ಬೆಂಗಳೂರು:ಹಿರಿಯ ರಾಕೆಟ್ ವಿಜ್ಞಾನಿ, ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ(ಐಐಎಸ್​ಸಿ) ವಿದ್ಯಾರ್ಥಿ ಎಸ್. ಸೋಮನಾಥ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆಯ(ಇಸ್ರೋ) ಅಧ್ಯಕ್ಷರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಇಸ್ರೋ ಅಧ್ಯಕ್ಷರಾಗಿರುವ ಕೆ. ಶಿವನ್ ಒಂದು ವರ್ಷದ ವಿಸ್ತರಣೆ ಬಳಿಕ ಜ.14ರಂದು ನಿವೃತ್ತರಾಗಲಿದ್ದು, ಅವರ ಸ್ಥಾನವನ್ನು ಸೋಮನಾಥ್ ಅಲಂಕರಿಸಲಿದ್ದಾರೆ. ಅಧ್ಯಕ್ಷ ಸ್ಥಾನದ ಜತೆಗೆ ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿಯಾಗಿಯೂ ನೇಮಕವಾಗಿದ್ದಾರೆ.
ಸೋಮನಾಥ್ ಅವರು 2018ರಿಂದ ತಿರುವನಂತಪುರದಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ದ್ರವ ನೋದನ ವ್ಯವಸ್ಥಾ ಕೇಂದ್ರದ ನಿರ್ದೇಶಕರಾಗಿ ಹೊಣೆ ಹೊತ್ತಿದ್ದಾರೆ. ಇದಕ್ಕೂ ಮೊದಲು ವಿಎಸ್​ಎಸ್​ಸಿಯ ಯೋಜನಾ ವಿಭಾಗದ ಸಹಾಯಕ ನಿರ್ದೇಶಕರಾಗಿ, ಬಾಹ್ಯಾಕಾಶ ಉಡಾವಣಾ ವಾಹನ ಜಿಎಸ್​ಎಲ್​ವಿ ಮಾರ್ಕ್-3 ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕೊಲ್ಲಂನ ಟಿಕೆಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಾಂತ್ರಿಕ ವಿಭಾಗದಲ್ಲಿ ಪದವಿ ಪಡೆದು, ನಂತರ ಬೆಂಗಳೂರಿನ ಐಐಎಸ್​ಸಿಯಲ್ಲಿ ವೈಮಾನಿಕ ಇಂಜಿನಿಯರಿಂಗ್ ವಿಭಾಗದ ಸಂರಚನೆ, ಬಲವಿಜ್ಞಾನ ಹಾಗೂ ನಿಯಂತ್ರಣ ವಿಷಯದ ವಿಶೇಷತೆಯೊಂದಿಗೆ ಚಿನ್ನದ ಪದಕ ಪಡೆದು ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
1985ರಲ್ಲಿ ವಿಎಸ್​ಎಸ್​ಸಿ ಸೇರ್ಪಡೆಯಾದ ಸೋಮನಾಥ್, ಪಿಎಸ್​ಎಲ್​ವಿ ಪ್ರಾರಂಭಿಕ ಅವಧಿಯಲ್ಲಿ ಯೋಜನೆಯ ನೇತೃತ್ವ ವಹಿಸಿದ್ದರು. ಸಿಸ್ಟಂ ಇಂಜಿನಿಯರಿಂಗ್, ಉಡಾವಣಾ ವಾಹನ ವಿಷೇಶಜ್ಞರಾಗಿರುವ ಅವರು, ಚಂದ್ರಯಾನ-2 ಯೋಜನೆ ಲ್ಯಾಂಡರ್ ಎಂಜಿನ್ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಭಾರತೀಯ ಅಂತರಿಕ್ಷ ಸೊಸೈಟಿಯಿಂದ ‘ಸ್ಪೇಸ್ ಗೋಲ್ಡ್ ಮೆಡಲ್’ ಸೇರಿ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.
ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ; ಕೊಲೆಯಾಗಿ ಹೋದ ತಾಲೂಕು ಪಂಚಾಯತ್ ಉಪಾಧ್ಯಕ್ಷನ ಸಹೋದರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + one =
Remember me
