ನವದೆಹಲಿ:ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇದಾಗಲೇ ಆರೋಗ್ಯ ತಪಾಸಣೆಗೆಂದು ಹಲವು ಬಾರಿ ವಿದೇಶಕ್ಕೆ ಹೋಗಿದ್ದಾರೆ. ಈಗ ಪುನಃ ಅವರು ವಿದೇಶಕ್ಕೆ ಚಿಕಿತ್ಸೆಗೆಂದು ತೆರಳಲಿದ್ದಾರೆ. ಅವರ ಜತೆಗೆ ಮಕ್ಕಳಾದ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಕೂಡ ಎಂದು ಕಾಂಗ್ರೆಸ್​ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್​ ತಿಳಿಸಿದ್ದಾರೆ.
ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣಾ ನಡೆಯಲಿದ್ದು, ಚುನಾವಣಾ ದಿನಾಂಕವನ್ನು ಇನ್ನು ಕೆಲ ದಿನಗಳಲ್ಲೇ ಘೋಷಣೆ ಮಾಡಲಾಗುತ್ತದೆ ಎಂದು ಪಕ್ಷ ಮಾಹಿತಿ ನೀಡಿದೆ. ಇದೇ 28ರಂದು ಪಕ್ಷ ಸಭೆ ಸೇರಲಿದ್ದು, ಚುನಾವಣೆಯ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಇಂದು ಕಾಂಗ್ರೆಸ್ ನಾಯಕಕೆ.ಸಿ.ವೇಣುಗೋಪಾಲ್ಹೇಳಿದ್ದಾರೆ. ಇದರ ಬೆನ್ನಲ್ಲೇ ಸೋನಿಯಾ ಕುಟುಂಬ ವಿದೇಶಕ್ಕೆ ಹೋಗುತ್ತಿರುವುದು ಕುತೂಹಲ ಮೂಡಿಸಿದೆ.
ನ್ಯಾಷನಲ್​ ಹೆರಾಲ್ಡ್​ನ ಸಹಸ್ರಾರು ಕೋಟಿ ರೂಪಾಯಿ ಹಣದ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ (ಇಡಿ) ವಿಚಾರಣೆ ಎದುರಿಸುತ್ತಿರುವ ಸೋನಿಯಾ ಗಾಂಧಿ ಅವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಇ.ಡಿಯಿಂದ ನೋಟಿಸ್​ ಜಾರಿಯಾಗುತ್ತಿದ್ದಂತೆಯೇ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಎರಡನೆಯ ಬಾರಿ ನೋಟಿಸ್​ ಜಾರಿಯಾದಾಗ ಕರೊನಾ ತೀವ್ರ ಸ್ವರೂಪ ಪಡೆದುಕೊಂಡು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರನ್ನು ಕೆಲ ದಿನಗಳ ಬಳಿಕ ಡಿಸ್​ಚಾರ್ಜ್​ ಮಾಡಲಾಗಿತ್ತು.
ಇದಾಗಲೇ ಇ.ಡಿಯ ಮುಂದೆ ಹಾಜರಾಗಿರುವ ಸೋನಿಯಾ ಗಾಂಧಿ, ವಿಚಾರಣೆ ಎದುರಿಸಿದ್ದಾರೆ. ಈ ನಡುವೆಯೇ ಅವರಿಗೆ ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಕಾರಣದಿಂದ ಚಿಕಿತ್ಸೆಗೆಂದು ವಿದೇಶಕ್ಕೆ ಹೋಗಲಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ.
ತಪಾಸಣೆ ಬಳಿಕ ಸೋನಿಯಾ ಗಾಂಧಿ ಅನಾರೋಗ್ಯಕ್ಕೀಡಾಗಿರುವ ತಮ್ಮ ತಾಯಿಯನ್ನು ಭೇಟಿ ಮಾಡಲಿದ್ದಾರೆ. ಬಳಿಕ ದೆಹಲಿ ವಾಪಸ್​ ಆಗಲಿದ್ದಾರೆ ಎಂದು ಜೈರಾಂ ರಮೇಶ್​ ತಿಳಿಸಿದ್ದಾರೆ. ಕರೊನೋತ್ತರ ಸಮಸ್ಯೆಗಳಿಂದ ಬಳಲುತ್ತಿರುವ ಸೋನಿಯಾ ಅವರು, ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಇದರಿಂದ ಹೆಚ್ಚಿನ ತಪಾಸಣೆಗಾಗಿ ವಿದೇಶಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಪಕ್ಷ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.
ಆದರೆ ಯಾವಾಗ ಹೋಗುತ್ತಿದ್ದಾರೆ ಅಥವಾ ಯಾವ ಸ್ಥಳಕ್ಕೆ ಹೋಗುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ತಿಳಿಸಿಲ್ಲ. ಆದರೆ ಸೆಪ್ಟಂಬರ್‌ 4ರಂದು ರಾಹುಲ್‌ ಗಾಂಧಿ ಅವರು ‘ಮೆಹಂಗಾಯಿ ಪರ್‌ ಹಲ್ಲಾ ಬೋಲ್‌’ ಅಭಿಯಾನದಲ್ಲಿ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್​)
ಮೇಕೆ ತಂದಿಟ್ಟ ಸಂಕಷ್ಟ: ರಾತ್ರಿ ಸುಂದರ ಕನಸು ಕಂಡ, ಬೆಳಗ್ಗೆ ಮರ್ಮಾಂಗವೇ ಕಟ್​- ಆಗಿದ್ದೇನು ನೋಡಿ..

ನನ್ನ ಚಿತ್ರಕ್ಕೆ ನೀವೇ ಹೀರೋಯಿನ್​: ಖ್ಯಾತ ನಟಿಗೆ ‘777 ಚಾರ್ಲಿ’ ನಿರ್ದೇಶಕನ ಹೆಸರಲ್ಲಿ ಕಾಲ್​! ಮುಂದಾಗಿದ್ದೇ ಬೇರೆ…

ಪೈಗಂಬರ್ ವಿರುದ್ಧ ಹೇಳಿಕೆ ಆರೋಪ: ಅಮಾನತುಗೊಂಡ ಶಾಸಕನಿಗೆ ಒಂದೇ ಗಂಟೆಯಲ್ಲಿ ಸಿಗ್ತು ಜಾಮೀನು- ಕೋರ್ಟ್​ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + thirteen =
Remember me
