ನವದೆಹಲಿ:ಪ್ರತಿಪಕ್ಷಗಳ ಕಾರಣದಿಂದ ಸಂಸತ್ತಿನ ಉಭಯ ಸದನಗಳು ಪದೇ ಪದೇ ಮುಂದೂಡಲ್ಪಡುತ್ತಿರುವ ಹಿನ್ನೆಲೆಯಲ್ಲಿ ಗರಂ ಆದ ಸಚಿವೆ ಸ್ಮೃತಿ ಇರಾನಿ ನಡೆಸಿದ ವಾಗ್ದಾಳಿಗೆ ಸಂಸದ ರಾಹುಲ್​ ಗಾಂಧಿ ಸುಸ್ತಾಗಿರುವ ಘಟನೆ ನಡೆಯಿತು.
ಸಂಸತ್ತಿನ ಮುಂಗಾರು ಅಧಿವೇಶನದ ಮೂರನೇ ದಿನದ ಕಲಾಪದಲ್ಲಿಯೂ ರಾಹುಲ್ ಗಾಂಧಿ ಹಾಗೂ ಪ್ರತಿಪಕ್ಷಗಳು ಅಡ್ಡಿ ಪಡಿಸಿದ್ದರಿಂದ ವಾಗ್ದಾಳಿ ನಡೆಸಿದ ಸ್ಮೃತಿ ಇರಾನಿ, ಪ್ರತಿಪಕ್ಷಗಳು ಸಂಸತ್ತಿನ ಕಾರ್ಯಕಲಾಪಗಳು ನಡೆಯದಂತೆ ವರ್ತಿಸುತ್ತಿರುವುದು ಸಂಸತ್ತಿಗೆ ಮಾಡಿದ ಅಪಮಾನ ಸ್ಮೃತಿ ಇರಾನಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ನಿಷ್ಫಲವಾಗಿರುವ ವಯನಾಡ್​ ಸಂಸದ ಈಗ ಲೋಕಸಭೆಯ ಕಲಾಪಗಳು ನಡೆಯದಂತೆ ಹಠಮಾರಿ ವರ್ತನೆ ತೋರುತ್ತಿದ್ದಾರೆ ಎಂದು ಕಿಡಿ ಕಾರಿದರು. ರಾಹುಲ್ ಗಾಂಧಿ ಪದೇ ಪದೇ ವಿದೇಶಕ್ಕೆ ಭೇಟಿ ನೀಡುತ್ತಿರುವುದು ಸ್ವಂತ ಪಕ್ಷಕ್ಕೆ ಚಿಂತೆಯ ವಿಷಯವಾಗಿದೆ. ಸಂಸತ್ತಿನ ಕಲಾಪದಲ್ಲಿ ಶೇ 40 ಕ್ಕಿಂತಲೂ ಕಡಿಮೆ ಹಾಜರಾತಿ ಹೊಂದಿದ್ದಾರೆ. ಇದು ಅವರಿಗೆ ಸಂಸತ್ತಿನ ಮೇಲೆ ಇರುವ ಗೌರವವನ್ನು ಸೂಚಿಸುತ್ತದೆ. ಈಗ ಕಲಾಪ ನಡೆಯಲು ಬಿಡದೇ ಅದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸ್ಮೃತಿ ಇರಾನಿ ಆಕ್ರೋಶ ಹೊರಹಾಕಿದರು.
2004 ಮತ್ತು 2019 ರ ನಡುವೆ ಅಮೇಥಿ ಸಂಸದರಾಗಿದ್ದ ಅವರು ಸಂಸತ್ತಿನಲ್ಲಿ ಯಾವುದೇ ಪ್ರಶ್ನೆಯನ್ನು ಕೇಳಲಿಲ್ಲ. ತಮ್ಮ ಕ್ಷೇತ್ರವನ್ನು ತ್ಯಜಿಸಿ ವಯನಾಡ್ ಸಂಸದರಾದಾಗ, 2019ರ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಅವರ ಹಾಜರಾತಿ ಶೇ. 40 ಕ್ಕಿಂತ ಕಡಿಮೆ ಇತ್ತು. ಇದಕ್ಕೆ ಕಾರಣ ಪದೇ ಪದೇ ವಿದೇಶ ಪ್ರವಾಸ. ಇದು ಸ್ವತಃ ಅವರ ಪಕ್ಷಕ್ಕೆ ತಲೆನೋವಾಗಿದೆ ಎಂದು ಟೀಕಾಪ್ರಹಾರ ನಡೆಸಿದರು.
ಶಿಂಧೆ ಸಂಪುಟದಲ್ಲಿ ಸಚಿವ ಸ್ಥಾನಕ್ಕೆ 90 ಕೋಟಿ ರೂ.ಗೆ ಡೀಲ್​: ಮುಂದೇನಾಯ್ತು ನೋಡಿ…

ಯುವಕ ಬೀಸಿದ ಬಲೆಗೆ ಬಿದ್ದರು ಈ ನಾಲ್ವರು ಶಾಸಕಿಯರು! ಕಣ್ಣೀರಿಗೆ ಕರಗಿ ಹಣ ಕಳೆದುಕೊಂಡರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 14 =
Remember me
