ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಡ್ರಗ್ಸ್‌ ಕೇಸ್‌ನಲ್ಲಿ ಸಿಲುಕಿದ್ದರೂ, ಆತ ಡ್ರಗ್ಸ್‌ ಸೇವನೆ ಮಾಡಿರುವುದಕ್ಕೆ ಅಧಿಕಾರಿಗಳು ತಮಗೆ ಸಾಕಷ್ಟು ಪುರಾವೆ ಸಿಕ್ಕಿದೆ ಎಂದು ಹೇಳುತ್ತಿದ್ದರೂ ಆತನ ಪರವಾಗಿ ಹಲವಾರು ಮಂದಿ ನಿಂತಿದ್ದಾರೆ, ಮಾತ್ರವಲ್ಲದೇ ತಮ್ಮ ಮಗ ತಪ್ಪೇ ಮಾಡಿಲ್ಲ, ಆತ ಮುಗ್ಧ ಎಂಬಂತೆ ಶಾರುಖ್‌ ಕೂಡ ನಡೆದುಕೊಳ್ಳುತ್ತಿದ್ದಾರೆ.
ಆದರೆ ಈ ನಡುವೆಯೇ ಇದೇ ರೀತಿ ಡ್ರಗ್ಸ್‌ ಕೇಸ್‌ನಲ್ಲಿ ಸಿಲುಕಿರುವ ನಟನೊಬ್ಬನ ಪುತ್ರನ ವಿಚಾರವೀಗ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ. ಆ ನಟನ ಹೆಸರು ಜಾಕಿ ಚಾನ್ , ಇವರು ಹಾಲಿವುಡ್‌ನ ಸುಪ್ರಸಿದ್ಧ ನಟ. ಫೈಟರ್‌ ಜಾಕಿ ಎಂದೇ ಇವರು ಸುಪ್ರಸಿದ್ಧರು. ಇವರ ಹೆಸರನ್ನು ಶಾರುಖ್‌ ಖಾನ್‌ಗೆ ಹೋಲಿಸುತ್ತಿರುವ ನೆಟ್ಟಿಗರು, ಜಾಕಿ ಅವರಿಂದ ಸ್ವಲ್ಪನಾದರೂ ಬುದ್ಧಿ ಕಲಿಯಿರಿ, ಅವರನ್ನು ನೋಡಿ ಪಾಠ ಕಲಿಯಿರಿ ಎಂದು ತಿವಿಯುತ್ತಿದ್ದಾರೆ.
ಅಷ್ಟಕ್ಕೂ ಜಾಕಿ ಹೆಸರೇಕೆ ಈಗ ಬಂದಿತು ಎಂದರೆ, 2014ರಲ್ಲಿ ಇವರ ಮಗನನ್ನು ಡ್ರಗ್ಸ್‌ ಕೇಸ್‌ನಲ್ಲಿ ಬಂಧಿಸಲಾಗಿತ್ತು. ಈತ ಡ್ರಗ್ಸ್‌ ಮಾರಾಟ ಹಾಗೂ ಸೇವನೆ ಮಾಡುತ್ತಿರುವ ಕುರಿತು ಸಾಕ್ಷ್ಯಾಧಾರಗಳು ಸಿಗುತ್ತಿದ್ದಂತೆಯೇ ಜಗತ್ತಿನ ಕ್ಷಮೆ ಕೋರಿದ್ದರು ಜಾಕಿ. ಮಾತ್ರವಲ್ಲದೇ ಶತಕೋಟಿ ಡಾಲರ್‌ಗಳ ಒಡೆಯನಾಗಿದ್ದ ಇವರು, ಮಗನ ವಿಷಯ ತಿಳಿಯುತ್ತಿದ್ದಂತೆಯೇ, 2,603 ಕೋಟಿ ರೂಪಾಯಿ ಆಸ್ತಿಯನ್ನು ಮಗನ ಹೆಸರಿಗೆ ಬರೆಯದೆ ಚಾರಿಟಿಗೆ (ದತ್ತಿ) ಕೊಟ್ಟುಬಿಟ್ಟರು. ತನ್ನ ಮಗನಾದ ಜೈಸಿಗೆ ನಯಾಪೈಸೆ ನೀಡುವುದಿಲ್ಲ ಎಂದು ಘೋಷಿಸಿದರು. ‘ಡ್ರಗ್​ ಪ್ರಕರಣದಲ್ಲಿ ಜೈಸಿ ಜೈಲು ಸೇರಿದ್ದಾನೆ. ನನ್ನ ಮಗನನ್ನು ಡ್ರಗ್ಸ್​ನಿಂದ ರಕ್ಷಣೆ ಮಾಡಲು ಆಗಿಲ್ಲ. ನನ್ನ ಮಗನನ್ನು ಉತ್ತಮವಾಗಿ ಬೆಳೆಸಲು ನನ್ನಿಂದ ಸಾಧ್ಯವಾಗಿಲ್ಲ’ ಎಂದು ಜಾಕಿ ಚಾನ್ ಬೇಸರ ಹೊರ ಹಾಕಿದ್ದರು.
