ಪಣಜಿ (ಗೋವಾ):ಕಳೆದ ಆಗಸ್ಟ್​ 23ರಂದು ನಿಗೂಢವಾಗಿ ಮೃತಪಟ್ಟ ಬಿಜೆಪಿ ನಾಯಕಿ ಸೊನಾಲಿ ಫೋಗಟ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ನಿರ್ಧಾರವೊಂದನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್ ಪ್ರಕಟಿಸಿದ್ದಾರೆ. ಸೋನಾಲಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಅವರು ಆದೇಶ ಹೊರಡಿಸಿದ್ದಾರೆ.
ಸೋನಾಲಿ ಅವರು ಸ್ನೇಹಿತರ ಜತೆ ಗೋವಾ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಅವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎಂದು ಮೊದಲಿಗೆ ನಂಬಲಾಗಿತ್ತು. ಆದರೆ ಅವರ ದೇಹದಲ್ಲಿ ಹಲವಾರು ಗಾಯಗಳಾಗಿರುವುದು ಮರಣೋತ್ತರ ಪರೀಕ್ಷೆ ವರದಿಯಿಂದ ಗೊತ್ತಾದ ಬಳಿಕ ಈ ಪ್ರಕರಣ ಕುತೂಹಲದ ತಿರುವು ಪಡೆದುಕೊಂಡಿತ್ತು.
ಇಷ್ಟೇ ಅಲ್ಲದೇ, ಗೋವಾದ ರೆಸ್ಟೊರೆಂಟ್​ ಕಂ ನೈಟ್​ಕ್ಲಬ್​ನಲ್ಲಿ ನಡೆದ ಪಾರ್ಟಿಯಲ್ಲಿ ಕೂಡ ಇವರು ಭಾಗವಹಿಸಿದ್ದು ಸಿಸಿಟಿವಿ ಫುಟೇಜ್​ನಿಂದ ಬಹಿರಂಗಗೊಂಡಿತ್ತು. ಅದೇ ದಿನ ಸೋನಾಲಿ ಆಪ್ತರಾದ ಸುಧೀರ್​ ಸಾಂಗ್ವಾನ್​ ಮತ್ತು ಸುಖ್ವಿಂದರ್​ ಸಿಂಗ್​ ಅವರು ನೀರಿನಲ್ಲಿ ಕೆಲ ಪದಾರ್ಥವನ್ನು ಬೆರೆಸಿ, ಬಲವಂತವಾಗಿ ಸೋನಾಲಿ ಅವರಿಗೆ ಕುಡಿಸಿರುವುದು ಸಿಸಿಟಿವಿಯಿಂದ ತಿಳಿದುಬಂದಿತ್ತು. ಆ ಬಳಿಕ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ಕೂಡ ತಪ್ಪು ಒಪ್ಪಿಕೊಂಡಿದ್ದರು.
ಈ ನಡುವೆ, ತಮ್ಮ ಪುತ್ರಿಯ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಅವರ ಪಾಲಕರು ಆಗ್ರಹಿಸಿದ್ದರು. ಗೋವಾ ಹೈಕೋರ್ಟ್​​ನಲ್ಲಿಯೂ ಅವರು ಅರ್ಜಿ ಸಲ್ಲಿಸಿದ್ದರು, ಜತೆಗೆ ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಯು.ಯು.ಲಲಿತ್​ ಅವರಿಗೂ ಪತ್ರ ಬರೆದಿದ್ದರು. ಇದೀಗ ಗೋವಾ ಸಿಎಂ ಈ ಆದೇಶ ಪ್ರಕಟಿಸಿದ್ದಾರೆ.
ಟಿಕ್ ಟಾಕ್ ಮೂಲಕ ಜನಪ್ರಿಯತೆ ಗಳಿಸಿದ್ದ ಸೋನಾಲಿ ಫೋಗಟ್ ಹರಿಯಾಣದ ಹಿಸಾರ್ ಮೂಲದವರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹರಿಯಾಣದ ಆದಂಪುರ ಕ್ಷೇತ್ರದಿಂದ ಬಿಜೆಪಿಯ ಟಿಕೆಟ್ ಪಡೆದು ಕುಲದೀಪ್ ಬಿಷ್ಣೋಯ್ ವಿರುದ್ಧ ಸ್ಪರ್ಧಿಸಿದ್ದರು. ಅವರು 2020ರಲ್ಲಿ ಬಿಗ್ ಬಾಸ್ ರಿಯಾಲಿಟಿ ಷೋನಲ್ಲಿ ಕೂಡ ಭಾಗವಹಿಸಿದ್ದರು. (ಏಜೆನ್ಸೀಸ್​)
ನಿಂತಿದ್ದ ಟ್ರಕ್​ಗೆ ಬಸ್​ ಡಿಕ್ಕಿ: ಬೆಳ್ಳಂಬೆಳಗ್ಗೆ ಭೀಕರ ಅಪಘಾತಕ್ಕೆ ಏಳು ಮಂದಿ ಬಲಿ- ಹಲವರಿಗೆ ಗಾಯ
ರಾಹುಲ್​ಗೆ ತಮಿಳಿನ ಬೆಡಗಿ! ಮದುವೆ ಸುದ್ದಿ ಕೇಳುತ್ತಲೇ ರೋಮಾಂಚನಗೊಂಡ ಸಂಸದ- ಮುಖದ ತುಂಬ ನಗು!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − 11 =
Remember me
