ಮುಂಬೈ:ಪತಿಯ ಕಿರುಕುಳ ತಾಳದೇ ತನ್ನ ಆರೂ ಮಕ್ಕಳನ್ನು ಬಾವಿಗೆ ತಳ್ಳಿ ಸಾಯಿಸಿದ್ದಾಳೆ ಇಲ್ಲೊಬ್ಬ ತಾಯಿ! ಇಂಥದ್ದೊಂದು ಭಯಾನಕ ಘಟನೆ ನಡೆದಿರುವುದು ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ. 30 ವರ್ಷದ ಆರು ಮಕ್ಕಳ ತಾಯಿ ಇಂಥ ಕೃತ್ಯ ಎಸಗಿದ್ದಾಳೆ.
ಬಾವಿಗೆ ಎಸೆಯುವಾಗ ಮಕ್ಕಳು ಕಾಡಿದರೂ, ಬೇಡಿದರೂ ಹೆತ್ತ ಕರುಳು ಕಲ್ಲಾಗಿ ಹೋಗಿತ್ತು. ನಮ್ಮನ್ನು ಸಾಯಿಸಬೇಡಮ್ಮಾ ಎಂದು ಮಕ್ಕಳು ಗೋಗರೆಯುತ್ತಿದ್ದರೂ ಈ ಅಮ್ಮನ ಹೃದಯ ಕರಗಲೇ ಇಲ್ಲ. ಅಷ್ಟೂ ಮಕ್ಕಳನ್ನು ಆಕೆ ಸಾಯಿಸಿದ್ದಾಳೆ! ಸತ್ತ ಮಕ್ಕಳೆಲ್ಲ 18 ತಿಂಗಳದಿಂದ 10 ವರ್ಷದ ಒಳಗಿನವರು ಎನ್ನಲಾಗಿದೆ.
ಮುಂಬೈನಿಂದ ಸುಮಾರು 100 ಕಿಮೀ ದೂರದಲ್ಲಿರುವ ಮಹಾಡ್ ತಾಲೂಕಿನ ಖರಾವಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾವಿಗೆ ಬಿದ್ದ ಮಕ್ಕಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಕಿರುಚುತ್ತಿದ್ದುದು ಎಂಥವರ ಹೃದಯವನ್ನೂ ಚುರುಕ್​ ಎನ್ನುವಂತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಬಂದು, ಮಕ್ಕಳನ್ನು ರಕ್ಷಿಸುವ ಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಕ್ಕಳು ಬಾವಿಯಲ್ಲಿ ಮುಳುಗಿ, ಪ್ರಾಣ ಬಿಟ್ಟಿದ್ದಾರೆ.
ಪದೇ ಪದೇ ಈಕೆಯ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಗಂಡ ಈಕೆಯ ಮೇಲೆ ದೈಹಿಕ ಹಲ್ಲೆ ನಡೆಸುತ್ತಿದ್ದ. ಮಾತ್ರವಲ್ಲದೇ ಆತನ ಕುಟುಂಬವರೂ ಹಿಂಸೆ ಮಾಡುತ್ತಿದ್ದರು. ಇದರಿಂದ ಬೇಸತ್ತು ಮಕ್ಕಳನ್ನು ಕೊಲೆ ಮಾಡಿದ್ದಾಳೆ ಈ ಹೆತ್ತಮ್ಮ.
ರಕ್ಷಣಾ ತಂಡಗಳು ಮಕ್ಕಳ ಶವಗಳನ್ನು ಬಾವಿಯಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಪ್ರಿಯಕರನ ಲೈಂಗಿಕ ಆಸೆ ಈಡೇರಿಸಲು ಮಗಳನ್ನೇ ಆತನ ಬಳಿ ಬಿಟ್ಟ ಪಾಪಿ ತಾಯಿ!
15 ಮಂದಿ ಅಕೌಂಟ್‌ಗೆ ಎಸ್‌ಬಿಐನಿಂದ 1.5 ಕೋಟಿ ರೂ: ಮೋದಿ ಕೊಟ್ಟರೆಂದು ಕುಣಿದಾಡಿದ ಗ್ರಾಹಕರು- ಆಗಿದ್ದೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 9 =
Remember me
