ಸಿಂಗಪುರ:ಪ್ರಧಾನಿ ವಿರುದ್ಧ ಅವಹೇಳನಕಾರಿ ಟ್ವೀಟ್​ ಮಾಡಿರುವ ಬ್ಲಾಗರ್​ ಒಬ್ಬರಿಗೆ 1ಲಕ್ಷ ರೂಪಾಯಿ ಸಿಂಗಪುರ ಡಾಲರ್​ (ಅಂದರೆ ಸುಮಾರು 54 ಲಕ್ಷ ರೂಪಾಯಿ) ದಂಡ ವಿಧಿಸಿ ಸಿಂಗಪುರ ಕೋರ್ಟ್​ ಆದೇಶಿಸಿದೆ, ಈ ಹಣವನ್ನು ಪರಿಹಾರದ ರೂಪದಲ್ಲಿ ಪ್ರಧಾನಿಯವರಿಗೆ ನೀಡುವಂತೆ ಕೋರ್ಟ್​ ಹೇಳಿದೆ.
2018ರ ಕೇಸ್​ ಇದಾಗಿದೆ. ಪ್ರಧಾನಿ ಲೀ ಸೀನ್ ಲೂಂಗ್ ವಿರುದ್ಧ ಅವಹೇಳನಕಾರಿ ಪೋಸ್ಟ್​ ಮಾಡಿದ್ದ ಆರ್ಥಿಕ ಸಲಹೆಗಾರ ಲಿಯಾಂಗ್ ಶೆ ಹಿಯಾನ್ ಅವರಿಗೆ ಈ ಭಾರಿ ದಂಡ ವಿಧಿಸಲಾಗಿದೆ. ಇವರ ವಿರುದ್ಧ ಪ್ರಧಾನಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.
ಮಲೇಷ್ಯಾದ ರಾಜ್ಯ ನಿಧಿಯಲ್ಲಿ ನಡೆದ ಹಣಕಾಸಿನ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಯನ್ನು ಉಲ್ಲೇಖಿಸಿ ಲಿಯಾಂಗ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದರ ವಿರುದ್ಧ ಪ್ರಧಾನಿ ಕೇಸ್​ ದಾಖಲು ಮಾಡಿದ್ದರು.
ಈ ಪೋಸ್ಟ್​ನಿಂದ ತಮಗೆ ಎಡವಟ್ಟು ಆಗುತ್ತಿದೆ ಎಂದು ತಿಳಿದ ತಕ್ಷಣ ಮೂರು ದಿನಗಳ ಬಳಿಕ ಲಿಯಾಂಗ್ ಫೇಸ್‌ಬುಕ್ ಪೋಸ್ಟ್ ಅಳಿಸಿ ಹಾಕಿದ್ದರು. ಆದರೆ ಅದರ ಸ್ಕ್ರೀನ್​ಷಾಟ್​ ಇಟ್ಟುಕೊಂಡಿದ್ದ ಪ್ರಧಾನಿ ಕೇಸ್​ ದಾಖಲು ಮಾಡಿದ್ದರು.
ಲಿಯಾಂಗ್ ಹಂಚಿಕೊಂಡ ಸುದ್ದಿ ಪ್ರಧಾನಿ ಅವರು ಗಂಭೀರ ಹಾಗೂ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬುದನ್ನು ಸೂಚಿಸುವಂತಿದೆ ಎಂದ ನ್ಯಾಯಮೂರ್ತಿ ಎದಿತ್ ಅಬ್ದುಲ್ಲಾ ಅವರು, ದಂಡ ವಿಧಿಸಿದ್ದಾರೆ. ಲಿಯಾಂಗ್ ಅವರ ಪೋಸ್ಟ್‌ಗೆ ಒಟ್ಟು 45 ಜನರು ಪ್ರತಿಕ್ರಿಯಿಸಿದ್ದರು.
ಕಾಂಗ್ರೆಸ್ ಮುಖಂಡನ ಬರ್ತಡೇ ಪಾರ್ಟಿಯಲ್ಲಿ ಗಾಳಿಯಲ್ಲಿ ಗುಂಡು: ಇಬ್ಬರ ಬಂಧನ

ಹಿಂದೂ ಹುಡುಗಿ ಬೇಕು, ಈ ಸಂಪ್ರದಾಯನಂತೆ ಮದುವೆಯಾಗುವೆ ಎಂದ ಪಪ್ಪು: ನಡೆಯಿತು ಅದ್ಧೂರಿ ವಿವಾಹ

ಪೊಲೀಸರಿಗೆ ₹200 ದಂಡ ಕೊಡದೇ ವಕೀಲರಿಗೆ ₹10 ಸಾವಿರ ಫೀಸ್‌ ಕೊಟ್ಟು ಕೇಸ್‌ ಗೆದ್ದ ಉದ್ಯಮಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − three =
Remember me
