ಮುಂಬೈ:ಕಳೆದ ವರ್ಷದ ಲಾಕ್‌ಡೌನ್‌ ಸಮಯದಿಂದ ಹಿಡಿದು ಈ ಒಂದೂವರೆ ವರ್ಷದಲ್ಲಿ ಸಹಾಯ ಹಸ್ತ ಚಾಚಿರುವವರ ಪೈಕಿ ಸಾಕಷ್ಟು ಹೆಸರು ಮಾಡಿರುವವರಲ್ಲಿ ಬಾಲಿವುಡ್‌ ನಟ ಸೋನು ಸೂದ್‌ ಕೂಡ ಒಬ್ಬರು. ಇದಾಗಲೇ ಹಲವಾರು ಮಂದಿಗೆ ತಮ್ಮ ಕೈಲಾದ ಸೇವೆ ಮಾಡುತ್ತಾ ದಿನವೂ ಸುದ್ದಿಯಾಗುತ್ತಿರುವ ಸೋನು ಇದೀಗ ತಮಾಷೆಗೆ ವಿಡಿಯೋ ಒಂದನ್ನು ಶೇರ್‌ ಮಾಡಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ.
ಇದೀಗ ಅವರು ಡೆಲಿವರಿ ಬಾಯ್‌ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು, ಮಾಲ್‌ ಬಂದ್‌ ಆಗಿದೆ ಎಂದು ಹೇಳಿದವರು ಯಾರು? ನನ್ನ ಬಳಿ ನೋಡಿ ಎಲ್ಲವೂ ರೆಡಿ ಇದೆ. ಏನು ಬೇಕಾದರೂ ಖರೀದಿ ಮಾಡಬಹುದು. ದುಬಾರಿ ಬೆಲೆಯ ಮಾಲ್‌ಗಳೂ ಇವೆ, ಮೊಟ್ಟೆ, ಚಿಪ್ಸ್‌, ದೊಡ್ಡ- ಚಿಕ್ಕ ಸೈಜ್‌ ಬ್ರೆಡ್‌ ಸೇರಿದಂತೆ ಸೂಪರ್‌ ಮಾರ್ಕೆಟ್‌ನಲ್ಲಿ ಸಿಗುವ ಎಲ್ಲಾ ರೀತಿ ತಿಂಡಿಗಳೂ ಇವೆ ಎಂದಿದ್ದಾರೆ.
ನಿಮಗೆ ಏನು ಬೇಕೋ ಅವುಗಳನ್ನು ಬೇಗ ಬೇಗ ಆರ್ಡರ್‌ ಮಾಡಿ, ನನಗೆ ಡೆಲಿವರಿ ಟೈಂ ಆಗಿದೆ. ಆರ್ಡರ್‌ ಮಾಡಿದರೆ ತಲುಪಿಸುವೆ ಎಂದು ಸೈಕಲ್‌ ಏರಿ ಹೊರಟಿದ್ದಾರೆ ಸೋನು. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.
ಇಲ್ಲಿದೆ ನೋಡಿ ವಿಡಿಯೋ:


A post shared by Sonu Sood (@sonu_sood)

28 ಬಾರಿ ಚಿನ್ನ ಗೆದ್ದೆ, ನನ್ನ ಈ ಸ್ಥಿತಿ ಬರಬಾರದು… ದೇಶದ ಮೊದಲ ಪ್ಯಾರಾಶೂಟರ್‌ ಕಣ್ಣೀರು

ಸ್ಟುಪಿಡ್‌ ಇಂಡಿಯನ್‌, ನೀನೂ ಕರಿಯಳು, ನಿನ್ನ ಹೃದಯನೂ ಕಪ್ಪು ಎಂದು ಜೈಲು ಸೇರಿದ ಸಿಂಗಪುರದ ಮಹಿಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
