ಕೋಲ್ಕತ:ಕಳೆದ ಶನಿವಾರದಂದು ಲಘು ಹೃದಯಾಘಾತಕ್ಕೊಳಗಾಗಿ ಕೋಲ್ಕತದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್​ ಗಂಗೂಲಿ ಅವರ ಆರೋಗ್ಯ ಸುಧಾರಿಸಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಮಾಡಲಾಗಿದೆ.
ಲಘು ಹೃದಯಾಘಾತಕ್ಕೊಳಗಾಗಿ ಆಯಂಜಿಯೊಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿರುವ ಗಂಗೂಲಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.ಡಿಸ್​ಚಾರ್ಜ್​ ಆದನಂತರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನನಗೆ ಉತ್ತಮ ಚಿಕಿತ್ಸೆ ನೀಡಿದ ವುಡ್‌ಲ್ಯಾಂಡ್ ಆಸ್ಪತ್ರೆ ಹಾಗೂ ವೈದ್ಯರಿಗೆ ಧನ್ಯವಾದಗಳನ್ನು ಹೇಳಲಿಚ್ಛಿಸುತ್ತೇನೆ. ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಎಂದು ತಿಳಿಸಿದ್ದಾರೆ.
#WATCH| "I thank the doctors at the hospital for the treatment. I am absolutely fine," says BCCI President Sourav Ganguly after being discharged from Kolkata's Woodlands Hospital.pic.twitter.com/BUwsz5h1FQ
— ANI (@ANI)January 7, 2021

48 ವರ್ಷದ ಸೌರವ್ ಗಂಗೂಲಿ ಅವರಿಗೆ ಜನವರಿ 2 ಶನಿವಾರದಂದು ವ್ಯಾಯಾಮ ನಡೆಸುತ್ತಿದ್ದ ವೇಳೆ ಲಘು ಹೃದಯಾಘಾತ ಕಾಣಿಸಿಕೊಂಡಿತ್ತು. ಅವರ ಹೃದಯದ ರಕ್ತಾನಾಳಗಳಲ್ಲಿ ಬ್ಲಾಕ್‌ಗಳು ಕಂಡುಬಂದ ಕಾರಣ ಆಯಂಜಿಯೊಪ್ಲಾಸ್ಟಿ ನಡೆಸಿ, ಒಂದು ಕಡೆ ಸ್ಟಂಟ್ ಆಳವಡಿಸಲಾಗಿತ್ತು.
ನಿನ್ನೆಯಷ್ಟೇ ಇವರ ಆರೋಗ್ಯದ ಬಗ್ಗೆ ಮಾತನಾಡಿದ್ದ ಈ ಸಂದರ್ಭದಲ್ಲಿ ಮಾತನಾಡಿರುವ ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ, ಸೌರವ್​ ಗಂಗೂಲಿ ಅವರ ಹೃದಯ 20 ವರ್ಷದವರಿದ್ದಾಗ ಹೇಗಿದ್ದರೋ ಅಷ್ಟೇ ಆರೋಗ್ಯವಾಗಿದೆ. ಅವರು ಮ್ಯಾರಥಾನ್​ ಓಡಬಹುದು, ವಿಮಾನ ಹಾರಾಟ ನಡೆಸಬಹುದು ಎಂದಿದ್ದರು.
ಈಗ ಲಘು ಹೃದಯಾಘಾತಕ್ಕೆ ಒಳಗಾಗಿದ್ದರಷ್ಟೇ. ಇದು ಸೌರವ್​ ಗಂಗೂಲಿಯವರ ಜೀವನಶೈಲಿ ಅಥವಾ ಜೀವಿತಾವಧಿಯ ಮೇಲೆ ಪರಿಣಾಮ ಬೀರುವುದಿಲ್ಲ. ಅವರು ಬೇರೆಯವರಂತೆ ಸಾಮಾನ್ಯ ಜೀವನವನ್ನು ನಡೆಸಲಿದ್ದಾರೆ. ಕ್ರಿಕೆಟ್​ಗೆ ಬೇಕಾದರೂ ಹಿಂದಿರುಗಬಹುದು. ಅವರು ಮನೆಗೆ ತಲುಪಿದ ಕೂಡಲೇ ಮನೆಯಿಂದ ಕೆಲಸ ಮಾಡಲು ಪ್ರಾರಂಭಿಸಬಹುದು ಎಂದು ದೇವಿ ಶೆಟ್ಟಿ ಹೇಳಿದ್ದರು.
ಆಸ್ಪತ್ರೆಗೆ ದಾಖಲಾಗಿರುವ ಸೌರವ್​ ಗಂಗೂಲಿಯ ಹೃದಯ ಹೇಗಿದೆ? ಡಾ.ದೇವಿ ಶೆಟ್ಟಿ ಏನು ಹೇಳಿದರು ನೋಡಿ..

ಪತ್ನಿಗೊಂದು, ಆಕೆಗೊಂದು ಮನೆ: ಹೆಂಡ್ತಿ ಕೈಲೇ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಕೊಪ್ಪಳದ ಇಂಜಿನಿಯರ್​!

ಲವ್​ ಮಾಡೋದು ತಪ್ಪಲ್ಲ, ಪ್ರೇಮಿಗಳನ್ನು ಶಿಕ್ಷಿಸುವುದು ಗಂಭೀರ ಅಪರಾಧ ಎಂದ ಸುಪ್ರೀಂ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × four =
Remember me
