ಅಬುದಾಬಿ:ಗಂಟೆಗೆ ಸುಮಾರು 70 ಕಿ.ಮೀ ವೇಗದಲ್ಲಿ ಓಡುವ, ವಿಶ್ವದ ಅತ್ಯಂತ ವೇಗವಾಗಿ ಓಡುವ ಪಕ್ಷಿ ಎಂದು ಹೆಸರಾಗಿರುವುದ ಆಸ್ಟ್ರಿಚ್‌. ಇದಕ್ಕೆ ಉಷ್ಟ್ರಪಕ್ಷಿ ಎಂದೂ ಕರೆಯಲಾಗುತ್ತದೆ.
ಈ ಪಕ್ಷಿಯ ಜತೆ ಸೌದಿ ರಾಜಕುಮಾರ ಶೇಖ್‌ ಹಮ್ದನ್‌ ಬಿನ್‌ ಮುಹಮ್ಮದ‌ ರಶೀದ್‌ ಅಲ್‌ ಮುಕ್ತಮ್‌ ಸೈಕಲ್‌ ರೇಸ್‌ ಮಾಡಿದ್ದಾರೆ. ನೀ ಮುಂದೋ… ನಾ ಮುಂದೋ ಎಂದು ಕೇಳುವಂತೆ ಸೈಕಲ್‌ ರೇಸ್‌ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿಯಾಗಿರುವ ರಾಜಕುಮಾರ, ತಮ್ಮ ಈ ರೇಸ್‌ ಅನ್ನು ಇನ್‌ಸ್ಟಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. ಅತ್ತ ಇತ್ತ ಆಸ್ಟ್ರೀಚ್‌ಗಳು ಓಡಾಡುತಲಿದ್ದು, ರಾಜಕುಮಾರ ನಡುವೆ ಸೈಕಲ್‌ ಸವಾರಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಸೈಕಲ್‌ಗಿಂತಲೂ ಪಕ್ಷಿಯೇ ಹಲವು ಸಂದರ್ಭಗಳಲ್ಲಿ ಮುಂದೆ ಇದೆ. ಆದರೆ ರಾಜಕುಮಾರ ಜಿದ್ದಿಗೆ ಬಿದ್ದವರಂತೆ ಅದನ್ನು ಹಿಂದಿಕ್ಕುವ ಪ್ರಯತ್ನ ಮಾಡಿದ್ದಾರೆ. ಈ ರೇಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನೀವೂ ನೋಡಿ ಈ ವಿಡಿಯೋ. ಕೆಳಗಿನ ಲಿಂಕ್‌ ಕ್ಲಿಕ್ಕಿಸಿ…
https://www.instagram.com/tv/CJf7QhPJLAy/?utm_source=ig_embed
ಡಿಪ್ಲೋಮಾ, ಬಿಇ ಮಾಡಿದ ಫ್ರೆಷರ್ಸ್‌ಗೆ ಕೆಪಿಟಿಸಿಎಲ್‌ನಲ್ಲಿ ಖಾಲಿ ಇವೆ 200 ಹುದ್ದೆಗಳು

ಸಮೋಸಾ ಕದ್ದು ಗುದದ್ವಾರದಲ್ಲಿ ಇಟ್ಟುಕೊಂಡ ಕೈದಿ- ಕಾರಣ ಕೇಳಿ ‘ಅಯ್ಯೋ ಪಾಪಾ‘ ಎಂದ ಪೊಲೀಸರು!

ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಲೇ ನಿಗೂಢ ಕಣ್ಮರೆಯಾದ ಜಗತ್ತಿನ ಸಿರಿವಂತ! ಏನಿದರ ರಹಸ್ಯ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × two =
Remember me
