ಬೆಂಗಳೂರು:ಗಾನ ಗಾರುಡಿಗ ಎಸ್​.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಕಳೆದ ಆಗಸ್ಟ್​ 5ರಂದು.
ಅಂದು ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ವಿಡಿಯೋ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದ ಅವರು, ನನಗೆ ಕರೊನಾದ ಯಾವುದೇ ಗಂಭೀರ ಲಕ್ಷಣಗಳು ಇಲ್ಲ. ತೀರಾ ಅಂದರೆ ಅತ್ಯಂತ ಸ್ವಲ್ಪ ಪ್ರಮಾಣದಲ್ಲಿ ಜ್ವರ, ನೆಗಡಿ ಬಂದಿದೆಯಷ್ಟೇ. ಪರೀಕ್ಷೆ ಮಾಡಿಸಿಕೊಂಡಾಗ ಕರೊನಾ ಪಾಸಿಟಿವ್​ ಬಂದಿದೆಯಷ್ಟೇ ಎಂದಿದ್ದರು.
ಇದೇನು ದೊಡ್ಡ ಸಮಸ್ಯೆಯಲ್ಲವೇ ಅಲ್ಲ. ನಾನು ಚೆನ್ನಾಗಿ ಇದ್ದೇನೆ. ಯಾರೂ ಹೆದರುವ ಅಗತ್ಯವಿಲ್ಲ. ಕಳೆದ ಮೂರು ದಿನಗಳಿಂದ ಸ್ವಲ್ಪ ಅಸ್ವಸ್ಥನಾಗಿದ್ದೆ ಬಿಟ್ಟರೆ ಏನೇನೂ ಆಗಿಲ್ಲ. ಅದಕ್ಕಾಗಿಯೇ ವೈದ್ಯರು ಮನೆಯಲ್ಲಿಯೇ ಟ್ರೀಟ್‌ಮೆಂಟ್‌ ತೆಗೆದುಕೊಳ್ಳಿ ಎಂದು ಸಲಹೆ ಇತ್ತಿದ್ದರು. ಆದರೆ ಕರೊನಾ ಪಾಸಿಟಿವ್​ ಇರುವ ಹಿನ್ನೆಲೆಯಲ್ಲಿ ನನ್ನಿಂದ ಮನೆಯವರಿಗೆಲ್ಲಾ ತೊಂದರೆ ಆಗುವುದು ಬೇಡ ಎನ್ನುವ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದೇನೆ ಅಷ್ಟೇ.
ಇದನ್ನೂ ಓದಿ:ಯಾರೂ ಮಾಡದ ಒಂದು ದಾಖಲೆ ಮಾಡಿದ್ದಾರೆ ಎಸ್​ಪಿಬಿ … ಏನದು?
ಅನೇಕ ಮಂದಿ ನನಗೆ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಯಾರೇ ಭಯಪಡುವ ಅಗತ್ಯವಿಲ್ಲ. ನಾನು ಆರೋಗ್ಯದಿಂದ ಇದ್ದೇನೆ. ಯಾರಿಗೆ ಆದರೂ ಯಾವುದೇ ಕ್ಷಣದಲ್ಲಿ ಕರೆ ಮಾಡಬೇಕು ಎನ್ನಿಸಿದರೆ ಮಾಡಬಹುದು. ನನ್ನ ಆರೋಗ್ಯ ವಿಚಾರಿಸಿಕೊಳ್ಳಬಹುದು. ಇಲ್ಲಿ ಟ್ರೀಟ್​ಮೆಂಟ್​ ನಡೆಯುತ್ತಿರುವಾಗಿ ಫೋನ್​ ರಿಸೀವ್​ ಮಾಡಲು ಆಗದೇ ಇರಬಹುದು. ಇಲ್ಲದಿದ್ದರೆ ನಾನು ಎಲ್ಲರ ಕರೆ ಸ್ವೀಕರಿಸುವೆ. ಶೀಘ್ರದಲ್ಲಿ ನಾನು ಡಿಸ್‌ಚಾರ್ಜ್‌ ಆಗಿ ಬರುತ್ತೇನೆ ಎಂದಿದ್ದರು.
ಆದರೆ ಬಾಲಸುಬ್ರಹ್ಮಣ್ಯಂ ತಮ್ಮ ಮಾತನ್ನು ಉಳಿಸಿಕೊಳ್ಳಲಿಲ್ಲ. ಬಾರದ ಲೋಕಕ್ಕೆ ಹೋಗಿಬಿಟ್ಟರು.
PHOTO GALLERY| ಸ್ವರ ಮಾಂತ್ರಿಕ ಎಸ್​.ಪಿ. ಬಾಲಸುಬ್ರಹ್ಮಣ್ಯಂರ ಅಪರೂಪದ ಕ್ಷಣಗಳು

ಗಾನ ಗಂಧರ್ವ ಡಾ.ಎಸ್‌ಪಿಬಿ ನಿಧನಕ್ಕೆ ಕಂಬನಿ ಮಿಡಿದ ಕ್ರೀಡಾ ವಲಯ

Sign in to your account
Please enter an answer in digits:fourteen − 5 =
Remember me
