ಟೋಕಿಯೋ (ಜಪಾನ್​):ಒಂದು ಹಾವು ಸುಮಾರು 10 ಸಾವಿರ ಮನೆಗಳ ಕರೆಂಟ್​ ಸ್ಥಗಿತಗೊಳಿಸಿರುವ ಘಟನೆ ಟೋಕಿಯೋದಲ್ಲಿ ನಡೆದಿದೆ. ವಿದ್ಯುತ್‌ ಸಂಪರ್ಕ ಕಡಿತದಿಂದ ಸುಮಾರು 10 ಸಾವಿರ ಕುಟುಂಬಸ್ಥರು ಪರದಾಟ ನಡೆಸಿದ್ದಾರೆ.
ಆಗಿದ್ದೇನೆಂದರೆ, ಜಪಾನ್‌ನ ಫುಕುಶಿಮಾ ಪ್ರಿಫೆಕ್ಚರ್‌ನಲ್ಲಿರುವ ಕೊರಿಯಾಮಾ ತೊಹೊಕು ಎಲೆಕ್ಟ್ರಿಕ್ ಘಟಕದಿಂದ ಹಲವಾರು ಮನೆಗಳಿಗೆ ವಿದ್ಯುತ್​ ಪೂರೈಕೆ ಆಗುತ್ತದೆ. ಇದ್ದಕ್ಕಿದ್ದಂತೆಯೇ ಎಲ್ಲರ ಮನೆಯ ಪವರ್​ ಕಟ್​ ಆಗಿದೆ. ಸಿಬ್ಬಂದಿ ಎಷ್ಟೇ ಹುಡುಕಾಟ ನಡೆಸಿದರೂ, ಏನೂ ಕಾರಣ ತಿಳಿಯದೇ ಸುಸ್ತಾದರು.
ಕೊನೆಗೂ ಅಧಿಕಾರಿಗಳು ವಿದ್ಯುತ್‌ ಸ್ಥಗಿತಕ್ಕೆ ಕಾರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ವಿದ್ಯುತ್‌ ಸ್ಟೇಷನ್‌ಗೆ ಹೋದಾಗ ಅಲ್ಲಿನ ಯಂತ್ರೋಪಕರಣ ಪರಿಶೀಲನೆ ಮಾಡಿದಾಗ ಹಾವಿನ ಸುಟ್ಟ ಅವಶೇಷಗಳು ಪತ್ತೆಯಾಗಿವೆ. ಸ್ಟೇಷನ್​ ಒಳಗೆ ಹಾವು ನುಗ್ಗಿದ್ದರಿಂದ ಇಷ್ಟೆಲ್ಲಾ ಆವಾಂತರ ಆಗಿರುವುದು ತಿಳಿದಿದೆ.
ವಿದ್ಯುತ್‌ ತಂತಿ ತಗುಲಿ ಹಾವು ಸುಟ್ಟುಹೋಗಿದೆ. ಪರಿಣಾಮವಾಗಿ ಸ್ಟೇಷನ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಇದರಿಂದಾಗಿ ಸುಮಾರು 10 ಸಾವಿರ ಮನೆಗಳ ನಿವಾಸಿಗಳು ವಿದ್ಯುತ್‌ ಕಡಿತದಿಂದ ಸಮಸ್ಯೆ ಎದುರಿಸಬೇಕಾಯಿತು. ಒಂದು ಗಂಟೆಗೂ ಹೆಚ್ಚು ಕಾಲದ ಕಾರ್ಯಾಚರಣೆ ನಂತರ ಎಲ್ಲರೂ ಮರಳಿ ವಿದ್ಯುತ್​ ಪಡೆದರು.
VIDEO: ಫಸ್ಟ್​ ನೈಟ್​ ಅನ್ನೋದೇ ಇಲ್ಲ- ನಟಿ ಆಲಿಯಾ ಭಟ್​ ಹೇಳಿಕೆಗೆ ಸುಸ್ತಾದ ಪತಿ ರಣಬೀರ್​ ಕಪೂರ್​

ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ: ಉಪರಾಷ್ಟ್ರಪತಿ ಹುದ್ದೆಗೆ ಮುನ್ಸೂಚನೆ? ಹುದ್ದೆ ತೊರೆದ ಸಿಂಗ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + four =
Remember me
