ಭುವನೇಶ್ವರ:ಸಾಕು ಪ್ರಾಣಿಗಳು ಎಷ್ಟೋ ಬಾರಿ ಮನೆಮಾಲೀಕರನ್ನು ಕಾಪಾಡುವುದಿದೆ. ಅಂಥದ್ದೇ ಒಂದು ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.
ಬೆಕ್ಕೊಂದು ತನ್ನ ಜೀವದ ಹಂಗು ತೊರೆದು ಮನೆಅಂಗಳಕ್ಕೆ ಬಂದ ನಾಗರಹಾವನ್ನು ಒಳಕ್ಕೆ ಬಿಡದೇ ಸುಮಾರು ಅರ್ಧ ಗಂಟೆ ಕಾದು ಕುಳಿತ ಘಟನೆ ಇದಾಗಿದೆ.
ಭುವನೇಶ್ವರದ ಸಂಪದ್ ಕುಮಾರ್ ಫರಿದಾ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಅವರ ಮನೆ ಅಂಗಳಕ್ಕೆ ಬಂದ ನಾಗರ ಹಾವು ಒಳಗೆ ಪ್ರವೇಶಿಸಲು ಮುಂದಾಗಿದೆ. ಈ ಸಂದರ್ಭದಲ್ಲಿ ನೋಡಿದ ಅವರ ಮನೆಯ ಬೆಕ್ಕು ಬಾಗಿಲ ಬಳಿ ನಿಂತಿದೆ. ಅದು ಕೂಗಿಕೊಂಡ ಶಬ್ದ ಕೇಳಿದ ಮನೆಯವರು ಓಡಿ ಬಂದು ನೋಡಿದಾಗ ನಾಗರಹಾವು ಹೆಡೆ ಬಿಚ್ಚಿ ನಿಂತಿದ್ದು, ಬೆಕ್ಕು ಬಾಗಿಲನ್ನು ಕಾಯುತ್ತಿರುವ ದೃಶ್ಯ ಕಂಡಿದ್ದಾರೆ.
Odisha | A pet cat stood guard to prevent a cobra from entering a house in Bhubaneswar
Cat has prevented Cobra from entering inside for nearly 30 min till the Snake Helpline reached the spot. Our cat is around 1.5 years old & live with us like a family member: Sampad K Paridapic.twitter.com/dWZXTMf9V5
— ANI (@ANI)July 21, 2021

ಕೂಡಲೇ ಅವರು ಹಾವು ರಕ್ಷಣಾ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಸಹಾಯಕ್ಕೆ ಸಿಬ್ಬಂದಿ ಬರುವಷ್ಟರಲ್ಲಿ ಹಾವು ಮನೆಯೊಳಗೆ ಪ್ರವೇಶಿಸಲು ಸುಮಾರು ಬಾರಿ ಪ್ರಯತ್ನಿಸಿದೆ. ಆದರೆ ಬೆಕ್ಕು ಮಾತ್ರ ಅದನ್ನು ತಡೆದು ನಿಲ್ಲಿಸಿದೆ. ನಂತರ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ಹಾವು ವಾಪಸ್‌ ಹೋಗುವಷ್ಟರಲ್ಲಿ ಸಹಾಯವಾಣಿಯ ಸಿಬ್ಬಂದಿ ಬಂದು ಹಾವನ್ನು ಹಿಡಿದಿದ್ದಾರೆ.
“ಬೆಕ್ಕಿಗೆ ಈಗ ಒಂದೂವರೆ ವರ್ಷ. ನಮ್ಮ ಮನೆಯ ಸದಸ್ಯನೇ ಆಗಿಬಿಟ್ಟಿದೆ. ಇದು ಹಾವು ಮನೆಯೊಳಗೆ ಹೋಗದಂತೆ ತಡೆದಿದೆ” ಎಂದು ಫರೀದಾ ಹೇಳಿದರು.
VIDEO: ಪಾಕ್‌ ಪತ್ರಕರ್ತನ ಪ್ರಶ್ನೆಗಳಿಗೆ ಉತ್ತರಿಸಿದ ಎಮ್ಮೆ- ನೀವಿಂಥ ಇಂಟರ್‌ವ್ಯೂ ನೋಡಿರಲಾರಿರಿ!

‘ಆಸ್ಕರ್‌ ನನ್ನ ತಂದೆಯ ಕಾಲಿನ ಧೂಳಿಗೆ, ಭಾರತರತ್ನ ಅವರ ಉಗುರಿಗೆ, ಪ್ರಶಸ್ತಿಗಳು ನನ್ನ ಪಾದಕ್ಕೆ ಸಮ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − two =
Remember me
