ಲುಧಿಯಾನಾ ​(ಪಂಜಾಬ್​):ಖ್ಯಾತ ಕ್ರಿಕೆಟಿಗನಾಗಿ, ಹಾಸ್ಯಗಾರನಾಗಿ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಪಂಜಾಬ್ ಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಈಗ ಜೈಲುಪಾಲಾಗಿದ್ದು, ಇಲ್ಲಿ ಹೊಸ ಹುದ್ದೆ ಸಿಕ್ಕಿದೆ.
34 ವರ್ಷದ ಹಿಂದಿನ ರಸ್ತೆ ಅಪಘಾತ ಪ್ರಕರಣದಲ್ಲಿ ಸಿಧುಗೆ ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. 1988ರಲ್ಲಿ ನಡೆದ ರಸ್ತೆ ಗಲಾಟೆ ಪ್ರಕರಣದಲ್ಲಿ ನವಜೋತ್​ ಸಿಂಗ್​ ಸಿಧು ಅಪರಾಧಿ ಎಂದು ಪರಿಗಣಿಸಿ ಜೈಲು ಶಿಕ್ಷೆ ವಿಧಿಸಿದೆ. ರಸ್ತೆ ಬದಿ ಪಾರ್ಕಿಂಗ್​ ವಿಚಾರದಲ್ಲಿ ಗುರ್ನಾಮ್​ ಸಿಂಗ್​ ಎಂಬುವವನಿಗೆ ಸಿಧು ಥಳಿಸಿದ್ದರು. ತೀವ್ರ ಹಲ್ಲೆಗೊಳಗಾದ ಈತ ಮೃತಪಟ್ಟಿದ್ದ. ಈ ಘಟನೆಯಲ್ಲೀಗ ಒಂದು ವರ್ಷ ಜೈಲುಶಿಕ್ಷೆಯಾಗಿದೆ.
ಅಪರಾಧಿಗಳಿಗೆ ಜೈಲಿನಲ್ಲಿ ಅವರ ಶಿಕ್ಷೆಯ ಪ್ರಮಾಣ ಹಾಗೂ ಅರ್ಹತೆ ಆಧಾರದ ಮೇಲೆ ಕೆಲಸ ನೀಡಲಾಗುತ್ತದೆ. ಇದೀಗ ಸಿಧುಗೆ ಜೈಲಿನ ಕಡತಗಳ ಖಾತೆಯನ್ನು ನೋಡಿಕೊಳ್ಳುವ ಗುಮಾಸ್ತನ ಕಾರ್ಯ ನೀಡಲಾಗಿದೆ. ಅವರ ಕೆಲಸಕ್ಕೆ ಸಂಬಂಧಿಸಿದ ಎಲ್ಲ ಫೈಲ್‌ಗಳನ್ನು ಅವರ ಬ್ಯಾರಕ್‌ಗೆ ಕಳುಹಿಸಲಾಗುತ್ತದೆ. ಒಂದು ದಿನದಲ್ಲಿ ಎಷ್ಟು ಕೆಲಸ ಮಾಡಬಲ್ಲರು ಎಂಬುದರ ಮೇಲೆ ಕಡತಗಳ ರವಾನೆ ಅವಲಂಬಿತವಾಗಿರುತ್ತದೆ.
ಮೊದಲ ಮೂರು ತಿಂಗಳವರೆಗೆ ಅವರನ್ನು ಟ್ರೈನಿಯಾಗಿ ಉಳಿಸಿಕೊಳ್ಳಲಾಗುತ್ತದೆ. ಅದರಲ್ಲಿ ಅವರಿಗೆ ವೇತನ ಸಿಗುವುದಿಲ್ಲ. ಈ ಮೊದಲು ಅವರಿಗೆ ಜೈಲಿನೊಳಗೆ ಕಾರ್ಖಾನೆ ಅಥವಾ ಪೀಠೋಪಕರಣಗಳ ಕೆಲಸವನ್ನು ನೀಡುವ ನಿರೀಕ್ಷೆ ಇದೆ. ಆದರೆ, ಅರ್ಹತೆ ಮತ್ತು ಶಿಕ್ಷಣದ ಜೊತೆಗೆ ಅವರ ಸುರಕ್ಷತೆಯ ಕಾರಣ ಈ ಕೆಲಸದಿಂದ ದೂರ ಇಡಲಾಗಿದೆ ಎಂದು ಮೂಲಗಳು ಹೇಳಿವೆ.
VIDEO: ಸಂವಿಧಾನದ ರಾಷ್ಟ್ರ ಎಂದ್ರೆ ದೇಶ ಅಲ್ಲ ಎಂದ ರಾಹುಲ್​: ಲಂಡನ್​ನಲ್ಲಿ ಅಧಿಕಾರಿಯಿಂದ ನಾಯಕನಿಗೆ ಪಾಠ!

VIDEO: ಕಾಂಗ್ರೆಸ್​ನಲ್ಲಿ ಭಾರಿ ಅಲ್ಲೋಲ ಕಲ್ಲೋಲ: ಕೈಗೆ ಬೈಬೈ ಹೇಳಿದ ಮಾಜಿ ಸಚಿವ ಕಪಿಲ್​ ಸಿಬಲ್​!

‘ಧೈರ್ಯಕ್ಕೆ ದುರ್ಗೆ, ಶಕ್ತಿಗೆ ಪಾರ್ವತಿ, ವಿದ್ಯೆಗೆ ಸರಸ್ವತಿ, ಆದ್ರೆ ಕಾಂಗ್ರೆಸ್​ನಲ್ಲಿ ಬೇನಾಮಿ ಅಧ್ಯಕ್ಷೆ ‘ಲಕ್ಷ್ಮಿ’ಗೆ ಮಾತ್ರ ಗೌರವ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 7 =
Remember me
