ನವದೆಹಲಿ:ಕಾಂಗ್ರೆಸ್‌ ಮುಖವಾಣಿ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯಲ್ಲಿನ ಅಕ್ರಮ ಹಣ ವರ್ಗಾವಣೆಯಲ್ಲಿ ಸಿಲುಕಿರುವ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್​ ಗಾಂಧಿಯವರಿಗೆ ಇದಾಗಲೇ ಜಾರಿ ನಿರ್ದೇಶನಾಲಯ ವಿಚಾರಣೆಗೆ ನೋಟಿಸ್​ ಜಾರಿ ಮಾಡಿತ್ತು. ರಾಹುಲ್​ ಗಾಂಧಿಯವರನ್ನು ಆರು ದಿನಗಳವರೆಗೆ ವಿಚಾರಣೆ ನಡೆಸಲಾಗಿದ್ದರೆ,ಕರೊನಾ ಕಾರಣದಿಂದ ಸೋನಿಯಾ ಗಾಂಧಿ ವಿಚಾರಣೆಗೆ ಹಾಜರು ಆಗಿರಲಿಲ್ಲ.
ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್​ ಜಾರಿ ಮಾಡಿದ್ದ ಮಾರನೆಯ ದಿನವೇ ಸೋನಿಯಾ ಅವರಿಗೆ ಕರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ನಿರ್ದೇಶನಾಲಯವು ಅವರ ಹಾಜರಿಗೆ ಮತ್ತೊಮ್ಮೆ ಸೂಚಿಸಿದ ಮರುದಿನ ಕರೊನಾ ಸೋಂಕು ಹೆಚ್ಚಿ ಸೋನಿಯಾ ಆಸ್ಪತ್ರೆ ಸೇರಿದ್ದರು.
ಕಳೆದ ಸೋಮವಾರ ಸೋನಿಯಾ ಗಾಂಧಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ ಗುರುವಾರ (ಜೂನ್​ 23) ಅವರ ಖುದ್ದು ಹಾಜರಿಗೆ ಜಾರಿ ನಿರ್ದೇಶನಾಲಯ ನೋಟಿಸ್​ ಜಾರಿ ಮಾಡಿದೆ.
ಆದರೆ ಇದೀಗ ಸೋನಿಯಾ ಗಾಂಧಿ ವಿಚಾರಣೆಗೆ ಹಾಜರಾಗಲು ಇನ್ನಷ್ಟು ಸಮಯವನ್ನು ಕೋರಿದ್ದಾರೆ. ತಮಗೆ ವೈದ್ಯರು ವಿಶ್ರಾಂತಿ ಸೂಚಿಸಿದ್ದರಿಂದ, ವಿಚಾರಣೆ ಹಾಜರಾಗಲು ಇನ್ನೂ ಕಾಲಾವಕಾಶ ಬೇಕು ಎಂದು ಅವರು ಜಾರಿ ನಿರ್ದೇಶನಾಲಯದೊಂದಿಗೆ ವಿನಂತಿ ಮಾಡಿಕೊಂಡಿದ್ದಾರೆ.
ಈ ಕುರಿತು ಕಾಂಗ್ರೆಸ್​ ಮುಖಂಡ ಜೈರಾಮ್​ ರಮೇಶ್​ ಟ್ವೀಟ್​ ಮಾಡಿದದು, ಸೋನಿಯಾಗಾಂಧಿವರಿಗೆ ವೈದ್ಯರು ಬೆಡ್​ರೆಸ್ಟ್​ ಹೇಳಿರುವ ಹಿನ್ನೆಲೆಯಲ್ಲಿ ಖುದ್ದು ಹಾಜರಿಯಿಂದ ಸದ್ಯ ವಿನಾಯಿತಿ ಕೋರಿ ಪತ್ರ ಬರೆದಿದ್ದಾರೆ ಎಂದಿದ್ದಾರೆ.
ಕೋವಿಡ್ ಸೋಂಕಿನ ಬಳಿಕ ಸೋನಿಯಾ ಅವರ ಮೂಗಿನಲ್ಲಿ ವಿಪರೀತ ರಕ್ತಸ್ರಾವ ಉಂಟಾದ ಕಾರಣ ಜೂನ್ 12ರಂದು ಹೊಸದಿಲ್ಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅವರಲ್ಲಿ ಲೋವರ್ ರೆಸ್ಪಿರೇಟರಿ ಟ್ರ್ಯಾಕ್ಟ್‌ನಲ್ಲಿ ಶಿಲೀಂದ್ರ ಸೋಂಕು ಕೂಡ ಪತ್ತೆಯಾಗಿತ್ತು ಎನ್ನಲಾಗಿದೆ.https://www.vijayavani.net/s-rahul-gandhi-ed-enquiry-for-sixth-day/https://www.vijayavani.net/s-rahul-gandhi-ed-enquiry-for-sixth-day/
Since she has been strictly advised rest at home following her hospitalisation on account of Covid and lung infection, Congress President Smt. Sonia Gandhi has written to ED today seeking the postponement of her appearance there by a few weeks till she has recovered completely.— Jairam Ramesh (@Jairam_Ramesh)June 22, 2022
Since she has been strictly advised rest at home following her hospitalisation on account of Covid and lung infection, Congress President Smt. Sonia Gandhi has written to ED today seeking the postponement of her appearance there by a few weeks till she has recovered completely.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + two =
Remember me
