ಮುಂಬೈ:ಕೋವಿಡ್‌ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ವರ್ಚ್ಯುವಲ್‌ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಕೋರ್ಟ್‌ನಲ್ಲಿ ವಿಚಾರಣೆ ನಡೆಸುತ್ತಿದ್ದರು. ಆಗ ಸುಮಾರು ಐದು ಅಡಿ ಉದ್ದದ ಹಾವು ಅವರ ಕೊಠಡಿಯಲ್ಲಿ ನುಸುಳಿ ಆತಂಕ ಸೃಷ್ಟಿಸಿದೆ.
ನ್ಯಾಯಮೂರ್ತಿ ಎನ್‌.ಆರ್ ಬೋರ್ಕರ್ ಅವರ ಕೊಠಡಿಯಲ್ಲಿ ಈ ಹಾವು ಕಾಣಿಸಿಕೊಂಡಿದೆ. ಹಾವು ಕೊಠಡಿಯನ್ನು ಪ್ರವೇಶಿಸಿದ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಅಲ್ಲಿ ಇರಲಿಲ್ಲ. ಆದರೆ ವಿಚಾರಣೆ ಮುಗಿಸಿ ಕೊಠಡಿಗೆ ಬಂದಾಗ ಹಾವು ಪತ್ತೆಯಾಗಿದೆ.
ಹಾವನ್ನು ನೋಡಿದ ತಕ್ಷಣ ಕೋರ್ಟ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಉರಗ ತಜ್ಞರನ್ನು ಹೈಕೋರ್ಟ್‌ಗೆ ಕರೆಸಿದ್ದಾರೆ. ಹಾವು ವಿಷಕಾರಕ ಅಲ್ಲವೆಂದು ಉರಗ ರಕ್ಷಕರು ಹೇಳಿದ್ದಾರೆ. ಹಾವನ್ನು ಹಿಡಿದು, ಸೂಕ್ತ ಸ್ಥಳದಲ್ಲಿ ಅದನ್ನು ಬಿಟ್ಟಿದ್ದಾರೆ.
ವರ್ಚ್ಯುವಲ್‌ ವಿಚಾರಣೆ ನಡೆಯುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಜನಸಂದಣಿ ಕಡಿಮೆಯಾಗಿದ್ದರಿಂದ ಹಾವು ಕೊಠಡಿಗೆ ಬಂದದ್ದು ಯಾರೂ ಗಮನಿಸಲಿಲ್ಲ ಎನ್ನಲಾಗಿದೆ.
ಇಲ್ಲಿದೆ ನೋಡಿ ಹಾವು ಹಿಡಿದ ವಿಡಿಯೋ

Snake rescued from#BombayHighCourtpremises earlier today.pic.twitter.com/qvUc2fS7V2
— Live Law (@LiveLawIndia)January 21, 2022

ಆರೋಗ್ಯ ಕಾರ್ಡ್‌, ಪಾಸ್‌ ಪಡೆದುಕೊಳ್ಳಲು ಕರೊನಾ ಬರಿಸಿಕೊಂಡ ಸುಪ್ರಸಿದ್ಧ ಗಾಯಕಿ ಚಿಕಿತ್ಸೆ ಫಲಿಸದೇ ಸಾವು!

ವಿಲ್‌ ಬರೆಯದ ಅಪ್ಪನ ಆಸ್ತಿ, ಉಯಿಲು ಮಾಡದ ಮಹಿಳೆಯ ಆಸ್ತಿ ಯಾರಿಗೆ? ಸುಪ್ರೀಂನಿಂದ ಮಹತ್ವದ ತೀರ್ಪು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + thirteen =
Remember me
