ವಾರಾಣಸಿ (ಉತ್ತರ ಪ್ರದೇಶ):ಕಾಶಿ ವಿಶ್ವನಾಥ ಸ್ವಾಮಿ ದೇಗುಲದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದಂತೆಯೇ ಕಾಶಿಯ ವೈಭವ ಮತ್ತೆ ಮರುಕಳಿಸಿದೆ. ಕಾಶಿಯತ್ತ ಇಡೀ ವಿಶ್ವವೇ ಬೆರಗುಗಣ್ಣಿನಿಂದ ಪುನಃ ನೋಡುವಂತಾಗಿದೆ. ಇದರಿಂದಾಗಿ ಕಾಶಿಗೆ ಬರುತ್ತಿರುವ ಪ್ರವಾಸಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ಇದೇ ಕಾರಣಕ್ಕೆ ಕಾಶಿ ವಿಶ್ವನಾಥನಿಗೆ ಉಡುಗೊರೆ ಕೊಡುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಇದೀಗ ಅಂಥದ್ದೇ ಒಂದು ಉಡುಗೊರೆ ಭಾರಿ ಸುದ್ದಿ ಮಾಡಿದೆ. ಅದೇನೆಂದರೆ ಹೆಸರು ಹೇಳಲು ಇಚ್ಛಿಸದ ಉದ್ಯಮಿಯೊಬ್ಬರು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 60 ಕೆಜಿ ಚಿನ್ನವನ್ನು ದಾನ ಮಾಡಿದ್ದು, ಈ ಪೈಕಿ 37 ಕೆಜಿಯಷ್ಟು ಚಿನ್ನವನ್ನು ಬಳಸಿ, ವಿಶ್ವನಾಥನ ಸನ್ನಿಧಿಯ ಗರ್ಭಗುಡಿಯ ಒಳ ಗೋಡೆಗಳನ್ನು ಅಲಂಕರಿಸಲಾಗಿದೆ.
ಅನಾಮಧೇಯ ಉದ್ಯಮಿಯೊಬ್ಬರು ನೀಡಿರುವ ಇಷ್ಟು ಚಿನ್ನದಲ್ಲಿ ಬರೋಬ್ಬರಿ 37 ಕೆ.ಜಿ ಮಾತ್ರ ಗರ್ಭಗುಡಿಯ ಒಳ ಗೋಡೆಗೆ ಅಲಂಕರಿಸಿರುವ ಹಿಂದೆ ಇರುವುದೇ ವಿಶೇಷತೆ. ಅದೇನೆಂದರೆ ಕಾಶಿಯ ವೈಭವ ಮತ್ತೆ ಮರುಕಳಿಸುವಂತೆ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿಯವರೇ ಎನ್ನುವ ಹಿನ್ನೆಲೆಯಲ್ಲಿ ಅವರ ತಾಯಿ ಹೀರಾಬೆನ್​ ಅವರ ತೂಕದ ಚಿನ್ನವನ್ನು ಗರ್ಭಗುಡಿಯ ಒಳ ಗೋಡೆಗೆ ಅಲಂಕರಿಸಿರುವುದಾಗಿ ದೇವಸ್ಥಾನ ಹೇಳಿದೆ.
ಇತ್ತೀಚೆಗೆ 100 ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ರ ಈಗಿನ ತೂಕ. ಹೀಗಾಗಿ ಅವರ ಗೌರವಾರ್ಥ 37 ಕೆಜಿ ತೂಕದ ಚಿನ್ನವನ್ನಷ್ಟೇ ಬಳಸಿ ಕಾಶಿ ವಿಶ್ವನಾಥನ ಗರ್ಭಗುಡಿಯ ಒಳಗೋಡೆ ಅಲಂಕರಿಸಲಾಗಿದೆ.ಗೋಡೆಗಳ ಮೇಲೆ ಹೊಳೆಯುವ ಚಿನ್ನದ ಲೇಪನವನ್ನು ಪ್ರಧಾನಿ ಮೋದಿ ಅವರು ಕಳೆದ ಭಾನುವಾರ ಪ್ರಚಾರದ ವೇಳೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಖುದ್ದು ನೋಡಿ ಅಚ್ಚರಿಗೊಂಡಿದ್ದಾರೆ.
2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇವಾಲಯದ ಜೀರ್ಣೋದ್ಧಾರ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿತ್ತು. ಸುಮಾರು 900 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ದಾರ ಮಾಡಲಾಗಿದೆ. ಸುತ್ತ ಮುತ್ತಲಿನ ಸುಮಾರು 300 ಕಟ್ಟಡಗಳನ್ನು ಖರೀದಿಸಿ ದೇವಾಸ್ಥಾನದ ಪ್ರಾಕಾರವನ್ನು 2700 ಚದರ ಅಡಿಯಿಂದ 5 ಲಕ್ಷ ಚದರ ಅಡಿಗೆ ಹೆಚ್ಚಿಸಲಾಗಿದೆ.
18ನೇ ಶತಮಾನದ ಬಳಿಕ ಮೊದಲ ಬಾರಿಗೆ ದೇವಾಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ಲೇಪನ ಮಾಡಲಾಗಿತ್ತು. 1777ರಲ್ಲಿ ಇಂದೋರಿನ ಮಹಾರಾಣಿ ಅಹಲ್ಯಾ ಬಾಯಿ ಹೋಳ್ಕರ್‌ ಹಾಗೂ ಪಂಜಾಬಿನ ಮಹಾರಾಜ ರಣಜೀತ್‌ ಸಿಂಗ್‌ ಕಾಶಿ ವಿಶ್ವನಾಥ ದೇವಾಲಯದ ಗುಮ್ಮಟ ನಿರ್ಮಾಣಕ್ಕೆ 1 ಟನ್‌ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದರು.
ನನ್ನ ಸಾವಿಗೆ ಅವರು ಪ್ರಾರ್ಥನೆ ಮಾಡಿದ್ದರು, ಕೇಳಿ ನನಗೆ ಬಹಳ ಖುಷಿಯಾಯಿತು ಎಂದ ಪ್ರಧಾನಿ ಮೋದಿ…

ಕೊಲೆ ಮಾಡಿ ತಣ್ಣಗಿದ್ದ ಮಂಡ್ಯದ ಮಾಜಿ ಶಾಸಕನ ಪುತ್ರ ಅರೆಸ್ಟ್‌: ಸಿಪಿಐ ಜತೆ 10 ಲಕ್ಷ ರೂ. ಡೀಲ್‌ ಮಾಡಿದ್ರೂ ಸಿಕ್ಕಿಬಿದ್ದದ್ದೇ ರೋಚಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
