ಸಿಂಗಪುರ:ಮಹಾ ಕಳ್ಳಿಯೊಬ್ಬಳಿಗೆ ಕಳ್ಳತನ ಆರೋಪದಿಂದ ಬಿಡುಗಡೆ ಮಾಡಲು ತನ್ನ ಜತೆ ಲೈಂಗಿಕ ಕ್ರಿಯೆಗೆ ಬಾ ಎಂದು ಕರೆದಿದ್ದ ಸಿಂಗಪುರದ ಭಾರತೀಯ ಮೂಲದ ಪೊಲೀಸ್​ ಇದೀಗ ಪೇಚಿಗೆ ಸಿಲುಕಿದ್ದಾನೆ.
ಅಂಗಡಿಯೊಂದರಲ್ಲಿ ದರೋಡೆಯಾಗಿತ್ತು. ಇದರ ಜತೆಗೆ ಕ್ರೆಡಿಟ್‌ ಕಾರ್ಡ್‌ ದುರುಪಯೋಗ ಪ್ರಕರಣವೂ ದಾಖಲಾಗಿತ್ತು. ಈ ಬಗ್ಗೆ ಮಳಿಗೆಯ ಮಾಲೀಕ ಪೊಲೀಸ್​ ಕಂಪ್ಲೇಂಟ್​ ನೀಡಿದ್ದ.
ತನಿಖೆ ಕೈಗೊಂಡ ಪೊಲೀಸರಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂತು. 32 ವರ್ಷದ ಮಹೇಂದ್ರನ್ ಸೆಲ್ವರಾಜು ಈ ಪ್ರಕರಣದ ತನಿಖೆ ಕೈಗೊಂಡಿದ್ದ. ಕಳ್ಳತನದಲ್ಲಿ ಭಾಗಿಯಾಗಿದ್ದ ಮಹಿಳೆಯನ್ನು ನೋಡಿದ ಈ ಪೊಲೀಸ್​ ಮಹಾಶಯ, ನನಗೆ ಲೈಂಗಿಕ ಸಹಕಾರ ನೀಡು, ನನ್ನ ಜತೆ ಮಲಗಿದರೆ ನಿನ್ನ ಮೇಲಿರುವ ಕಳ್ಳತನದ ಆರೋಪದಿಂದ ಮುಕ್ತಿ ಮಾಡುವೆ ಅಂದಿದ್ದಾನೆ.
ಇದನ್ನೂ ಓದಿ:ನುಗ್ಗೇಕಾಯಿಯನ್ನು ಹ್ಯಾಷ್​ಟ್ಯಾಗ್​ ಮಾಡಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದೇಕೆ?
ಇದನ್ನು ಕೇಳಿ ಮಹಿಳೆ ಕೆಂಡಾಮಂಡಲ ಆಗಿದ್ದಾಳೆ. ಈತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ಕೈಗೆತ್ತಿಕೊಂಡಿದ್ದ ಉನ್ನತಾಧಿಕಾರಿಗಳು ಈತ ಆಕೆಗೆ ಆಫರ್​ ನೀಡಿರುವುದು ತಿಳಿದುಬಂದಿದೆ. ಮಾತ್ರವಲ್ಲದೇ, ಈತನ ವಿರುದ್ಧ ಕೆದಕುತ್ತಾ ಹೋದಂತೆ ಕೆಲ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವುದೂ ತಿಳಿದುಬಂದಿದೆ. ಅಷ್ಟೇ ಅಲ್ಲದೇ, ಮಹಿಳೆಯೊಬ್ಬರ ವಿಡಿಯೋಗಳನ್ನು ಅವರ ಲ್ಯಾಪ್‌ಟಾಪ್‌‌ನಿಂದ ಕಾಪಿ ಮಾಡಿಕೊಳ್ಳುವ ಮೂಲಕ ಆಕೆಗೂ ವಂಚಿಸಿದ್ದ ಎಂದು ಗೊತ್ತಾಗಿದೆ. ’
ಮಹಿಳೆಯನ್ನು ಮಂಚಕ್ಕೆ ಕರೆದು, ತನ್ನ ಹಿಂದಿನ ಇದ್ದ ಬಿದ್ದ ಎಲ್ಲಾ ಕೆಟ್ಟ ಕೆಲಸಗಳನ್ನೂ ಬಹಿರಂಗಗೊಳಿಸಿದ ಈ ಪೊಲೀಸ್​ ಈಗ ಕೆಲಸ ಕಳೆದುಕೊಂಡಿದ್ದಾನೆ. ಮಾತ್ರವಲ್ಲದೇ ಈತನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಹಣ ಗುಳುಂ ಮಾಡೋದೆಂದ್ರೆ ಇದೇನಾ? ಲಂಚದ ಡುಡ್ಡನ್ನು ತಿಂದ ಕಾನ್ಸ್​ಟೆಬಲ್​- ಆದದ್ದೇ ಬೇರೆ…

ಭಾರತದ ಉಪಗ್ರಹಗಳ ಮೇಲೂ ಚೀನಾದಿಂದ ಅಟ್ಯಾಕ್​: 142 ಪುಟಗಳಲ್ಲಿದೆ ಭಯಾನಕ ಸತ್ಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + 17 =
Remember me
