ನಾಸಿಕ್​ (ಮಹಾರಾಷ್ಟ್ರ): ಸೂಫಿ ಬಾಬಾ ಎಂದೇ ಖ್ಯಾತರಾಗಿದ್ದ ಅಫ್ಘಾನಿಸ್ತಾನ ಮೂಲದ ಮುಸ್ಲಿಂ ಆಧ್ಯಾತ್ಮಿಕ ಗುರು ಖ್ವಾಜಾ ಸಯ್ಯದ್ ಚಿಶ್ತಿ ಅವರನ್ನು ದುಷ್ಕರ್ಮಿಗಳು ಗುಡು ಹಾರಿಸಿ ಹತ್ಯೆ ಮಾಡಿದ್ದಾರೆ. ಇವರಿಗೆ 35 ವರ್ಷ ವಯಸ್ಸಾಗಿತ್ತು.
ಮುಂಬೈನಿಂದ ಸುಮಾರು 200 ಕಿಮೀ ದೂರದಲ್ಲಿರುವ ನಾಸಿಕ್​ ಬಳಿಯ ಯೋಲಾ ಪಟ್ಟಣದ ಎಂಐಡಿ ಪ್ರದೇಶದ ಬಳಿ ಈ ಘಟನೆ ನಡೆದಿದೆ. ಬಾಬಾ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಕೊಲೆಯಾದ ನಂತರ ಆರೋಪಿಗಳು ಎಸ್‍ಯುವಿ ಕಾರಿನಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಖ್ವಾಜಾ ಸಯ್ಯದ್ ಚಿಶ್ತಿ ಹಲವಾರು ವರ್ಷಗಳಿಂದ ನಾಸಿಕ್‍ನ ಯೋಲಾ ಪಟ್ಟಣದಲ್ಲಿ ವಾಸಿಸುತ್ತಿದ್ದರು. ಸೂಫಿ ಬಾಬಾನ ಚಾಲಕನೇ ಈ ಘಟನೆಯ ಪ್ರಮುಖ ಆರೋಪಿ ಎನ್ನಲಾಗಿದೆ. ಈ ಹತ್ಯೆಯ ಹಿಂದಿನ ಉದ್ದೇಶ ಏನು ಎಂಬುವುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ನ್ಯಾಯಾಂಗ ಇತಿಹಾಸದಲ್ಲೇ ಅಪರೂಪದ ಘಟನೆ: ‘ಸುಪ್ರೀಂ’ ವಿರುದ್ಧವೇ ತಿರುಗಿಬಿದ್ದ ನಿವೃತ್ತ ನ್ಯಾಯಮೂರ್ತಿಗಳು, ಸೇನಾ ಅಧಿಕಾರಿಗಳು!

ಭದ್ರತಾ ಸಿಬ್ಬಂದಿಗೆ ಶಾಕ್​ ಕೊಟ್ಟ ಮಮತಾ: ಇನ್ಮುಂದೆ ಮೊಬೈಲ್​ಫೋನ್​ ಬ್ಯಾನ್​- ಇದಕ್ಕೆ ಕಾರಣ ಕಬ್ಬಿಣದ ರಾಡ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