ಅಂದಹಾಗೆ, ಜೇಸಿ ಜಾಕಿ ಮತ್ತು ಅವರ ಪತ್ನಿ ಜೋನ್ ಲಿನ್ ಅವರ ಏಕೈಕ ಪುತ್ರ, ಅವರು 1982 ರಲ್ಲಿ ವಿವಾಹವಾದರು. 2014 ರಲ್ಲಿ, ಜೇಸಿಯನ್ನು ಡ್ರಗ್ಸ್ ಇಟ್ಟುಕೊಂಡಿದ್ದಕ್ಕಾಗಿ ಬಂಧಿಸಲಾಗಿತ್ತು.
ಇದಾದ ಮೇಲೆಯೂ ಜೂನ್ 2019 ಮತ್ತು ಜೂನ್ 2020 ರ ನಡುವೆ 40 ಮಿಲಿಯನ್ ಡಾಲರ್‌ ಅಂದರೆ ಶತಕೋಟಿಗಳಿಗಿಂತಲೂ ಹೆಚ್ಚು ಗಳಿಸಿದ್ದಾರೆ ಎಂದು ಫೋರ್ಬ್ಸ್ ಅಂದಾಜಿಸಿದೆ. ಜಾಕಿ ಕೊನೆಯದಾಗಿ 2020 ರಲ್ಲಿ ಬಿಡುಗಡೆಯಾದ ವ್ಯಾನ್ಗಾರ್ಡ್ ಎಂಬ ಆಕ್ಷನ್ ಚಿತ್ರದಲ್ಲಿ ಕಾಣಿಸಿಕೊಂಡರು.
ಇದೇ ಕಾರಣಕ್ಕೆ ಈಗ ಎಲ್ಲರೂ ಜಾಕಿಯನ್ನು ಹೊಗಳುತ್ತಿದ್ದಾರೆ. ಅಲ್ಲದೆ, ಶಾರುಖ್​ಗೆ ಕಿವಿ ಮಾತು ಹೇಳುತ್ತಿದ್ದಾರೆ. ‘ಅವರನ್ನು ನೋಡಿ ನೀವು ಕಲಿಯಬೇಕಿದೆ’ ಎನ್ನುತ್ತಿದ್ದಾರೆ.
ಪ್ರತ್ಯೇಕವಾಗಿದ್ದ ಪತ್ನಿಯ ಬಳಿ ಹೋಗಿ ಅಪ್ಪಿಕೊಂಡ: ನೋಡುತ್ತಿದ್ದಂತೆಯೇ ಛಿದ್ರವಾಯಿತು ಎರಡೂ ದೇಹ!

ಮನಸ್ಸಿನ ನೆಮ್ಮದಿಗಾಗಿ ಮಾಟದ ಮೊರೆ ಹೋಗಿ 4.41 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಮಹಿಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 1 =
Remember me
