ಅಹಮಾದಾಬಾದ್:ನನಗೆ ಗೊತ್ತು, ವಿಷಯ ಬಹಿರಂಗವಾಗಿ ಹೇಳಿದರೆ ಭಯಾನಕ ಟೀಕೆ ಎದುರಿಸಬೇಕಾಗುತ್ತದೆ, ಎಲ್ಲರೂ ನನ್ನ ನೋಡುವ ದೃಷ್ಟಿಯೇ ಬದಲಾಗುತ್ತದೆ, ಕೆಲವರು ಅಸಹ್ಯವಾಗಿಯೂ ನೋಡಬಹುದು. ಆದರೂ ನಾನು ನಿಜ ಹೇಳುತ್ತಿದ್ದೇನೆ. ಒಂದಲ್ಲೊಂದು ದಿನ ಸಮಾಜದ ಮುಂದೆ ಇದು ಬರಲೇಬೇಕು, ಆದ್ದರಿಂದ ಯಾವುದೇ ಅಳುಕಿಲ್ಲದೇ ಹೇಳುತ್ತಿದ್ದೇನೆ…
ಹೀಗೆ ಹೇಳಿದವರು ಗುಜರಾತಿನ 26 ವರ್ಷದ ಗಾಯಕಿ ಅಮಿತಾ. ಈಕೆ ಹೀಗೆ ಹೇಳಲು ಕಾರಣ, ಇವಳೀಗ ಈಕೆಯಾಗಿ ಉಳಿದಿಲ್ಲ…ಬದಲಿಗೆ ಈತನಾಗಿದ್ದಾನೆ. ಅಮಿತಾಳಿಂದ ಆದಿತ್ಯನಾಗಿದ್ದಾನೆ!
ಹೌದು. ಗುಜರಾತಿನ ಅಮರೇಲಿ ಜಿಲ್ಲೆಯ ಮೋಟಾ ಮುಂಜಿಯಾಸಾರ್ ಗ್ರಾಮದ ನಿವಾಸಿ ಅಮಿತಾ, ಪ್ರಸಿದ್ಧ ಗಾಯಕಿಯರ ಪಟ್ಟಿಯಲ್ಲಿ ಗುರುತಿಸಿಕೊಂಡಾಕೆ. ಇದೀಗ ಲಿಂಗ ಪರಿವರ್ತನೆಗೊಳಗಾಗಿದ್ದು, ಹುಡುಗನಾಗಿದ್ದಾಳೆ.
ತಮ್ಮ ಅಭಿಮಾನಿಗಳ ಜತೆ ಈ ವಿಷಯ ಹಂಚಿಕೊಂಡಿದ್ದಾಳೆ. ನಾನೀಗ ಸ್ತ್ರೀ ಅಲ್ಲ, ಬದಲಿಗೆ ಪುರುಷ ಎಂದಿದ್ದಾಳೆ.ಅಮಿತಾ ಕಾಲೇಜಿನ ದಿನಗಳವರೆಗೂ ಹುಡುಗಿಯಂತೆಯೇ ಇದ್ದಳು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದ ಅಮಿತಾ ತಮ್ಮ ಹಾಡುಗಳಿಂದ ಸ್ಥಳೀಯವಾಗಿ ಗುರುತಿಸಿಕೊಂಡಿದ್ದಳು. ದೇಹವೂ ಹುಡುಗಿಯಂತೆಯೇ ಇತ್ತು. ಮನಸ್ಸು ಹುಡುಗಿಯಂತೆಯೇ ಯೋಚಿಸುತ್ತಿತ್ತು.
ಹಾವ-ಭಾವ, ಬಟ್ಟೆ ಧರಿಸುವಿಕೆ, ನಡವಳಿಕೆ ಹುಡುಗಿಯರಂತೆಯೇ ಇತ್ತು. ತಮ್ಮ ಭಜನೆ ಹಾಡುಗಳಿಂದ ಸ್ಥಳೀಯ ಮಟ್ಟದಲ್ಲಿ ಅಮಿತಾ ಗುರುತಿಸಿಕೊಂಡಿದ್ದರು. ಕಾಲೇಜಿನ ದಿನಗಳಲ್ಲಿ ತಮ್ಮಲ್ಲಾದ ಕೆಲ ಬದಲಾವಣೆಯಿಂದ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ನೀಡಿರುವ ಅಮಿತಾ, ಕಾಲೇಜು ಮುಗಿಯುತ್ತಿದ್ದಂತೆಯೇ ನನ್ನ ಮನಸ್ಸಿನಲ್ಲಿ ನಾನು ಹುಡುಗಿ ಅಲ್ಲ… ಹುಡುಗ ಎನ್ನಿಸತೊಡಗಿತು. ನನ್ನೊಳಗೊಬ್ಬ ಹುಡುಗ ಇರೋದು ನನ್ನ ಅರಿವಿಗೆ ಬಂತು ಎಂದಿದ್ದಾರೆ.
ಇದರಿಂದ ಲಿಂಗ ಪರಿವರ್ತನೆ ಮಾಡಿಕೊಳ್ಳಲು ಮುಂದಾದೆ. ಈ ಬಗ್ಗೆ ಪಾಲಕರಿಗೆ ಹೇಳಿದಾಗ ಅವರೂ ಬೆಂಬಲ ನೀಡಿದರು ಎನ್ನುತ್ತಾಳೆ ಅಮಿತಾ. ಪಾಲಕರ ಅನುಮತಿ ಮೇರೆಗೆ ದೆಹಲಿ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆಗೆ ಒಳಗಾದಳು. ಚಿಕಿತ್ಸೆಯ ಒಂದು ವರ್ಷದ ಬಳಿಕ ಅಮಿತಾ ಸಂಪೂರ್ಣವಾಗಿ ತಮ್ಮನ್ನ ಆದಿತ್ಯ ಪಟೇಲ್ ಆಗಿ ಬದಲಿಸಿಕೊಂಡು ಎಲ್ಲರಂತೆ ಜೀವನ ನಡೆಸುತ್ತಿದ್ದಾಳೆ.
ಸಮಾಜದಲ್ಲಿ ಕೆಲವು ಟೀಕೆಗಳನ್ನು ಎದುರಿಸಬೇಕು ಎಂಬುವುದು ನನಗೆ ಗೊತ್ತು. ಸಮಾಜ ಸಹ ನಮ್ಮಂತಹವರನ್ನ ತಾರತಮ್ಯದಿಂದ ನೋಡುವುದನ್ನ ಬಿಡಬೇಕು. ನಮ್ಮನ್ನ ಎಲ್ಲರಂತೆ ಕಾಣಬೇಕಿದೆ. ಲಿಂಗ ಬದಲಾವಣೆಗೆ ಒಳಗಾಗುವರಿಗೆ ಪೋಷಕರು ಬೆಂಬಲ ಬೇಕು ಎನ್ನುತ್ತಾನೆ ಆದಿತ್ಯಾ.
ಸಿಪಿಎಂ ‘ಗೂಂಡಾ’ನಿಂದ ಮಗು ಕಳೆದುಕೊಂಡಾಕೆ ಈಗ ಬಿಜೆಪಿ ನಾಯಕಿ

ಹೆಲ್ಮೆಟ್​ ಹಾಕಿದ್ರೂ ಇನ್ಮುಂದೆ ಕಟ್ಟಬೇಕಾಗಬಹುದು ದಂಡ! ಏಕೆ ಗೊತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + ten =
Remember me
