ಜೋಧಪುರ (ರಾಜಸ್ಥಾನ):ಕರೊನಾದಿಂದಾಗಿ ಆರ್ಥಿಕವಾಗಿ ಹಿಂಜರಿತವಾಗಿದೆ, ಜನರು ಬಡವರಾಗಿರುವುದು ಒಂದೆಡೆಯಾದರೆ, ಚಿನ್ನಾಭರಣಗಳ ಅಂಗಡಿಯನ್ನು ನೋಡಿದರೆ, ನಿಜಕ್ಕೂ ಹೀಗಾಗಿದ್ದು ಹೌದಾ ಎನ್ನುವಂತ ಪರಿಸ್ಥಿತಿ ಇನ್ನೊಂದೆಡೆ. ಚಿನ್ನ, ಬೆಳ್ಳಿಯ ಬೆಲೆಗಳು ದಿನೇ ದಿನೇ ಏರುತ್ತಿದ್ದರೂ ಅದನ್ನುಕೊಳ್ಳುವವರ ಸಂಖ್ಯೆಯೂ ಅದೇ ರೀತಿ ಏರುತ್ತಲೇ ಇದೆ ಎನ್ನುತ್ತದೆ ಅಂಕಿಅಂಶ.
ಅದಕ್ಕೊಂದು ಉದಾಹರಣೆ ರಾಜಸ್ಥಾನದ ಜೋಧಪುರ. ಇಲ್ಲಿಯ ವ್ಯಾಪಾರಿಯೊಬ್ಬರು ವಧು- ವರರಿಗಾಗಿ ಬೆಳ್ಳಿಯಿಂದ ತಯಾರಿಸಿರುವ ಶೂಸ್‌, ಪರ್ಸ್‌, ಬೆಲ್ಟ್‌ಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಜೋಧಪುರ ಎಂದರೆ ಇದು ಅದ್ಧೂರಿ ಮದುವೆಗಳ ತಾಣ. ಇದೇ ಕಾರಣಕ್ಕೆ ಇಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಶ್ರೀಮಂತರು ಮದುವೆ ಮಾಡಿಕೊಳ್ಳುತ್ತಾರೆ. ಇದೀಗ ಇಲ್ಲಿ ಮದುವೆಯ ಸೀಜನ್‌ ಇರುವ ಕಾರಣ ಇಂಥದ್ದೊಂದು ಹೊಸ ಸಾಹಸಕ್ಕೆ ಕೈಹಾಕಿದ್ದಾರೆ ಇಲ್ಲಿಯ ಆಭರಣ ವ್ಯಾಪಾರಿ ನವೀನ್​ ಸೋನಿ.
ಪುರುಷರು ಧರಿಸುವ ಬೆಲ್ಟ್‌ನಲ್ಲಿ ಹಾಗೂ ಶೂಸ್‌ನಲ್ಲಿ 200-300 ಗ್ರಾಂ ಬೆಳ್ಳಿ ಬಳಸಲಾಗಿದ್ದು, ಮೊಬೈಲ್‌ ಫೋನ್‌ ಇಟ್ಟುಕೊಳ್ಳಬಹುದಾದ ಪರ್ಸ್​ಗಳಲ್ಲಿ 500 ಗ್ರಾಂ ಬೆಳ್ಳಿ ಬಳಸಲಾಗಿದೆ.   ಬೆಲೆ 16ರಿಂದ 17 ಸಾವಿರದವರೆಗೆ ಇದ್ದು, ಪರ್ಸ್​ ಬೆಲೆ 30 ಸಾವಿರ ಇದೆ.
ಅಚ್ಚರಿಯ ವಿಷಯವೆಂದರೆ, ಇದು ವಧು-ವರರಿಗೆ ಮಾತ್ರವಲ್ಲದೇ ಮುಂದೆ ಮದುವೆಯಾಗುವ ಯುವತಿ-ಯುವಕರಿಗೂ ತುಂಬಾ ಇಷ್ಟವಾಗಿದ್ದು, ಇದನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ. ಈ ಪರಿಯ ಬೇಡಿಕೆ ಬಂದಿರುವುದನ್ನು ಕಂಡು ಖುದ್ದು ಅಚ್ಚರಿಗೊಂಡಿರುವ ವ್ಯಾಪಾರಿ, ಇದರಿಂದ ಉತ್ತೇಜಿತರಾಗಿ ಇನ್ನಷ್ಟು ಬೆಳ್ಳಿ ಸಾಮಗ್ರಿ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಬಾಡಿಗೆ ಮನೆ ಕೇಳಿ ಬಲೆ ಬೀಸಿದ್ದ ಎಸಿಬಿ ಅಧಿಕಾರಿಗಳು: ಶಿವಮೊಗ್ಗದ ಕೃಷಿ ಅಧಿಕಾರಿಯ ಬೇಟೆಯಾಡಿದ್ದೇ ರೋಚಕ

ಮದುವೆ ಮನೆಯ ಅಬ್ಬರದ ಸಂಗೀತಕ್ಕೆ, ಪಟಾಕಿ ಶಬ್ದಕ್ಕೆ ಕೋಳಿಗಳ ಸಾವು! ವಧುವಿನ ಮನೆಯವರ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 6 =
Remember me
