ಜೈಪುರ್:ದುರ್ನಡೆ ಇದ್ದ ಹಿನ್ನೆಲೆಯಲ್ಲಿ ಬಾಲಕನೊಬ್ಬನನ್ನು ಶಾಲೆಯಿಂದ ಹೊರಹಾಕಿದ ಕಾರಣಕ್ಕೆ ಈತ ಆ ಶಾಲೆಯ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಲೆ ಮಾಡಲು ಹೊರಟ ಭಯಾನಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಸಾಮಾನ್ಯವಾಗಿ ವಿದೇಶಗಳಲ್ಲಿ ಇಂಥ ಸುದ್ದಿಗಳು ವರದಿಯಾಗುತ್ತಿದ್ದವು. ಆದರೆ ಇದೀಗ ಶೂಟ್‌ಔಟ್‌ಗೆ ಪ್ರಯತ್ನಿಸಿರುವುದು ಭಾರತದಲ್ಲಿಯೇ ನಡೆದಿರುವುದು ಹಲವರನ್ನು ಆತಂಕಕ್ಕೀಡುಮಾಡಿದೆ.15 ವರ್ಷ ವಯಸ್ಸಿನ ಬಾಲಕ ಇಂಥದ್ದೊಂದು ಕೃತ್ಯ ಎಸಗಿದ್ದಾನೆ. ಈತನ ದಾಳಿಗೆ ತುತ್ತಾದ ಪ್ರಾಂಶುಪಾಲರು ಭಗವಾನ್‌ ತ್ಯಾಗಿ. ಈತ 10ನೇ ತರಗತಿಯಲ್ಲಿ ಓದುತ್ತಿದ್ದ. ಸರಿಯಾಗಿ ನಡವಳಿಕೆ ಇಲ್ಲದ್ದ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರಕ್ಕೆ ಹಾಕಲಾಗಿತ್ತು.
ಇದಾದ ಬಳಿಕ ಆತ ಏನೇನೋ ನೆಪ ಮಾಡಿ ಶಾಲೆಗೆ ಭೇಟಿ ಕೊಡುತ್ತಿದ್ದ. ಈ ವೇಳೆ ಕೂಡ ಪ್ರಾಂಶುಪಾಲರ ಕೊಠಡಿಗೆ ಹೋಗಿ ಬರುತ್ತಿದ್ದ. ಇದೀಗ ಪಿಸ್ತೂಲ್‌ ತೆಗೆದುಕೊಂಡು ಹೋಗಿ ಕೊಲೆ ಮಾಡುವ ಯತ್ನ ಮಾಡಿದ್ದಾನೆ.
ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಾಲ ನ್ಯಾಯ ಕಾಯ್ದೆಯಡಿ ಬಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚೆಚ್ಚು ಗ್ರಾಹಕರನ್ನು ಕರೆತನ್ನಿ, ಪುಕ್ಕಟೆ ಹಣ ಮಾಡಿ… ಮಹಿಳೆಯೊಬ್ಬಳ ಭಯಾನಕ ಸ್ಕೀಂಗೆ 24 ಮಂದಿ ವಿಲವಿಲ…

ಭಾಷಣದ ವೇಳೆ ಲೇಡಿ ಪಿಎಸ್‌ಐ ಗುಸುಗುಸು, ತಿರುಗಾಟ- ಸಿಎಂ ಗರಂ, ನಿಮ್ಮ ಅಗತ್ಯವಿಲ್ಲ, ಹೋಗಿ ಎಂದು ತರಾಟೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
