ ನಿರೂಪಕಿಯೊಬ್ಬಳು ಇದೀಗ ಪೇಚಿಗೆ ಸಿಲುಕಿದ್ದಾಳೆ. ಈಕೆಯ ಜತೆಗೆ ಟಿ.ವಿ ವಿರುದ್ಧವೂ ಕೇಸ್​ ದಾಖಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.
ಇಂಥದ್ದೊಂದು ಘಟನೆ ನಡೆದಿರುವುದು ಇಟಲಿಯಲ್ಲಿ “ಸೆಕ್ಸಿ ಶಾಪಿಂಗ್​” ಎಂಬ ಕಾರ್ಯಕ್ರಮ ನಡೆಸಿಕೊಟ್ಟ ಎಮಿಲಿ ಎಂಜಾಲಿಯೋ ಎಂಬಾಕೆ, ಹೈ ಹೀಲ್ಸ್ ಮತ್ತು ಮಿನಿ-ಶಾರ್ಟ್‌ ಧರಿಸಿ, ಕೆಳಕ್ಕೆ ಏನಾದರೂ ಅಚಾನಕ್​ ಬಿದ್ದರೆ ಅದನ್ನು ಆಯ್ದುಕೊಳ್ಳಲು ಹೇಗೆ ಬಗ್ಗಬೇಕು, ಎಲ್ಲರ ಗಮನ ಸೆಳೆಯಲು ಕಾಲನ್ನು ಹೇಗೆ ಎತ್ತಬೇಕು ಇತ್ಯಾದಿಗಳ ಕುರಿತು ಮಹಿಳೆಯರಿಗೆ ಟಿಪ್ಸ್​ ನೀಡುತ್ತಿದ್ದಳು. ಡೆಟ್ಟೊ ಫಾಟೊ ಎಂಬ ಟಿ.ವಿ ಚಾನೆಲ್​ನಲ್ಲಿ ಅವಳು ಈ ಟಿಪ್ಸ್​ ನೀಡುತ್ತಿದ್ದಳು. ಜತೆಗೆ ತಾನು ಅದನ್ನು ಮಾಡಿ ತೋರಿಸುತ್ತಿದ್ದಳು.
ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಮಹಿಳೆಯರಿಗಾಗಿ ಕೆಲವೊಂದು ಟಿಪ್ಸ್​ ನೀಡುತ್ತಿದ್ದ ಎಮಿಲಿ, ಸೆಕ್ಸಿ ಶಾಪಿಂಗ್​ ಕುರಿತು ಮಾತನಾಡುತ್ತಿದ್ದಳು. ಹೈಹೀಲ್ಸ್​ ಧರಿಸಿ ಟ್ರಾಲಿ ಹಿಡಿದು ಹೊರಟಾದ ಅದರ ಅಂದವೇ ಬೇರೆ. ಅದರಲ್ಲಿಯೂ ಮಿನಿ ಡ್ರೆಸ್​ ಹಾಕಿಕೊಂಡು ಹೈಹೀಲ್ಸ್​ ಧರಿಸಿ ಹೋದರೆ ಸೆಕ್ಸಿಯಾಗಿ ಕಾಣಿಸುತ್ತೀರಿ. ಈ ರೀತಿ ಶಾಪಿಂಗ್​ ಮಾಡುವಾಗ ಎಲ್ಲರ ಕಣ್ಣೂ ನಿಮ್ಮ ಮೇಲೆಯೇ ನೆಟ್ಟಿರುತ್ತದೆ. ಅದು ನಿಮಗೆ ತುಂಬಾ ಖುಷಿಕೊಡಬಹುದು ಎಂದು ಹೇಳಿದ್ದಳು.
ಇದನ್ನೂ ಓದಿ:ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ- ಹೈಕೋರ್ಟ್​ನಿಂದ ಕಂಗನಾಗೆ ಸಿಕ್ಕಿತು ರಿಲೀಫ್​
ಒಂದು ವೇಳೆ ಏನಾದರೂ ಸಾಮಾನು ಕೆಳಕ್ಕೆ ಬಿದ್ದರೆ, ಮಿನಿಸ್ಕರ್ಟ್​ ಹಾಕಿರುವಾಗ ಬಗ್ಗುವುದು ಕಷ್ಟವಾಗಬಹುದು. ಆಗ ಬೆನ್ನನ್ನು ಕಮಾನಿನಂತೆ ಬಾಗಿಸಬೇಕು. ಆಗ ವಸ್ತುಗಳನ್ನು ಸುಲಭದಲ್ಲಿ ಎತ್ತಿಕೊಳ್ಳಬಹುದು, ಮಾತ್ರವಲ್ಲದೇ ಈ ರೀತಿ ಮಾಡಿದರೆ ನೀವು ಇನ್ನಷ್ಟು ಸೆಕ್ಸಿಯಾಗಿಯೂ ಕಾಣಿಸುತ್ತೀರಿ ಎಂದು ಸಲಹೆ ಕೊಡುತ್ತಿದ್ದಳು. ಒಂದು ಮೊಣಕಾಲನ್ನು ಇನ್ನೊಂದಕ್ಕಿಂತ ಹೆಚ್ಚು ಬಾಗಿಸಬೇಕು. ಕಾಲುಗಳನ್ನು ಮುಚ್ಚಿಡಬೇಕು. ಅದನ್ನು ಅಗಲಿಸಬಾರದು. ಇದು ಅಶ್ಲೀಲ ಎನಿಸುತ್ತದೆ ಎಂದು ಹೇಳುವ ಮೂಲಕವೂ ಕೆಲವೊಂದು ಸಲಹೆ ಕೊಟ್ಟಳು.
