ಕೋಲ್ಕತಾ (ಪಶ್ಚಿಮ ಬಂಗಳ):ಸಿನಿಮಾ ನೋಡಿ ಅದರಂತೆ ಅನುಸರಿಸಲು ಹೋಗಿ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡವರು ಇದ್ದಾರೆ, ತಮ್ಮ ನೆಚ್ಚಿನ ಹೀರೋಗಳನ್ನು ಅನುಸರಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದವರೂ ಇದ್ದಾರೆ. ಇದು ಕೇವಲ ಕಥೆ, ನಿಜವಾದದ್ದಲ್ಲ ಎನ್ನುವುದನ್ನೂ ಅರಿಯದೇ ಅನುಸರಿಸುವವರು ಹಲವರು. ಇದೀಗ ಅಂಥದ್ದೇ ಒಂದು ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಪುಷ್ಪಾ: ದಿ ರೈಸ್ ಬ್ಲಾಕ್​ಬಸ್ಟರ್​ ಸಿನಿಮಾ ನೋಡಿ ಅದರಿಂದ ಉತ್ತೇಜಿತನಾದ ಅಭಿಮಾನಿಯೊಬ್ಬ. ತೇಗದ ಮರದ ಕಳ್ಳ ಸಾಗಣಿಕೆ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪುಷ್ಪ ಸಿನಿಮಾದ ಕಥೆಯಲ್ಲಿ ಇರುವುದು ಲೂಟಿಯೇ. ಈ ಸಿನಿಮಾದ ಕಥಾ ನಾಯಕ ಪುಷ್ಪಾ ಮರಗಳ ಕಳ್ಳ ಸಾಗಣೆಯ ಮೂಲಕ ಸಂಪತ್ತನ್ನು ಸಂಗ್ರಹಿಸುತ್ತಾನೆ. ಜತೆಗೆ ವಿವಿಧ ಕಳ್ಳ ಸಾಗಣಿಕೆದಾರರ ನೇತೃತ್ವ ವಹಿಸುತ್ತಾನೆ, ಈ ಸಂದರ್ಭದಲ್ಲಿ ಬೇರೆ ಬೇರೆ ಉಪಾಯಗಳ ಮೂಲಕ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುವುದನ್ನು ಈ ಸಿನಿಮಾದಲ್ಲಿ ಕಾಣಬಹುದು.
ಅದರಂತೆ ಅನುಸರಿಸಲು ಹೋಗಿದ್ದಾನೆ ಕೋಲ್ಕತಾದ ವ್ಯಕ್ತಿ. ಸ್ಲೀಪರ್ ಬಸ್ ಒಂದರಲ್ಲಿ ತೇಗದ ಮರದ ತುಂಡುಗಳನ್ನು ಕಳ್ಳ ಸಾಗಾಣಿಕೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಈ ಕುರಿತು ಪಶ್ಚಿಮ ಬಂಗಾಳದ ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವಿನ್ ಕಸ್ವಾನ್ ಈ ಘಟನೆಯನ್ನು ವಿವರಿಸುತ್ತಾ ಪುಷ್ಪಾ ಚಿತ್ರದ ಬಗ್ಗೆ ತಮಾಷೆಯಾಗಿ ಬರೆದಿದ್ದಾರೆ.
ಸ್ಲೀಪರ್ ಬಸ್ ಒಂದರಲ್ಲಿ ತೇಗದ ಮರದ ತುಂಡುಗಳನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಪೋಲೀಸರು ಆ ಬಸ್ಸನ್ನು ಮಂಗಳವಾರ ಬೆಳಗ್ಗಿನ ಜಾವ 3.30 ನಿಮಿಷಕ್ಕೆ ತಡೆದು ನಿಲ್ಲಿಸಿದರು. ಊಹಿಸಿಕೊಳ್ಳಿ, ಒಂದು ವೋಲ್ವೋ ಸ್ಲೀಪರ್ ಬಸ್ಸನ್ನು ತೇಗದ ಮರದ ಕಳ್ಳ ಸಾಗಣಿಕೆಗೆ ಬಳಸಿಕೊಳ್ಳಲಾಗುತ್ತಿದೆ ಎಂದರೆ ಹೇಗಿರಬೇಡ ಎಂದು ಅವರು ಬರೆದುಕೊಂಡಿದ್ದಾರೆ. ಆದರೆ ಇದು ಸಿನಿಮಾ ಅಲ್ಲ ಎಂದು ಈ ಪುಷ್ಪಂಗೆ ತಿಳಿಯಲಿಲ್ಲ. ನಮ್ಮ ತಂಡಗಳನ್ನು ಕಡಿಮೆ ಎಂದು ಅಂದಾಜಿಸಿಬಿಟ್ಟಿದ್ದಾನೆ. ಒಳ್ಳೆಯದೇ ಆಯಿತು, ಸದ್ಯ ನಮ್ಮ ಬಳಿ ಒಂದು ಡೀಲಕ್ಸ್ ಬಸ್ ಇದೆ ಎಂದು ತಮಾಷೆ ಮಾಡಿದ್ದಾರೆ.
ಕಸ್ವಾನ್ ಅವರ ಈ ಟ್ವೀಟ್‍ಗೆ ನೆಟ್ಟಿಗರಿಂದ ಹಲವಾರು ಬಗೆಯ ತಮಾಷೆಯ ಪ್ರತಿಕ್ರಿಯೆಗಳು ಮತ್ತು ಅರಣ್ಯ ಅಧಿಕಾರಿಗಳ ಕುರಿತು ಪ್ರಶಂಸೆ ವ್ಯಕ್ತವಾಗಿದೆ.
Good intelligence & timely action at 3:30 AM yesterday night. Imagine a Volvo sleeper bus being used for teak timber smuggling. This Pushpa was underestimating our teams. Good now we have a deluxe bus.pic.twitter.com/9PmUUwLnVD
— Parveen Kaswan, IFS (@ParveenKaswan)July 6, 2022

ಗನ್​ಮ್ಯಾನ್​ಗೆ ಪಿಎಸ್​ಐ ಪಟ್ಟ? ಶಾಸಕನ ಪುತ್ರ, ಸಹೋದರನ ಸುತ್ತ ಅಕ್ರಮದ ಘಾಟು- ಬಾಯಿಬಿಟ್ಟ ಕಿಂಗ್​ಪಿನ್​

ಬುಡಕಟ್ಟು ವಿದ್ಯಾರ್ಥಿಗಳ ಹಣ ದೇಶವಿರೋಧಿ ಚಟುವಟಿಕೆಗೆ? ಮೇಧಾ ಪಾಟ್ಕರ್​ ವಿರುದ್ಧ ದಾಖಲಾಯ್ತು ಎಫ್​ಐಆರ್​!

‘ಹಂಸನಂತೆ ಇದ್ದ ಹಂಸಲೇಖರನ್ನು ಕಂಸನಂತೆ ಮಾಡಿದ್ದೀರಿ, ಸಾಹಿತಿಗಳಿಗೆ ಬುದ್ಧಿ ಹೇಳಿ ಇಲ್ಲವೇ ಕಾಲನ ಉಪಚಾರಕ್ಕೆ ಸಿದ್ಧರಾಗಿ’

VIDEO: 1,2,3..10, 20… ಇದೇನಪ್ಪಾ ಇದು, ಮುಗೀತಿಲ್ಲ ಲೆಕ್ಕ? ಪೊಲೀಸರ ಬೆಚ್ಚಿಬೀಳಿಸಿದ ಆಟೋ ಡ್ರೈವರ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve + 10 =
Remember me
