ಗುವಾಹಟಿ:ಕೆಲವರ ಅಂದ ಚೆಂದದ ಬರವಣಿಗೆಗಳು ವೈರಲ್​ ಆಗುವುದು ಇದೆ. ಆದರೆ ಯಾರದ್ದಾದರೂ ಸಹಿ ವೈರಲ್​ ಆಗಿರುವುದನ್ನು ನೋಡಿದ್ದೀರಾ?
ಅಂಥದ್ದೊಂದು ಅಚ್ಚರಿಯೂ ನಡೆದಿದೆ. ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿ ಸಹಿ ವೈರಲ್ ಆಗಿದ್ದು, ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ.
ನೆಟ್ಟಿಗರೊಬ್ಬರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, ಅದು ಸಕತ್​ ವೈರಲ್​ ಆಗಿದೆ.
ಗುವಾಹಟಿಯ ವೈದ್ಯಕೀಯ ಕಾಲೇಜಿನ ಮೂಳೆ ಚಿಕಿತ್ಸಾ ವಿಭಾಗದ ರಿಜಿಸ್ಟ್ರಾರ್‌ ಸಹಿ ಇದಾಗಿದೆ. ಅಷ್ಟಕ್ಕೂ ಈ ಸಹಿ ಇಷ್ಟೆಲ್ಲಾ ವೈರಲ್​ ಆಗಲು ಕಾರಣ, ಈ ಸಹಿ ಮುಳ್ಳುಹಂದಿಯಂತೆ ಕಾಣುತ್ತಿದೆ ಎಂದು. ಈ ಸಹಿಯ ಜತೆಗೆ ಮುಳ್ಳುಹಂದಿಯ ಫೋಟೋ ಕೂಡ ಜಾಲತಾಣದಲ್ಲಿ ಸಕತ್​ ಸುದ್ದಿ ಮಾಡುತ್ತಿದೆ.
ಈ ಫೋಟೋವನ್ನು ನಾನು ತೆಗೆದಿದ್ದೇನೆ. ನಾನು ಇಲ್ಲಿಯವರೆಗೆ ವಿಶಿಷ್ಟ ಸಹಿಗಳನ್ನು ನೋಡಿದ್ದೇನೆ. ಆದರೆ ಇದೇ ಬೆಸ್ಟ್ ಸಿಗ್ನೇಚರ್ ಆಗಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಈ ಸಹಿಯ ಕೆಳಗೆ 2022 ಮಾರ್ಚ್ 4 ಎನ್ನುವ ದಿನಾಂಕ ಇರುವುದನ್ನು ನೋಡ ಬಹುದಾಗಿದೆ.
ಈ ಸಹಿಯನ್ನ ಕಂಡ ನೆಟ್ಟಿಗರು ವಿವಿಧ ರೀತಿಯ ಕಾಮೆಂಟುಗಳನ್ನ ಮಾಡುತ್ತಿದ್ದಾರೆ. ಇಬ್ಬ ಬಳಕೆದಾರ, ಇದು ಥೇಟ್ ಮುಳ್ಳುಹಂದಿಯಂತೆ ಕಾಣುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕೈಲಾಸದಲ್ಲಿಯೂ ನಿತ್ಯಾನಂದ ಲೈಂಗಿಕ ದೌರ್ಜನ್ಯ? ವಿದೇಶಿ ಶಿಷ್ಯೆಯಿಂದ ಮೇಲ್​ ಮೂಲಕ ದೂರು ದಾಖಲು!

ಹಿಂದೂಗಳಿಂದ ಮೀನು ಖರೀದಿಸಬೇಡಿ ಎಂದಾಗ ಎಲ್ಲಿ ಹೋಗಿತ್ತು ಈ ಸಾಮರಸ್ಯ? ಗರಂ ಆಗಿದೆ ಜಾಲತಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + five =
Remember me
