ಹೈದರಾಬಾದ್​:ಕಾಂಗ್ರೆಸ್​ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಜೀವನ ಚರಿತ್ರೆಯನ್ನು ಶಾಲೆಯ ಮಕ್ಕಳು ಕಲಿಯಬೇಕು ಎನ್ನುವ ಉದ್ದೇಶದಿಂದ ತೆಲಂಗಾಣದ ಶಾಲೆಯಲ್ಲಿ ಇದನ್ನು ಪಠ್ಯಕ್ರಮದಲ್ಲಿ ಸೇರಿಸುವಂತೆ ಕೋರಲಾಗಿದೆ.
ಈ ಕುರಿತು ತೆಲಂಗಾನ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್ ಅವರಿಗೆ ಕಾಂಗ್ರೆಸ್​ ಪಕ್ಷದ ವಕ್ತಾರರು ಮನವಿ ಸಲ್ಲಿಸಿದ್ದು, ಪಠ್ಯವಾಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ನಿನ್ನೆ ಸೋನಿಯಾಗಾಂಧಿಯವರು 74ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಮಯದಲ್ಲಿ ಸೋನಿಯಾಗಾಂಧಿಯವರ ಅಪರೂಪದ ಜೀವನ ಚರಿತ್ರೆಯನ್ನು ಮಕ್ಕಳು ಓದುವ ಅಗತ್ಯವಿದೆ. ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಅಮೂಲ್ಯವಾದದ್ದನ್ನು ನೀಡುವ ಉದ್ದೇಶದಿಂದ ಈ ಮನವಿ ಸಲ್ಲಿಸಲಾಗುತ್ತಿದೆ ಎಂದಿದ್ದಾರೆ ಎಐಸಿಸಿ ವಕ್ತಾರ ಶ್ರವನ್​ ದಾಸೋಜು.
ಇದನ್ನೂ ಓದಿ:ಮಂಡಿ ನೋವಿಗೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಪರಿಹಾರ ಏನಿದೆ?
ಸೋನಿಯಾ ಗಾಂಧಿ ಈ ದೇಶಕ್ಕಾಗಿ ಮಾಡಿದ ಸೇವೆ ಹಾಗೂ ಬದ್ಧತೆಯನ್ನ ಗಮನದಲ್ಲಿಟ್ಟುಕ್ಕೊಂಡು ಸೋನಿಯಾ ಗಾಂಧಿಗೆ ಈ ಕೊಡುಗೆ ಮೂಲಕ ಗೌರವಿಸೋದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಸೋನಿಯಾ ಬೆಂಬಲವಿಲ್ಲದೇ ತೆಲಂಗಾಣ ಉದಯವಾಗುತ್ತಿರಲಿಲ್ಲ ಎಂದು ಈ ಹಿಂದೆ ಕೆ ಚಂದ್ರಶೇಖರ್​ ರಾವ್​ ಅವರು ಹೇಳಿರುವ ಮಾತನ್ನೇ ಪುನಃ ನೆನಪಿಸಿರುವ ಎಐಸಿಸಿ, ಸೋನಿಯಾಗಾಂಧಿಯವರ ಪಠ್ಯವನ್ನು ಅಳವಡಿಸುವ ಮೂಲಕ ಅವರಿಗೆ ಈ ರೀತಿಯಾಗಿ ಕೊಡುಗೆ ನೀಡಬಹುದು ಎಂದು ಮನವಿ ಮಾಡಿದ್ದಾರೆ.
ತೆಲಂಗಾಣ ರಾಜ್ಯದ ಉದಯದ ಕುರಿತಂತೆ 10ನೇ ವರ್ಗದ ಪಠ್ಯಪುಸ್ತಕದಲ್ಲಿ ರಾವ್​ ಅವರ ಉಪವಾಸದ ಬಗ್ಗೆ ಉಲ್ಲೇಖವಿದ್ದು, ಅದರಲ್ಲಿ ಸೋನಿಯಾಗಾಂಧಿ ಹೆಸರು ಇಲ್ಲ. ಇದು ಸರಿಯಲ್ಲ ಎಂದಿರುವ ಎಐಸಿಸಿ ಈಗ ಅವರ ಜೀವನಚರಿತ್ರೆಯನ್ನು ಮಕ್ಕಳು ಓದಲಿ ಎಂದಿದೆ.
ಒಹೋ ಹವಾಯಿ ಚಪ್ಪಲ್ಲಾ ಎಂದು ಕಾಲೆಳೆದವನಿಗೆ ಸ್ಮೃತಿ ಇರಾನಿ ಏನಂದ್ರು ಗೊತ್ತಾ?

ಬೆಲ್ಟ್​ನಿಂದ ಹೊಡೀತಾರೆ, ಬೆರಳನ್ನು ಮುರಿದು ಹಿಂಸಿಸುತ್ತಾರೆ- ಮೃತ ನಟಿಯ ಮೆಸೇಜ್​ ಶೇರ್​ ಮಾಡಿದ ಅಣ್ಣ

ಅರ್ಚಕರು ಅರೆಬೆತ್ತಲೇಕೆ ಎಂದು ಪ್ರಶ್ನಿಸಿ ಗಲಾಟೆಗೆ ಹೊರಟ ಹೋರಾಟಗಾರ್ತಿ ಅರೆಸ್ಟ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × five =
Remember me
