ನವದೆಹಲಿ:ಹಾವನ್ನು ಎಲ್ಲಿಯೋ ದೂರದಲ್ಲಿ ನೋಡಿದರೂ ಸಾಕು, ಅಷ್ಟೇ ಏಕೆ ಅದರ ಹೆಸರು ಕೇಳಿದರೇನೆ ಬೆಚ್ಚಿಬೀಳುವವರೇ ಹೆಚ್ಚು. ಅಂಥದ್ದರಲ್ಲಿ ಮನೆಯೊಳಕ್ಕೆ ಬಂದುಬಿಟ್ಟರೆ? ಕಲ್ಪನೆ ಮಾಡಿಕೊಂಡರೂ ಮೈಯೆಲ್ಲಾ ಝುಂ ಎನ್ನುತ್ತದೆ ಅಲ್ಲವೆ?
ಆದರೆ ದೆಹಲಿಯ ಇಂದರ್‌ಪುರಿಯ ಮನೆಯೊಂದರಲ್ಲಿ ಬೆಡ್‌ರೂಮಿನ ಎಸಿಯೊಳಕ್ಕೆ ಹಾವು ಕುಳಿತುಕೊಂಡಿದ್ದು, ರಾತ್ರಿ ಅದು ಗೊತ್ತಾಗಿ ಕುಟುಂಬದವರ ನಿದ್ದೆಗೆಡಿಸಿರುವುದು ವರದಿಯಾಗಿದೆ. ದೆಹಲಿಯಲ್ಲಿ ಸೆಖೆ ಹೆಚ್ಚಿಗೆ ಇದ್ದ ಕಾರಣ, ರಾತ್ರಿ ಮಲಗುವ ಸಮಯದಲ್ಲಿ ಈ ಕುಟುಂಬದವರು ಎಸಿ ಆನ್‌ ಮಾಡಲು ಹೋದಾಗ ಏರ್‌ಕಂಡಿಷನರ್‌ನ ಕಂಪ್ರೆಸ್ಸರ್‌ನಲ್ಲಿ ಏನೋ ಸರಿದಾಡಿದಂತೆ ಕಂಡಿದೆ. ಆಗ ನೋಡಿದಾಗ ಅಲ್ಲಿ ಮುದುಡಿ ಕುಳಿತ ಹಾವು ಕಂಡಿದೆ. ಬೆಚ್ಚಿಬಿದ್ದ ಅವರು ಕೂಡಲೇ ವನ್ಯಜೀವಿ ರಕ್ಷಣಾ ಸಿಬ್ಬಂದಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚಿನ ಅವಧಿಯ ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆ ಹಿಡಿದಿದ್ದಾರೆ. ಆರು ಅಡಿ ಉದ್ದದ ರ‍್ಯಾಟ್‌ಸ್ನೇಕ್‌ ಇದು ಎಂದು ಅವರು ಹೇಳಿದ್ದಾರೆ. ಬಿಸಿಲಿನ ಝಳ ತಾಳಲಾರದೇ ಹಾವು ಏರ್‌ಕಂಡಿಷನರ್‌ನ ಕಂಪ್ರೆಸ್ಸರ್‌ನಲ್ಲಿ ಬಂದು ಕುಳಿತಿರಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಹಾವು ಹೋದರೂ ಕುಟುಂಬದವರು ಭಯದಲ್ಲಿಯೇ ನಿನ್ನೆ ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ!
ಡಿಎಲ್‌, ಆರ್‌ಸಿ ಡೇಟ್‌ ಬಾರ್‌ ಆಗಿದೆ ಎನ್ನೋ ಚಿಂತೆ ಬಿಡಿ: ಇನ್ನು ಮೂರು ತಿಂಗಳು ಆರಾಮಾಗಿರಿ…

ಒಂದು ಪೈಸೆಯನ್ನೂ ಖರ್ಚು ಮಾಡದೇ ನೀವು ಆಸ್ತಿಯ ಪಾಲನ್ನು ಪಡೆಯಬಹುದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
