ಆಗ್ರಾ:ಕಳ್ಳ ಎಷ್ಟೇ ಬುದ್ಧಿವಂತನಾಗಿದ್ದರೂ ಒಂದಲ್ಲೊಂದು ಸುಳಿವು ಬಿಟ್ಟೇ ಬಿಡುತ್ತಾನೆ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಕೊಲೆಗಾರ ಸ್ಪೆಲ್ಲಿಂಗ್‌ ಮಿಸ್ಟೇಕ್‌ ಮಾಡಿ ಸಿಕ್ಕಿಬಿದ್ದಿರುವ ಕುತೂಹಲ ಘಟನೆ ನಡೆದಿದೆ.
ಪೊಲೀಸ್‌ (police) ಬದಲು pulish (ಪುಲಿಷ್‌) ಎಂದೂ, ಸಿತಾಪುರ ಬದಲು (ಸೀತಾ-ಪುರ್) ಎಂದೂ ಮೆಸೇಜ್‌ ಹಾಕಿರುವ ಅಪಹರಣಕಾರ, ಇದೇ ಮಿಸ್ಟೆಕ‌ನಿಂದಲೇ ಸಿಕ್ಕಿಬಿದ್ದಿರುವ ಘಟನೆ ಇದಾಗಿದೆ.
ಇಂಥದ್ದೊಂದು ಕುತೂಹಲದ ಘಟನೆ ನಡೆದಿರುವುದು ಉತ್ತರ ಪ್ರದೇಶದ ಹರ್ಡೊಯ್‌ನಲ್ಲಿ. 22 ವರ್ಷದ ರಾಮ್ ಪ್ರತಾಪ್ ಸಿಂಗ್ ಎಂಬಾತ ತನ್ನ ಸಂಬಂಧಿಯೇ ಆಗಿರುವ ಎಂಟು ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿರುವ ಪ್ರಕರಣ ಇದಾಗಿದೆ.
ಸ್ಯಾಂಡಿಲಾ ನಿವಾಸಿಯಾದ ಬಾಲಕನನ್ನು ರಾಮ್‌ಪ್ರತಾಪ್‌ ಸಿಂಗ್‌ ಅವನ ಅಜ್ಜಿಯ ಮನೆಯಿಂದ ಅಪಹರಣ ಮಾಡಿದ್ದ. ಇದು ದುಡ್ಡಿಗಾಗಿ ಮಾಡಿದ್ದ ಅಪಹರಣವಾಗಿತ್ತು. ಫೋನ್‌ ಮೂಲಕ ದುಡ್ಡು ಕೇಳಿದರೆ, ಅದು ಸುಲಭದಲ್ಲಿ ಪೊಲೀಸರಿಗೆ ತಿಳಿದುಬಿಡುತ್ತದೆ ಎನ್ನುವ ಕಾರಣಕ್ಕೆ ಆತ ಫೋನ್‌ ಒಂದನ್ನು ಕಳುವು ಮಾಡಿದ್ದ.
ಈ ಕಳುವು ಮಾಡಿದ್ದ ಫೋನ್‌ನಿಂದ ಬಾಲಕನ ತಂದೆಗೆ ಮೆಸೇಜ್‌ ಕಳುಹಿಸಿ ಎರಡು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ. ಇಂಥ ಸ್ಥಳದಲ್ಲಿ ಎರಡು ಲಕ್ಷ ರೂಪಾಯಿ ತಂದುಕೊಟ್ಟರೆ ಬಾಲಕನನ್ನು ಬಿಡುಗಡೆ ಮಾಡಲಾಗುವುದು ಎಂದು ಅದರಲ್ಲಿ ಬರೆಯಲಾಗಿತ್ತು. ಇಂಗ್ಲಿಷ್‌ ಟೆಕ್ಸ್ಟ್‌ನಲ್ಲಿ ಹಿಂದಿಯ ಮೆಸೇಜ್‌ ಕಳಿಸಿದ್ದ ಆತ, ‘Do lakh rupay Seeta-Pur lekar pahuchiye. Pulish ko nahi batana nahi to haatya kar denge’ (ಎರಡು ಲಕ್ಷ ರೂಪಾಯಿ ’ಸೀತಾ-ಪುರ್‌’ಗೆ ಕಳುಹಿಸು, ’ಪುಲಿಷ್‌’ಗೆ ತಿಳಿಸಬೇಡ. ಒಂದು ವೇಳೆ ಅವರಿಗೆ ತಿಳಿಸಿದರೆ ಬಾಲಕನನ್ನು ಕೊಲೆ ಮಾಡಲಾಗುತ್ತದೆ) ಎಂದು ಬರೆದಿದ್ದ.
