ದಾವಣಗೆರೆ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75 ನೇ ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮದಿಂದಾಗಿ ಇದು ಹಿಂದೆಂದೂ ರೀತಿಯಲ್ಲಿ ಆಗದಂಥ ಟ್ರಾಫಿಕ್​ ಸಮಸ್ಯೆ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ 15 ಕಿಮೀ ಜಾಮ್ ಆಗಿದೆ. ನಿಂತ ಜಾಗದಲ್ಲೇ ವಾಹನಗಳು ನಿಂತಿದ್ದು, ಸವಾರರು ಪರದಾಡುವಂತಾಗಿತ್ತು.
ಈ ಟ್ರಾಫಿಕ್​ ಕಿರಿಕಿರಿಯಿಂದ ಖುದ್ದು ಸಂಸದ ರಾಹುಲ್​ ಗಾಂಧಿಯವರು ಬಳಲುವಂತಾಗಿತ್ತು. ರಾಷ್ಟ್ರೀಯ ಹೆದ್ದಾರಿ ಮಾತ್ರವಲ್ಲದೆ, ದಾವಣಗೆರೆ ನಗರದ ಮಧ್ಯಭಾಗ, ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಬಳಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಾಜ್ಯದ ವಿವಿಧ ಭಾಗದಿಂದ ಕಾರ್ಯಕ್ರಮಕ್ಕೆ ಬರುತ್ತಿರುವ ವಾಹನಗಳು ದಾವಣಗೆರೆ ನಗರದ ಮೂಲಕ ಆಗಮಿಸಿದ್ದರಿಂದ ಹಾಗೂ ನಗರದ ಹೋಟೆಲ್‌ಗಳಲ್ಲಿ ಉಳಿದಿದ್ದವರು ಒಂದೇ ಸಮಯಕ್ಕೆ ಕಾರ್ಯಕ್ರಮಕ್ಕೆ ಹೊರಟಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್​ ಜಾಮ್​ನಿಂದ ದಾವಣಗೆರೆಯಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು, ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿತ್ತು. ಇದರ ಬಿಸಿ ರಾಹುಲ್​ ಗಾಂಧಿಯವರಿಗೂ ತಟ್ಟಿತು.
ಇವೆಲ್ಲವನ್ನೂ ಮೀರಿ ಕೊನೆಗೂ ಸಂಸದ ರಾಹುಲ್​ ಗಾಂಧಿ ವೇದಿಕೆಗೆ ಆಗಮಿಸಿದ್ದಾರೆ. ನಿಗದಿತ ಅವಧಿಗಿಂತ ಟ್ರಾಫಿಕ್​ ಸಮಸ್ಯೆಯಿಂದಾಗಿ ವೇದಿಕೆಗೆ ಬರುವುದು ತುಸು ಹೆಚ್ಚೇ ವಿಳಂಬವಾದರೂ ಅಭಿಮಾನಿಗಳು ಜೈಜೈಕಾರ ಹಾಕಿ ಅವರನ್ನು ಬರಮಾಡಿಕೊಂಡಿದ್ದಾರೆ. ಜತೆಗೆ ರಾಹುಲ್​ ಗಾಂಧಿಯವರಿಗೆ ಕಾಂಗ್ರೆಸ್​ ನಾಯಕರು ಅದ್ಧೂರಿಯಾಗಿ ಸ್ವಾಗತಿಸಿದರು. ಬುದ್ಧನ ಬೆಳ್ಳಿ ಪ್ರತಿಮೆಯನ್ನು ನೀಡಿ ರಾಹುಲ್​ ಗಾಂಧಿಯವರನ್ನು ಬರಮಾಡಿಕೊಂಡರು. ರಾಹುಲ್ ಆಗಮಿಸಿದ್ದಂತೆ ಅವರ ಅಭಿಮಾನಿಗಳು ಮುತ್ತುವರಿದ ಹಿನ್ನೆಲೆಯಲ್ಲಿ, ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ಮಾಡಬೇಕಾಯಿತು.
ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಕುರಿತಾದ ಪುಸ್ತಕದ ಬಿಡುಗಡೆ ಸಮಾರಂಭವೂ ನಡೆಯುತ್ತಿದೆ.ಸಿದ್ದರಾಮೋತ್ಸವದ ನೇರ ಪ್ರಸಾರವನ್ನು ಇಲ್ಲಿ ನೋಡಬಹುದು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + three =
Remember me
