ಸ್ಯಾನ್​ಫ್ರಾನ್ಸಿಸ್ಕೊ:ಜಗತ್ತಿನ ನಂ.1 ಶ್ರೀಮಂತ ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ 54 ಸ್ಟಾರ್‌ಲಿಂಕ್ ಬ್ರಾಡ್‌ಬ್ಯಾಂಡ್ ಉಪಗ್ರಹಗಳನ್ನು​ ಉಡಾವಣೆ ಮಾಡಿದೆ. ಶನಿವಾರ (ನಿನ್ನೆ) ಈ ಉಪಗ್ರಹವನ್ನು ಫ್ಲೊರಿಡಾದ ಕೇಪ್ ಕೆನವೆರಲ್ ಬಾಹ್ಯಾಕಾಶ ನೆಲೆಯಿಂದ ಗಗನಕ್ಕೆ ಶನಿವಾರ ರಾತ್ರಿ 11:41 ಕ್ಕೆ ಯಶಸ್ವಿಯಾಗಿ ಉಡಾಯಿಸಲಾಗಿದೆ. ಈ ಮೂಲಕ ಎರಡು ಹಂತದಲ್ಲಿ ಫಾಲ್ಕನ್‌ 9 ರಾಕೆಟ್‌ ಉಡಾವಣೆ ಪ್ರಕ್ರಿಯೆ ನಡೆದಂತಾಗಿದೆ.
ಸ್ಟಾರ್‌ಲಿಂಕ್‌ ಎಂಬುದು ಉಪಗ್ರಹ ಆಧರಿತ ಜಾಗತಿಕ ಇಂಟರ್‌ನೆಟ್‌ ವ್ಯವಸ್ಥೆಯಾಗಿದ್ದು, ಸ್ಟೇಸ್ ಎಕ್ಸ್‌ ಇದನ್ನು ದಶಕಗಳಿಂದ ನಿರ್ವಹಣೆ ಮಾಡುತ್ತಿದೆ.
ಈ ರಾಕೆಟ್ ಉಡಾವಣೆ ಮಾಡುವುದು ದೊಡ್ಡ ಸವಾಲಾಗಿಯೇ ಪರಿಣಮಿಸಿತ್ತು. ಏಕೆಂದರೆ ಉಡಾವಣೆ ಸಮಯದಲ್ಲಿ ವಿಜ್ಞಾನಿಗಳಿಗೆ ಹವಾಮಾನ ವೈಪರೀತ್ಯ ಎದುರಾಗಿತ್ತು. ಆದ್ದರಿಂದ ನಿಗದಿತ ಅವಧಿಗಿಂತಲೂ ಹೆಚ್ಚಿನ ಅವಧಿಯನ್ನು ಉಡಾವಣೆಗಾಗಿ ತೆಗೆದುಕೊಳ್ಳಲಾಯಿತು. 80 ನಿಮಿಷಗಳ ಕಾಲ ತಡವಾಗಿ ರಾಕೆಟ್ ಉಡಾವಣೆ ಮಾಡಲಾಯಿತು.
ಉಡಾವಣೆಯಾದ ಸುಮಾರು ಒಂಬತ್ತು ನಿಮಿಷಗಳೊಳಗೆ ಫಾಲ್ಕನ್ 9ರ ಮೊದಲ ಹಂತದ ರಾಕೆಟ್ ಫ್ಲೋರಿಡಾ ಕರಾವಳಿಯ ಅಟ್ಲಾಂಟಿಕ್ ಸಾಗರದಲ್ಲಿ ನೆಲೆಗೊಂಡಿರುವ​ ಎ ಶಾರ್ಟ್‌ಫಾಲ್ ಆಫ್ ಗ್ರಾವಿಟಾಸ್​ ಸ್ಪೇಸ್‌ಎಕ್ಸ್ ಡ್ರೋನ್ ಶಿಪ್​ನಲ್ಲಿ ಬಂದು ಇಳಿಯಿತು.
ಉಪಗ್ರಹವು ಟೇಕ್ ಆಫ್ ಆದ 15 ನಿಮಿಷಗಳ ನಂತರ ಉದ್ದೇಶಿಸಿದಂತೆ ಎಲ್ಲ 54 ಸ್ಟಾರ್​ಲಿಂಕ್​ ಉಪಗ್ರಹಗಳು ಭೂಮಿಯಿಂದ ಕಕ್ಷೆಗೆ ಸೇರಿದವು. ಇದಾದ ಬಳಿಕ ಎಲೋನ್​ ಮಸ್ಕ್​ ಟ್ವೀಟ್​ ಮಾಡಿ ಉಪಗ್ರಹಗಳ ಉಡ್ಡಯನದ ಬಗ್ಗೆ ಮಾಹಿತಿ ಹಂಚಿಕೊಂಡರು. (ಏಜೆನ್ಸೀಸ್​)ಉಪಗ್ರಹ ಉಡಾವಣೆಯ ವಿಡಿಯೋ ಇಲ್ಲಿದೆ ನೋಡಿ: (ಕೃಪೆ ಸಿಎನ್​ಇಟಿ)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 3 =
Remember me