ಇದನ್ನೂ ಓದಿ:ಅರ್ನಬ್‌ ಗೋಸ್ವಾಮಿ ಬಂಧನದ ವಿರುದ್ಧ ಪ್ರತಿಭಟನೆ: ಬಿಜೆಪಿ ಮುಖಂಡರ ಬಂಧನ
ಮೆಸೇಜ್‌ ಬಂದಿರುವ ವಿಷಯವನ್ನು ಬಾಲಕನ ತಂದೆ ಪೊಲೀಸರಿಗೆ ತಿಳಿಸಿದರು. ನವೆಂಬರ್ 4ರಂದು ಬೆನಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದರು. ಪೊಲೀಸರು ತನಿಖೆ ಆರಂಭಿಸಿದರು.
ಬಾಲಕನ ಪತ್ತೆಗಾಗಿ ತಂಡ ರಚನೆ ಮಾಡಿದ ಪೊಲೀಸರು, ಮೆಸೇಜ್‌ ಬಂದ ಫೋನ್‌ಗೆ ಕರೆ ಮಾಡಿದರು. ಆದರೆ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ನಂತರ ಸಿಸಿಟಿವಿಯನ್ನು ವಶಕ್ಕೆ ಪಡೆದು ಅವುಗಳನ್ನು ಪರಿಶೀಲಿಸಿದರು. ನಂತರ ಪೊಲೀಸರ ದೃಷ್ಟಿ ಮೆಸೇಜ್‌ನತ್ತ ಹರಿಯಿತು. ಅದರಲ್ಲಿ ಅನೇಕ ಸ್ಪೆಲ್ಲಿಂಗ್‌ ಮಿಸ್ಟೆಕ್‌ಗಳು ಕಂಡವು. ಅವುಗಳ ಪೈಕಿ ಮುಖ್ಯವಾಗಿ ಊರಿನ ಹೆಸರು ಹಾಗೂ ಪೊಲೀಸ್‌ ಸ್ಪೆಲ್ಲಿಂಗ್‌ ತಪ್ಪು ಬರೆದದ್ದು.
ಸಿಸಿಟಿವಿಯ ಆಧಾರದ ಮೇಲೆ ಇಂಥವರೇ ಅಪಹರಣ ಮಾಡಿರಬಹುದು ಎಂದು ಸ್ಪಷ್ಟವಾಗಿ ಪೊಲೀಸರಿಗೆ ತಿಳಿಯಲಿಲ್ಲ. ಅದೇ ಪ್ರದೇಶದಲ್ಲಿ ಅಪಹರಣ ನಡೆದ ದಿನ ಓಡಾಡಿಕೊಂಡಿದ್ದ 10 ಮಂದಿಯನ್ನು ‍ಪೊಲೀಸರು ವಶಕ್ಕೆ ಪಡೆದರು. ಎಲ್ಲರಿಗೂ ‘Main police main bharti hona chahta hoon. Main Hardoi se Sitapur daud kar ja sakta hoon’ (ನಾನು ಪೊಲೀಸ್‌ ಇಲಾಖೆಗೆ ಸೇರಲು ಇಷ್ಟಪಟ್ಟಿದ್ದೇನೆ. ನಾನು ಹಾರ್ಡೋಯಿಯಿಂದ ಸೀತಾಪುರಕ್ಕೆ ಓಡಬಲ್ಲೆ) ಎಂದು ಬರೆಯಲು ಹೇಳಿದರು.
ಆಗಲೇ ಸಿಕ್ಕಿಬಿದ್ದದ್ದು ರಾಮ್‌ಪ್ರತಾಪ್‌ ಸಿಂಗ್‌. ಅವನು ಪುಲಿಷ್‌ ಮತ್ತು ಸೀತಾ-ಪುರ್ ಎಂದು ಬರೆದ. ತಕ್ಷಣ ಆತನನ್ನು ಬಂಧಿಸಿ ಪೊಲೀಸರು ತಮ್ಮದೇ ಭಾಷೆಯಲ್ಲಿ ಪ್ರಶ್ನಿಸಿದಾಗ ತಾನು ಬಾಲಕನನ್ನು ಅಪಹರಿಸಿ, ಹಣ ಕೊಡದ ಕಾರಣ, ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ.
ಲವ್‌ ಮಾಡಿದ್ದು 13 ವರ್ಷ: ಗರ್ಭಪಾತ ಮಾಡಿಸಿ ಮದ್ವೆ ದಿನ ಎಸ್ಕೇಪ್‌- ಉಡುಪಿ ಯುವತಿಯ ಪ್ರತಿಭಟನೆ

ದ್ವಿತೀಯ ಪತ್ನಿಯೀಗ ಅಮೆರಿಕದ ಪ್ರಥಮ ಮಹಿಳೆ- ಇವರ ಇಂಟರೆಸ್ಟಿಂಗ್‌ ಸ್ಟೋರಿ ಇಲ್ಲಿದೆ…

ಅಮೆರಿಕ ಅಧ್ಯಕ್ಷ ಚುನಾವಣೆ ಗಲಾಟೆ ನಡುವೆಯೇ ನಾಯಿಗೆ ದಕ್ಕಿತು ಮೇಯರ್‌ ಪಟ್ಟ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + 15 =
Remember me
