ನವದೆಹಲಿ:ಸೋಪ್‌ ಮತ್ತು ಡಿಟರ್ಜೆಂಟ್‌ ಮಾರಾಟದಲ್ಲಿ ಸಿಂಹಪಾಲು ಹೊಂದಿರುವ ಗ್ರಾಹಕ ಸರಕುಗಳ ದೈತ್ಯ, ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಇವುಗಳ ಬೆಲೆಯನ್ನು ಹೆಚ್ಚು ಮಾಡಿದೆ. ಕಳೆದ ತಿಂಗಳಷ್ಟೇ ಬೆಲೆ ಏರಿಸಿದ್ದ ಈ ಸಂಸ್ಥೆ, ಈಗ ಪುನಃ ಬೆಲೆ ಏರಿಕೆ ಮಾಡಿದ್ದು, ಗ್ರಾಹಕರಿಗೆ ಬರೆ ಬಿದ್ದಂತಾಗಿದೆ.
ಲಾಂಡ್ರಿ ಮತ್ತು ದೇಹ-ಶುದ್ಧೀಕರಣ ವಿಭಾಗಗಳಲ್ಲಿನ ತನ್ನ ಉತ್ಪನ್ನಗಳ ಬೆಲೆಗಳನ್ನು ಇದು ಹೆಚ್ಚಿಸಿರುವ ಕಾರಣ, ಸರ್ಫ್‌ ಎಕ್ಸೆಲ್‌, ಲೈಫ್‌ಬಾಯ್‌, ರಿನ್‌, ವ್ಹೀಲ್‌ ಸೇರಿದಂತೆ ಹಲವು ಸೋಪು ಹಾಗೂ ಸೋಪಿನ ಪೌಡರ್‌ಗಳ ಬೆಲೆ ಏರುಮುಖವಾಗಿದೆ.
ಕಳೆದ ತಿಂಗಳಷ್ಟೇ ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಡಿಟರ್ಜೆಂಟ್ ಗಳು ಮತ್ತು ಸೋಪ್ ಬಾರ್ ಗಳ ಬೆಲೆಗಳನ್ನು ಶೇಕಡ 3.5 ರಿಂದ 14ಕ್ಕೆ ಏರಿಸಿತ್ತು. ಈಗ ಪುನಃ ಬೆಲೆ ಏರಿಕೆ ಮಾಡಿದೆ. ಇದರಿಂದ ಅರ್ಧ ಮತ್ತು ಒಂದು ಕೆ.ಜಿ. ಪೌಡರ್‌ ಬೆಲೆಯಲ್ಲಿ ಏರಿಕೆಯಾಗಲಿದೆ.
ರಿನ್ ಡಿಟರ್ಜೆಂಟ್ ಪೌಡರ್ ಒಂದು ಕಿಲೋ ಪ್ಯಾಕೆಟ್ ಗೆ 77 ರೂ. ಗಳ ಬದಲಾಗಿ 82 ರೂ. ಏರಿದ್ದರೆ, ಸರ್ಫ್ ಎಕ್ಸೆಲ್ ಒಂದು ಕಿಲೋಗ್ರಾಂ ಪ್ಯಾಕೆಟ್‌ಗೆ 14 ರೂ. ಹೆಚ್ಚಳವಾಗಿದೆ. ಲಕ್ಸ್ ಮತ್ತು ಲೈಫ್‌ಬಾಯ್‌ ಇತ್ಯಾದಿ ಸಾಬೂನುಗಳ ಬೆಲೆಗಳು ಶೇಕಡಾ 8-12 ರಷ್ಟು ಬೆಲೆ ಏರಿಕೆಯನ್ನು ಕಂಡಿವೆ. ಉಳಿದವುಗಳಲ್ಲಿ ಕೂಡ 5-10 ರೂಪಾಯಿ ಏರಿಕೆಯಾಗಲಿದೆ. ಅಷ್ಟೇ ಅಲ್ಲದೇ ಸ್ಯಾಷೆಯಲ್ಲಿ ಸಿಗುತ್ತಿದ್ದ ಪೌಡರ್‌ಗಳ ವೇಟೇಜ್‌ ಕಡಿಮೆ ಮಾಡಲಾಗಿದ್ದು, ದರವನ್ನು ಮಾತ್ರ ಹೆಚ್ಚಿಸಲಾಗಿದೆ. 150 ಗ್ರಾಂ ತೂಕವನ್ನು ಹೊಂದಿದ್ದ ಸ್ಯಾಷೆಗಳ ವೇಟೇಜ್‌ ಅನ್ನು 130 ಗ್ರಾಂಗಳಿಗೆ ಇಳಿಸಲಾಗಿದ್ದು, ಕೆಲವು ಸ್ಯಾಷೆಗಳ ಬೆಲೆ ಏರಿಕೆ ಮಾಡಲಾಗಿದೆ.
ಬ್ರಾಹ್ಮಣರನ್ನು ಬಹಿಷ್ಕರಿಸಿ ಎಂದ ಸಿಎಂ ತಂದೆ ಅರೆಸ್ಟ್‌: ಅಪ್ಪನನ್ನು ಬಂಧಿಸಿದ್ದು ಸರಿ ಎಂದ ಮಗ!

VIDEO: ಮೊಟ್ಟೆಯ ಬದಲು ಊಸರವಳ್ಳಿಗೆ ಹುಟ್ಟಿತು ಮರಿ- ಕುತೂಹಲದ ವಿಡಿಯೋ ವೈರಲ್‌

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve + twenty =
Remember me
