ಅಮೃತ್​ಸರ:ಇನ್ನೇನು ಪಂಜಾಬ್‌ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮತದಾರರನ್ನು ಓಲೈಸಲು ಎಲ್ಲಾ ಪಕ್ಷಗಳು ಕೊನೆಯ ಕ್ಷಣಗಳ ಕಸರತ್ತು ನಡೆಸುತ್ತಿವೆ. ಇದಾಗಲೇ ಕಾಂಗ್ರೆಸ್‌ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೆ. ಹಾಲಿ ಮುಖ್ಯಮಂತ್ರಿ ಚರಂಜಿತ್​ ಸಿಂಗ್​ ಚನ್ನಿ ಅವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್‌ ಘೋಷಿಸುವ ಮೂಲಕ, ಈ ಖುರ್ಚಿಯ ಮೇಲೆ ಭಾರಿ ಕಣ್ಣಿಟ್ಟಿದ್ದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಕೆಂಡಾಮಂಡಲ ಆಗುವಂತೆ ಮಾಡಿದೆ.
ಈ ನಡುವೆಯೇ ಸಿಧು ಅವರ ಮಗಳು ರುಬಿಯಾ ಹೇಳಿಕೆಯೊಂದನ್ನು ನೀಡಿದ್ದು, ಇದೀಗ ಈ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಚಾರ ಸಮಯದಲ್ಲಿ ಹಾಲಿ ಸಿಎಂ ಚನ್ನಿ ಅವರನ್ನು ಪರೋಕ್ಷವಾಗಿ ತಿವಿಯುತ್ತಲೇ ತಂದೆಯ ಪರವಾಗಿ ಮಾತನಾಡಿದ್ದಾರೆ. ಇದೇ ವೇಳೆ, ತಂದೆ ಗೆಲ್ಲುವವರೆಗೂ ತಾನು ಮದುವೆ ಆಗುವುದಿಲ್ಲ ಎಂದು ರುಬಿಯಾ ತಿಳಿಸಿದ್ದಾರೆ.
ಪಂಜಾಬ್ ಸದ್ಯ ಕೆಟ್ಟ ಪರಿಸ್ಥಿತಿಯಲ್ಲಿದೆ. ರಾಜ್ಯವನ್ನು ಉಳಿಸುವ ಏಕೈಕ ವ್ಯಕ್ತಿ ಎಂದರೆ ಅದು ನನ್ನ ತಂದೆ ಮಾತ್ರ. ಆದರೆ ಅವರನ್ನು ರಾಜಕೀಯ ವಿರೋಧಿಗಳು ತುಳಿಯಲು ಪ್ರಯತ್ತಿಸುತ್ತಿದ್ದಾರೆ. ಇಲ್ಲಿನ ಡ್ರಗ್​ ಮಾಫಿಯಾ ಮತ್ತು ಮರಳು ಮಾಫಿಯಾ ಕೊನೆಗಣಿಸಲು ಪ್ರಯತ್ನಿಸುತ್ತಿರುವ ನಮ್ಮ ತಂದೆ ವಿರುದ್ಧ ಷಡ್ಯಂತ್ರ ರಚಿಸಲಾಗುತ್ತಿದೆ. ಅವರು ತುಂಬಾ ಪ್ರಾಮಾಣಿಕ ವ್ಯಕ್ತಿ ಎಂದು ರುಬಿಯಾ ಹೇಳಿದ್ದಾರೆ.

ಕಾಂಗ್ರೆಸ್​ ಸಿಎಂ ಅಭ್ಯರ್ಥಿಯಾಗಿರುವ ಚರಂಜಿತ್​ ಸಿಂಗ್​ ಚನ್ನಿ ಬಡವರು ಎಂದು ಬಣ್ಣಿಸಲಾಗುತ್ತಿದೆ. ಆದರೆ ಅವರ ಬ್ಯಾಂಕ್‌ ಖಾತೆ ಪರಿಶೀಲಿಸಿದರೆ 133 ಕೋಟಿಗೂ ಅಧಿಕ ಹಣ ಪತ್ತೆಯಾಗಲಿದೆ ಎಂದು ಹರಿಹಾಯ್ದಿರುವ ರುಬಿಯಾ, ಹಣದ ಕೊರತೆಯಿಂದ ಮಗಳ ಮದುವೆ ಆಗುವುದಿಲ್ಲ ಎಂದು ನನ್ನ ತಂದೆ ಸಿಧು ಭಾವನಾತ್ಮಕವಾಗಿ ಹೇಳಿದ್ದರು. ಆದರೆ ಈಗ ನಾನು ಹೇಳುತ್ತಿದ್ದೇನೆ ಕೇಳಿ.. ತಂದೆಯ ಗೆಲುವಿನ ಬಳಿಕವೇ ನಾನು ಮದುವೆಯಾಗುತ್ತೇನೆ ಎಂದಿದ್ದಾರೆ.
ಕಳೆದ 14 ವರ್ಷಗಳಿಂದ ಪಂಜಾಬ್‌ಗಾಗಿ ತನ್ನ ತಂದೆ ಕೆಲಸ ಮಾಡುತ್ತಿದ್ದಾರೆ, ಅವರು ರಾಜ್ಯಕ್ಕೆ ಹೊಸ ಮಾದರಿಯನ್ನು ರಚಿಸುತ್ತಿದ್ದಾರೆ. ಅವರನ್ನು ಗೌರವಿಸಬೇಕು. ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ, ಆದರೆ ಇತರ ರಾಜಕಾರಣಿಗಳು ಹಣದ ಆರೋಪಕ್ಕೆ ಒಳಗಾಗುವುದು ಸಾಮಾನ್ಯವಾಗಿದೆ ಎಂದರು.
ಸಂಸ್ಕೃತದಲ್ಲಿ ಐದು ಚಿನ್ನ ಗೆದ್ದ ಮುಸ್ಲಿಂ ಯುವತಿ: ಶ್ಲೋಕ, ಸರಸ್ವತಿ- ಗಾಯತ್ರಿ ಮಂತ್ರಗಳಲ್ಲಿ ನಿಪುಣೆ

VIDEO: ‘ಏಯ್‌… ವಿಡಿಯೋ ಮತ್ ಕರ್…’ ತಲೆಗೆ ಕೇಸರಿ ಶಾಲು ಧರಿಸಿದವರಾರು? ಕಿಚ್ಚು ಹೊತ್ತಿಸಿದ ವೈರಲ್‌ ವಿಡಿಯೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − four =
Remember me
