ಬೀಡ್​ (ಮಹಾರಾಷ್ಟ್ರ):ಬಹುತೇಕ ಯುವಕ- ಯುವತಿಯರಿಗೆ ವಿಭಿನ್ನ ರೀತಿಯಲ್ಲಿ ಮದುವೆಯಾಗಬೇಕು ಎನ್ನುವ ಕನಸು ಇರುತ್ತದೆ. ಅದಕ್ಕಾಗಿ ಕೆಲವರು ಹಲವು ಸಾಹಸಮಯ ಸನ್ನಿವೇಶ ಸೃಷ್ಟಿಸಿ ಮದುವೆಯಾಗುವುದುಂಟು. ಆಕಾಶದಲ್ಲಿ, ಸಮುದ್ರದ ಒಳಗೆ, ವಿಮಾನದಲ್ಲಿ… ಹೀಗೆ ವಿಭಿನ್ನ ರೀತಿಯಲ್ಲಿ ಮದುವೆಯಾಗಿ ಸುದ್ದಿಯಾಗುತ್ತಾರೆ. ಇಲ್ಲೊಬ್ಬ ವಧು-ವರರು ಮಾತ್ರ ಎಲ್ಲರೂ ಬೆಚ್ಚಿಬೀಳುವಂಥ ರೀತಿಯಲ್ಲಿ ಮದ್ವೆಯಾಗಿದ್ದಾರೆ.
ಅದೇನೆಂದರೆ ವಧು-ವರರು ಹಾರದ ಬದಲು ಹಾವು ಅದರಲ್ಲಿಯೂ ಹೆಬ್ಬಾವನ್ನು ಬದಲಿಸಿಕೊಂಡು ಮದುವೆಯಾಗಿದ್ದಾರೆ! ಇಂಥದ್ದೊಂದು ಘಟನೆ ನಡೆದಿರುವುದು ಮಹಾರಾಷ್ಟ್ರದ ಬೀಡ್​ ಜಿಲ್ಲೆಯಲ್ಲಿ. 2019ರಲ್ಲಿ ನಡೆದಿರುವ ಈ ಮದುವೆಯ ಫೋಟೋ ಇದೀಗ ಮತ್ತೆ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಮೂರು ವರ್ಷಗಳ ಬಳಿಕ ಈ ಭಯಾನಕ ಮದುವೆಯ ವಿಡಿಯೋ ಹರಿಬಿಡಲಾಗಿದ್ದು, ನೋಡುಗರಲ್ಲಿ ಕುತೂಹಲ ಕೆರಳಿಸುತ್ತದೆ.
ಅಷ್ಟಕ್ಕೂ ಇಂಥದ್ದೊಂದು ಸಾಹಸಕ್ಕೆ ಕೈಹಾಕಿದವರು ಸಾಮಾನ್ಯ ಜನರಲ್ಲ. ಅವರು ವಧು-ವರ ಇಬ್ಬರೂ ಅರಣ್ಯ ಇಲಾಖೆಯ ಸಿಬ್ಬಂದಿ. ಇವರಿಗೆ ಹಾವುಗಳೆಂದರೆ ಭಯವಿಲ್ಲ. ಆದ್ದರಿಂದ ಯಾವುದೇ ಅಳಕು ಇಲ್ಲದೇ ಹೆಬ್ಬಾವನ್ನು ಹಾರದ ಬದಲು ಕೊರಳಿಗೆ ಹಾಕಿಕೊಂಡಿದ್ದಾರೆ. ನಂತರ ಅದನ್ನು ಕಾಡಿಗೆ ಅದರ ಸ್ಥಾನಕ್ಕೆ ಬಿಡಲಾಗಿದೆ.
ವಾಸವಿ ನಾರಾಯಣನ್​ ಎಂಬುವರು ಟ್ವಿಟ್ಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದರು. ಅದೀಗ ವೈರಲ್​ ಆಗುತ್ತಿದೆ. ನೀವೂ ನೋಡಿ ವಿಡಿಯೋ:
Bride and Groom exchange snake garlands during a marriage ceremony in rural Maharashtra. The snakes were let loose after the ceremony was over👇pic.twitter.com/x89n0CXiHQ— Vasavi Narayanan (@VasaviNarayanan)August 9, 2019
Bride and Groom exchange snake garlands during a marriage ceremony in rural Maharashtra. The snakes were let loose after the ceremony was over👇pic.twitter.com/x89n0CXiHQ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
