ವಾಷಿಂಗ್ಟನ್:ಆಲ್ಬಂ ಒಂದರ ಚಿತ್ರೀಕರಣದ ವೇಳೆ ಹಾವು ಹಿಡಿದುಕೊಂಡು ಹಾಡು ಹೇಳುವ ಸಾಹಸ ಮಾಡಿದ್ದ ಗಾಯಕಿಯೊಬ್ಬಳಿಗೆ ಆ ಹಾವು ಕಚ್ಚಿರುವ ಘಟನೆ ನಡೆದಿದೆ. ಅಮೆರಿಕದ ಗಾಯಕಿ ಮೇಟಾ ಅವರಿಗೆ ಹಾವು ಕಚ್ಚಿದ್ದು, ಆಕೆ ಭಯದಿಂದ ಚೀರಿದ್ದಾಳೆ. ಇದರ ವಿಡಿಯೋ ಇದೀಗ ವೈರಲ್ ಆಗಿದೆ.
21 ವರ್ಷದ ಗಾಯಕಿ ಮೇಟಾ ಹಾವನ್ನು ತನ್ನ ಮೈಮೇಲೆ ಬಿಟ್ಟುಕೊಂಡು ವಿಭಿನ್ನವಾಗಿ ಚಿತ್ರೀಕರಣ ಮಾಡಲು ಹೋಗಿದ್ದಳು. ಆಕೆ ಒಂದು ಹಾವನ್ನು ಹಿಡಿದುಕೊಂಡು ಹಾಡು ಹೇಳುತ್ತಿದ್ದಾಗ, ಆಕೆಯ ಸಹಾಯಕ ಇನ್ನೊಂದು ಹಾವನ್ನು ಕೊಡಲು ಹೋಗಿದ್ದಾನೆ. ಈ ವೇಳೆ ಆಕೆ ಕೈಯಲ್ಲಿ ಹಿಡಿದುಕೊಂಡಿದ್ದ ಹಾವು ಮುಖಕ್ಕೆ ಕಚ್ಚಿದೆ. ಇದು ನೋಡಿದರೆ ಅದು ಆಕೆಯ ಕೆನ್ನೆಗೆ ಮುತ್ತಿಟ್ಟಂತೆ ಕಾಣಿಸುತ್ತಿದೆ.
ಏಕಾಏಕಿ ಹೀಗಾದುದ್ದಕ್ಕೆ ಗಾಯಕಿ ಥಟ್ಟನೆ ಚೀರಿಕೊಂಡಿದ್ದಾಳೆ. ಆದರೆ ಈ ಹಾವು ವಿಷಪೂರಿತವಲ್ಲವಾದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಟೀನ್ ಸೀನ್, ಟಾಕ್ಸಿಕ್ ಮತ್ತು ಹ್ಯಾಬಿಟ್ಸ್ ನಂತಹ ಹಾಡುಗಳನ್ನು ಒಳಗೊಂಡಿರುವ ತಮ್ಮ ಚೊಚ್ಚಲ ಆಲ್ಬಂ ‘ಹ್ಯಾಬಿಟ್ಸ್’ನಿಂದ ಭಾರಿ ಜನಪ್ರಿಯತೆ ಗಳಿಸಿರುವ ಗಾಯಕಿ ನಾನು ಏನೇನೋ ಸಾಹಸ ಮಾಡಿದ್ದು, ಮೊದಲ ಬಾರಿಗೆ ಇಂಥ ಅನಾಹುತ ಆಗಿದೆ ಎಂದಿದ್ದಾಳೆ.
ಐದು ಸೆಕೆಂಡ್‌ಗಳ ವಿಡಿಯೋವನ್ನು ಖುದ್ದು ಮೇಟಾ ‘ಎಂದಿಗೂ ಹೀಗೆ ಆಗಿಲ್ಲ’ ಎಂದು ಶೀರ್ಷಿಕೆಯೊಂದಿಗೆ ಈ ವಿಡಿಯೋ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.


A post shared by Maeta (@maetasworld)

ಅಪ್ಪು ಡೈರಿಯಲ್ಲಿತ್ತು ಮಹತ್ವದ ವಿಷಯ: ಅಶ್ವಿನಿ ತೆಗೆದುಕೊಂಡ ನಿರ್ಧಾರಕ್ಕೆ ಶ್ಲಾಘನೆಗಳ ಮಹಾಪೂರ

VIDEO: ತಾನು ಬಿಡೋ ‘ವಾಯು’ ಮಾರಿ ವಾರಕ್ಕೆ 38 ಲಕ್ಷ ರೂ. ಗಳಿಸ್ತಾಳೆ! ಮೂಗು ಮುಚ್ಕೋಬೇಡಿ… ಇವಳ ಬಾಯಲ್ಲೇ ಕೇಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + twenty =
Remember me
