ಎರ್ನಾಕುಲಂ:ಮನೆಯೊಳಕ್ಕೆ ಹಾವು ಬಂದರೆ ಹೌಹಾರಿಹೋಗುವವರೇ ಎಲ್ಲಾ. ಆದರೆ ಕೇರಳದ ಎರ್ನಾಕುಲಂ ಜಿಲ್ಲೆಯ ಕೋಥಮಂಗಲಂನ ವಾಸಿಯೊಬ್ಬ ಮನೆಯೊಳಕ್ಕೆ ಬಂದಿದ್ದ ಹಾವನ್ನು ಕೊಂದು ತಿಂದು ತೇಗಿದ್ದಾನೆ. ಮಾತ್ರವಲ್ಲದೇ, ಮಾಂಸವನ್ನು ಮಾರಾಟ ಮಾಡಲೂ ಮುಂದಾಗಿದ್ದಾನೆ.ಈತನ ಕೃತ್ಯ ಕಂಡು ಪೊಲೀಸರು ದಂಗಾಗಿ ಹೋಗಿದ್ದು, ಆತನನ್ನು ಬಂಧಿಸಿದ್ದಾರೆ. ನೇರಿಯಮಂಗಲಂನ ವಿಜೆ ಬಿಜು ಎಂಬಾತ ಈ ಕೃತ್ಯ ಎಸಗಿದ್ದು, ಆತನೀಗ ಪೊಲೀಸರ ಅತಿಥಿಯಾಗಿದ್ದಾನೆಅರಣ್ಯ ಅಧಿಕಾರಿಗಳ ಪ್ರಕಾರ, ಈತನ ಮನೆಗೆ ಇಲಿ ಹಾವು (ರ್‍ಯಾಟ್‌ ಸ್ನೇಕ್‌) ಬಂದಿತ್ತು. ಅದನ್ನು ಕೊಂದಿರುವ ವಿಜೆ, ಅದರ ಚರ್ಮ ತೆಗೆದು ಮಾಂಸ ಬೇಯಿಸಿದ್ದಾನೆ. ತಾನು ಸಂಪೂರ್ಣ ತೃಪ್ತನಾದ ಮೇಲೆ, ಉಳಿದ ಮಾಂಸವನ್ನು ಮಾರಾಟ ಮಾಡಲು ಮುಂದಾಗಿದ್ದಾನೆ.
ಇದನ್ನೂ ಓದಿ:ಎಐಸಿಸಿ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ಬಿತ್ತು ಮುದ್ರೆ: ಒತ್ತಾಯಕ್ಕೆ ಮಣಿದ ಸೋನಿಯಾಈ ಕುರಿತು ಅರಣ್ಯ ಸಿಬ್ಬಂದಿ ತಿಳಿಯುತ್ತಲೇ ದಾಳಿ ಮಾಡಿದ್ದಾರೆ. ಬೇಯಿಸಿಟ್ಟ ಮಾಂಸ ಹಾಗೂ ಮಾರಾಟಕ್ಕಿಟ್ಟ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.ಇದೇ ಮೊದಲಲ್ಲದೇ, ಈ ಹಿಂದೆ ಕೂಡ ಈತ ಹಾವುಗಳನ್ನು ಹಿಡಿದು ಕೊಂದು, ತಿಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ
ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!
ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ
ಎಟಿಎಂ ಹಣ ಎಗರಿಸಿದ ಖದೀಮರು: ನಡೆದಾಡೋ ಸ್ಟೈಲ್‌ನಲ್ಲಿ ಸಿಕ್ಕಿಬಿದ್ದದ್ದೇ ರೋಚಕ…
ಹೋಟೆಲ್‌ನಲ್ಲಿ ರಾತ್ರಿ ಕಳೆದ ಪ್ರೇಮಿಗಳು ಮಾರನೆಯ ದಿನ ಶವವಾದರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + eight =
Remember me
