ಕೇಪ್ ಕ್ಯಾನ್‌ವೇರಲ್ (ಅಮೆರಿಕ):ಒಬ್ಬರು ಜರ್ಮನ್‌ ಹಾಗೂ ಮೂವರು ಅಮೆರಿಕದ ಗಗನಯಾತ್ರಿಗಳನ್ನು ಹೊತ್ತೊಯ್ದ ಡ್ರ್ಯಾಗನ್‌ ಸ್ಪೇಸ್​ ಎಕ್ಸ್​ ಕ್ಯಾಪ್ಸುಲ್​ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದು, ಬಾಹ್ಯಾಕಾಶ ಇತಿಹಾಸದಲ್ಲಿ ಹೊಸದೊಂದು ದಾಖಲೆ ನಿರ್ಮಾಣವಾಗಿದೆ.
ನಾಸಾದ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ನಿನ್ನೆ ಸ್ಪೇಸ್​ ಎಕ್ಸ್​ ಕ್ಯಾಪ್ಸುಲ್​ ಪ್ರಯಾಣ ಆರಂಭಿಸಿತು. ಸುಮಾರು 21 ಗಂಟೆಗಳ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿರುವುದಾಗಿ ಹೇಳಲಾಗಿದೆ.
ಇನ್ನು ಮೂರು ವಸಂತಗಳವರೆಗೆ ನಾವು ಆಕಾಶದಲ್ಲಿ ಹಾರಾಡಲಿದ್ದೇವೆ ಎಂದು ಗಗನಯಾತ್ರಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಬಾಹ್ಯಾಕಾಶದಲ್ಲಿ ತೇಲುತ್ತಿರುವ ಸಂದರ್ಭದಲ್ಲಿ ಇದು ವಜ್ರದಂತೆ ಹೊಳೆದಂತೆ ಭಾಸವಾಯಿತು ಎಂದು ಜರ್ಮನ್ ಗಗನಯಾತ್ರಿ ಮಥಿಯಾಸ್ ಮೌರೇರ್ ಬಣ್ಣಿಸಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕಮಾಂಡರ್​ ಆಗಿರುವ ರಾಜಾ ಚರಿ, ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಡ್ರ್ಯಾಗನ್​ ಕ್ಯಾಪ್ಸುಲ್​ 20 ಮೈಲಿ (ಸುಮಾರು 30 ಕಿಲೋಮೀಟರ್) ದೂರದಲ್ಲಿರುವ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. ಈ ಸಂದರ್ಭ ಈ ನಾಲ್ವರು ಗಗನಯಾನಿಗಳ ಬದುಕಲ್ಲಿ ಒಂದು ಭಾವನಾತ್ಮಕ ಕ್ಷಣ ಸೃಷ್ಟಿ ಮಾಡಿದೆ ಎಂದಿದ್ದಾರೆ.
ಡ್ರ್ಯಾಗನ್‌ ಸ್ಪೇಸ್​ ಎಕ್ಸ್​ ಕ್ಯಾಪ್ಸುಲ್​ ಸಂಪೂರ್ಣವಾಗಿ ಸ್ವಯಂಚಾಲಿತವಾಗಿರುವುದಾಗಿ ಹೇಳಲಾಗಿದೆ. ಈ ಯಾನದ ನೌಕೆಯನ್ನು ಚಾರಿ ಮತ್ತು ಪೈಲಟ್ ಟಾಮ್ ಮಾರ್ಷ್‌ಬರ್ನ್ ನಿರ್ವಹಿಸುತ್ತಿದ್ದಾರೆ. ಇವರು ಮುಂದಿನ ಆರು ತಿಂಗಳುಗಳನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
‘500 ಮಂದಿಯೊಂದಿಗೆ ಮಲಗಿರುವೆ- ಆರು ವರ್ಷಗಳಲ್ಲಿ 1000 ಪುರುಷರೇ ನನ್ನ ಗುರಿ’ ಎಂದು ಅನುಭವ ಬಿಚ್ಚಿಟ್ಟ ರೂಪದರ್ಶಿ!

ಈಗಾಗ್ಲೇ ನಾಲ್ಕು ಮಕ್ಕಳಿವೆ… ಮನೆಯಲ್ಲಿದ್ದರೆ ಇನ್ನೂ ಹೆಚ್ಚಾಗೋ ಭಯ ಎಂದ ನಟ ಸೈಫ್‌ ಅಲಿ ಖಾನ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 7 =
Remember me
