ರಾಂಚಿ:ಆತನನ್ನು ಮದುವೆಯಾಗಲು ಇಷ್ಟವಿಲ್ಲ, ಆದರೆ ನೀವು ನನ್ನ ಮಾತನ್ನು ಕೇಳುತ್ತಿಲ್ಲ, ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದೀರಿ, ಆದ್ದರಿಂದ ಸಾಯದೇ ನನಗೆ ಬೇರೆ ದಾರಿ ಉಳಿದಿಲ್ಲ…
ಹೀಗೆ ಡೆತ್​ನೋಟ್​ ಬರೆದಿಟ್ಟು ಸಾಫ್ಟ್​ವೇರ್​ ಇಂಜಿನಿಯರ್​ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.ದ್ರೌಪದಿ ಕುಮಾರಿ ಎಂಬ 26 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಡಿಯನ್ ಆಯಿಲ್ ಕಾರ್ಪೋರೇಶನ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ದ್ರೌಪದಿಯವರು, ಒತ್ತಾಯಪೂರ್ವಕದ ಮದುವೆಯಿಂದ ಬೇಸತ್ತು ನೇಣಿಗೆ ಶರಣಾಗಿದ್ದಾರೆ. ಕೋಲ್ಕತಾದಲ್ಲಿ ಇವರು ಕೆಲಸ ನಿರ್ವಹಿಸುತ್ತಿದ್ದರು.
ತುಂಬಾ ಸ್ನೇಹಜೀವಿಯಾಗಿದ್ದ ದ್ರೌಪದಿ ಕುಮಾರಿ ಅವರನ್ನು ಎಲ್ಲರೂ ಪ್ರೀತಿಯಿಂದ ಬಿನ್ನಿ ಎಂದು ಕರೆಯುತ್ತಿದ್ದರು. ಮದುವೆಯ ವಿಷಯವಾಗಿ ಕೋಲ್ಕತಾದಿಂದ ತಮ್ಮ ಮನೆಯಾದ ಜಾರ್ಖಂಡ್‍ನ ಈಸ್ಟ್ ಸಿಂಗ್ ಬುಮ್ ಜಿಲ್ಲೆಯ ಹರ್​ಹರ್ ಗುಟುವಿಗೆ ಬಂದಿದ್ದರು. ಮದುವೆ ಇಷ್ಟವಿಲ್ಲವೆಂದು ಅನೇಕ ಬಾರಿ ಹೇಳಿದ್ದರೂ ಮದುವೆ ಸೆಟ್​ ಮಾಡಲಾಗಿತ್ತು.
ಆದ್ದರಿಂದ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಆತ್ಮಹತ್ಯೆ ಮಾಡಿಕೊಮಡಿದ್ದಾರೆ. ಬೆಳಗ್ಗೆ ಸುಮಾರು ಹೊತ್ತಾದರೂ ಬಾಗಿಲು ತೆರೆದಿರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಡೆತ್​ನೋಟ್​ ಪತ್ತೆಯಾಗಿದೆ.
ಪೊಲೀಸರು ದ್ರೌಪದಿ ಕುಮಾರಿಯ ಮೊಬೈಲ್, ಲಾಪ್ ಟಾಪ್ ಪರಿಶೀಲನೆ ನಡೆಸುತ್ತಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಕಂಡುಹಿಡಿಯಲಿದ್ದಾರೆ.
ಒಂದೆಡೆ ಹೆತ್ತಾಕೆ… ಇನ್ನೊಂದೆಡೆ ಜೀವದ ಗೆಳತಿ… ಇಬ್ಬರನ್ನೂ ಒಟ್ಟಿಗೆ ಆಯ್ಕೆ ಮಾಡುವಂತಿಲ್ಲ: ಏನು ಮಾಡಲಿ?

ಟೂಲ್‌ಕಿಟ್‌ ಷಡ್ಯಂತ್ರ ಬಯಲಾಗುತ್ತಿದ್ದಂತೆಯೇ ಕೋರ್ಟ್‌ಗೆ ದಿಶಾ ದೌಡು: ದಾಖಲೆ ಬಹಿರಂಗ ಬೇಡ ಎಂದು ಕೋರಿಕೆ!

ನಿಜವಾಗ್ಲೂ ಲವ್‌ ಮಾಡೋದೇ ಆದ್ರೆ ಒಂಟೆಮರಿ ಗಿಫ್ಟ್‌ ಕೊಡು ಅಂದ್ಲು ಪ್ರೇಯಸಿ… ಅಷ್ಟೇ… ಪ್ರೇಮಿಗಳೀಗ ಜೈಲಲ್ಲಿ!

ಕ್ರಿಕೆಟ್‌ ಪಂದ್ಯಾವಳಿ ವೇಳೆ ಆಡುತ್ತಲೇ ಪ್ರಾಣಬಿಟ್ಟ ಕ್ರಿಕೆಟಿಗ- ವಿಡಿಯೋದಲ್ಲಿ ದಾಖಲಾಯ್ತು ಸಾವಿನ ದೃಶ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 8 =
Remember me