ಅತಿ ಎತ್ತರದಲ್ಲಿ ಏನಾದರೂ ಸಾಮಾನು ಇದ್ದರೆ ಅದನ್ನು ಮಾದಕವಾಗಿ ಹೇಗೆ ತೆಗೆಯಬಹುದು ಎಂದೂ ಅವರು ಟಿಪ್ಸ್​ ಕೊಡುತ್ತಿದ್ದಳು. ಈಕೆ ಹೇಳುತ್ತಿರುವ ಕೆಲವೊಂದು ವಿಷಯ ತೀರಾ ಅಸಭ್ಯ ಎನಿಸಿದ್ದ ಹಿನ್ನೆಲೆಯಲ್ಲಿ ಅನೇಕ ಮಂದಿ ವೀಕ್ಷಕರು ಚಾನೆಲ್​ ವಿರುದ್ಧ ದೂರು ದಾಖಲು ಮಾಡಿದ್ದರು.
ಕೂಡಲೇ ಪ್ರಸಾರಾಂಗ ವಿಭಾಗವು ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ಆದೇಶಿಸಿತು. ಈ ಕುರಿತು ಟಿ.ವಿ.ಚಾನೆಲ್​ ಮಾಲೀಕರನ್ನು ಪ್ರಶ್ನಿಸಿದಾಗ ನಿರೂಪಕಿಯು ಸ್ವ ಇಚ್ಛೆಯಿಂದ ಇದನ್ನು ಮಾಡಿದ್ದಾರೆ, ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂದರು. ಜತೆಗೆ ವೀಕ್ಷಕರ ಕ್ಷಮೆಯನ್ನೂ ಕೋರಿದರು.
ನೃತ್ಯ ಶಿಕ್ಷಕಿ ಹಾಗೂ ನರ್ತಕಿಯಾಗಿರುವ ಎಮಿಲಿ ಏಂಜೆಲ್ಲೊ ಅಸಭ್ಯ ಎನ್ನುವ ನೃತ್ಯವನ್ನು ಪ್ರದರ್ಶಿಸಿ ನಂತರ ಸೂಪರ್​ಮಾರುಕಟ್ಟೆಯ ಸೆಕ್ಸಿ ಶಾಪಿಂಗ್​ ಬಗ್ಗೆ ಮಾಹಿತಿ ನೀಡುತ್ತಿದ್ದಳು.
ಎಮಿಲಿ ಏಂಜೆಲ್ಲೊ ನಂತರ ತನ್ನ ಫೇಸ್‌ಬುಕ್ ಪುಟದಲ್ಲಿ ಕ್ಷಮೆಯಾಚಿಸಿದ್ದಾಳೆ. ‘ಮುಜುಗರಕ್ಕೆ ಒಳಗಾದ ಎಲ್ಲ ಮಹಿಳೆಯರು ನನ್ನನ್ನು ಕ್ಷಮಿಸಿ” ಎಂದು ಬರೆದುಕೊಂಡಿದ್ದಾಳೆ.
ಮುಂಬೈ ಬ್ಲಾಸ್ಟ್​ ಸಂಚುಕೋರ ಹಫೀಜ್​ ಜೈಲಲ್ಲೇ ಇಲ್ಲ! ಬಯಲಾಯ್ತು ಪಾಕ್​ ಬಣ್ಣ…

ದೀದಿಗೆ ಶಾಕ್​ ಮೇಲೆ ಶಾಕ್​: ಸಾರಿಗೆ ಸಚಿವ ಸ್ಥಾನಕ್ಕೆ ಸುವೇಂದು ರಾಜೀನಾಮೆ

ಅರ್ನಬ್​ ಗೋಸ್ವಾಮಿ ಬಂಧನ: ಸರ್ಕಾರಕ್ಕೆ ಸುಪ್ರೀಂ ತರಾಟೆ- ಹೈಕೋರ್ಟ್​ಗೂ ‘ಬುದ್ಧಿಮಾತು’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + five =
Remember me
