ಬೆಂಗಳೂರು:ಇಂದು ರಾತ್ರಿ ಆಗಸದಲ್ಲಿ ಕಾಣಿಸಲಿದೆ ವಿಸ್ಮಯ. ಈ ವರ್ಷದ ಅತಿದೊಡ್ಡ ಸೂಪರ್ ಮೂನ್ ಇಂದು ರಾತ್ರಿ ಗೋಚರಿಸಲಿದ್ದು, ಇದು ಅತಿ ದೊಡ್ಡ ಖಗೋಳ ಘಟನೆಗಳಲ್ಲಿ ಒಂದಾಗಿದೆ. ಚಂದ್ರ ಭೂಮಿಗೆ ಅತ್ಯಂತ ಹತ್ತಿರದಲ್ಲಿ ಇರಲಿದ್ದು, ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಗೋಚರಿಸುತ್ತಾನೆ.
ಸೂಪರ್​ಮೂನ್​ ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ಸಂಭವಿಸುತ್ತವೆ. ಇದನ್ನು ‘ಸ್ಟ್ರಾಬೆರಿ ಮೂನ್’ ಎಂದೂ ಕರೆಯುತ್ತಾರೆ. ಈ ಬಾರಿಯ ಸೂಪರ್ ಮೂನ್ ಅನ್ನು ಬಕ್ ಸೂಪರ್ ಮೂನ್, ಥಂಡರ್ ಸೂಪರ್ ಮೂನ್, ಹೇ ಮೂನ್, ಮೀಡ್ ಮೂನ್ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಹುಣ್ಣಿಮೆಯಂದು ಭೂಮಿಯ ಒಂದು ಬದಿಯಲ್ಲಿ ಸೂರ್ಯ ಇದ್ದರೆ, ಅದಕ್ಕೆ ತದ್ವಿರುದ್ಧವಾಗಿ ಹಿಂಬದಿಯಲ್ಲಿ ಚಂದ್ರನಿರುತ್ತಾನೆ. ಅಂದರೆ ಅಂದು ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಇರುತ್ತದೆ. ಸೂರ್ಯನ ಪ್ರಕಾಶದಲ್ಲಿ ಇಡೀ ಚಂದ್ರ ಹೊಳೆಯುತ್ತಿರುವುದನ್ನು ಭೂಮಿಯಿಂದ ಕಾಣಬಹುದು. ಇದೇ ಸೂಪರ್​ಮೂನ್​ ವೈಶಿಷ್ಠ್ಯ.
ಚಂದ್ರನು ಪ್ರತಿದಿನಕ್ಕಿಂತ ದೊಡ್ಡದಾಗಿ, ಪ್ರಕಾಶಮಾನವಾಗಿ ಮತ್ತು ಕೆಂಪು ಬಣ್ಣದಲ್ಲಿ ಗೋಚರಿಸುತ್ತಾನೆ. ಇದಲ್ಲದೇ, ಸೂಪರ್ ಮೂನ್ ಸಂಭವಿಸಿ ಕೆಲವು ಗಂಟೆಗಳ ನಂತರ ಹುಣ್ಣಿಮೆ ಕಾಣಿಸಲಿದ್ದು, 2-3 ದಿನಗಳವರೆಗೆ ಇದನ್ನು ನೋಡಬಹುದಾಗಿದೆ. ವಾಸ್ತವವಾಗಿ ಇದು ಹುಣ್ಣಿಮೆಯಾಗಿರುವುದಿಲ್ಲ, ಆದರೆ ಚಂದ್ರನ ಗಾತ್ರದಿಂದಾಗಿ, ಅದು ಅದೇ ರೀತಿಯಲ್ಲಿ ಗೋಚರಿಸುತ್ತದೆ.
‘ಸೂಪರ್​ಮೂನ್’ ಎಂಬ ಪದವನ್ನು 1979 ರಲ್ಲಿ ರಿಚರ್ಡ್ ನೊಲ್ಲೆ ಎಂಬುವವರು ಹುಟ್ಟುಹಾಕಿದರು. ಭೂಮಿ ಮತ್ತು ಚಂದ್ರನ ನಡುವಿನ ಅಂತರವು 4,05,500 ಕಿ.ಮೀ. ಸೂಪರ್ ಮೂನ್ ಎಂಬ ಪದವು 1979 ರಲ್ಲಿ ಹುಟ್ಟಿಕೊಂಡಿತು. ಈ ಪದವನ್ನು ಜ್ಯೋತಿಷಿ ರಿಚರ್ಡ್ ನೋಯೆಲ್ ಸೃಷ್ಟಿಸಿದರು. ಚಂದ್ರನು ಭೂಮಿಯ ಪರಿಧಿಯ 90 ಪ್ರತಿಶತದೊಳಗೆ ಬಂದಾಗ, ಈ ಖಗೋಳ ಘಟನೆಯನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಇಂದು ಮಧ್ಯರಾತ್ರಿ 12.08 ಕ್ಕೆ ಸೂಪರ್​ ಮೂನ್ ವೀಕ್ಷಿಸಬಹುದಾಗಿದೆ.
ಅಂದಹಾಗೆ ಈ ಸೂಪರ್​ಮೂನ್​ ಅನ್ನು ಇಂದು ಮಧ್ಯರಾತ್ರಿ 12:07 ಕ್ಕೆ ನೋಡಬಹುದು, ಇಂದು ಮಿಸ್​ ಆದರೆ ನೀವು 2023ರ ಜುಲೈ 3ರ ವರೆಗೆ ಕಾಯಬೇಕಿದೆ.
VIDEO: ‘ನಾಚಿಗೆ ಆಗಲ್ವಾ? ರಾಜಕಾರಣಿ ಥರ ಕಾಣಿಸ್ತೀರಿ’ ಎಂದು ಹೆಡ್​ಮಾಸ್ಟರ್​ ಸಂಬಳ ಕಟ್​ ಮಾಡಿದ ಮ್ಯಾಜಿಸ್ಟ್ರೇಟ್​!

ಬ್ಲಾಕ್​ಬಸ್ಟರ್​ ಸಿನಿಮಾ ‘ಪುಷ್ಪಾ’ ನೋಡಿ ಪ್ರೇರೇಪಿತನಾದ ಅಭಿಮಾನಿ ಈಗ ಪೊಲೀಸರ ಅತಿಥಿ!

‘ಹಂಸನಂತೆ ಇದ್ದ ಹಂಸಲೇಖರನ್ನು ಕಂಸನಂತೆ ಮಾಡಿದ್ದೀರಿ, ಸಾಹಿತಿಗಳಿಗೆ ಬುದ್ಧಿ ಹೇಳಿ ಇಲ್ಲವೇ ಕಾಲನ ಉಪಚಾರಕ್ಕೆ ಸಿದ್ಧರಾಗಿ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − thirteen =
Remember me
