ನವದೆಹಲಿ:ಅದು 1991ರ ಮೇ 21. ರಾಷ್ಟ್ರ ಕಂಡ ಅತ್ಯಂತ ಭಯಾನಕ ಹಾಗೂ ಭೀಕರ ದಿನವದು. ಅಂದು ಶ್ರೀಪೆರಂಬದೂರಿನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಅಂದಿನ ಪ್ರಧಾನಿ ರಾಜೀವ್‌ ಗಾಂಧಿಯವರ ಹತ್ಯೆಮಾಡಲಾಗಿತ್ತು. ಮಾನವ ಬಾಂಬ್ ಸ್ಪೋಟಿಸುವ ಮೂಲಕ ಅವರನ್ನು ಕೊಲ್ಲಲಾಗಿತ್ತು. ಇಡೀ ದೇಶವೇ ಬೆಚ್ಚಿಬಿದ್ದಿತ್ತು.
ಇದಾಗಿ 30 ವರ್ಷಗಳೇ ಸಂದಿವೆ. ಆದರೆ ಈ ಭಯಾನಕ ದಿನದಂದು, ರ‍್ಯಾಲಿಗೆ ನಿಯೋಜನೆಗೊಂಡಿದ್ದ, ರ‍್ಯಾಲಿಯ ಭದ್ರತೆ ಜವಾಬ್ದಾರಿ ವಹಿಸಿದ್ದ ಐಪಿಎಸ್ ಅಧಿಕಾರಿ ಪ್ರತೀಪ್ ಫಿಲಿಪ್ ಅವರ ಬಾಳಲ್ಲೂ ಆಗಬಾರದ್ದು ಆಗಿಹೋಗಿತ್ತು. ಅದೇನೆಂದರೆ ಬಾಂಬ್‌ ಸ್ಫೋಟಗೊಂಡ ಜಾಗದಲ್ಲಿಯೇ ಇವರೂ ನಿಯೋಜನೆಯಲ್ಲಿದ್ದರು. ಈ ಸಂದರ್ಭದಲ್ಲಿ ಫಿಲಿಪ್‌ ಅವರು ಕೂಡ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಅವರು ಚೇತರಿಸಿಕೊಂಡಿದ್ದರು.
ಘಟನಾ ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಿಬಿಐ ಸಂಗ್ರಹಿಸುವ ಸಂದರ್ಭದಲ್ಲಿ ಪ್ರತೀಪ್ ಅವರ ರಕ್ತಸಿಕ್ತವಾಗಿರುವ ಕ್ಯಾಪ್ ಮತ್ತು ನೇಮ್ ಬ್ಯಾಡ್ಜ್ ದೊರಕಿತ್ತು. ಸಾಕ್ಷ್ಯಗಳನ್ನು ಕೋರ್ಟ್‌ಗೆ ಸಲ್ಲಿಸುವ ಸಮಯದಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಇವರ ಕ್ಯಾಪ್‌ ಮತ್ತು ಬ್ಯಾಡ್ಜ್‌ಗಳನ್ನೂ ನೀಡಲಾಗಿತ್ತು.
ಯಾವುದೇ ಅಧಿಕಾರಿಗಳಿಗೆ ಆಗಲಿ, ಅದರಲ್ಲಿಯೂ ಐಪಿಎಸ್‌ ಕೇಡರ್‌ ಅಧಿಕಾರಿಗಳಿಗೆ ಸಹಜವಾಗಿ ಅವರು ಕರ್ತವ್ಯಕ್ಕೆ ಸೇರಿದ ನಂತರ ಪಡೆಯುವ ಮೊದಲನೆಯ ಕ್ಯಾಪ್‌ ಮತ್ತು ನೇಮ್‌ಬ್ಯಾಡ್ಜ್‌ಗಳ ಮೇಲೆ ಭಾವನಾತ್ಮಕ ಸಂಬಂಧ ಇರುತ್ತದೆ. ಅದೇ ರೀತಿ ಪ್ರತೀಪ್‌ ಅವರಿಗೂ ಇವೆರಡರ ಮೇಲೆ ಭಾವನಾತ್ಮಕ ಸಂಬಂಧವಿತ್ತು. ಆದರೆ ಅದು ಸಾಕ್ಷ್ಯದ ರೂಪದಲ್ಲಿ ಕೋರ್ಟ್‌ ದಾಖಲೆಗಳಲ್ಲಿ ಸೇರಿಹೋಗಿತ್ತು.
1998ರಲ್ಲಿ ಸುಪ್ರೀಂಕೋರ್ಟ್‌ ರಾಜೀವ್‌ಗಾಂಧಿ ಹಂತಕರಿಗೆ ಮರಣದಂಡನೆ ನೀಡಿದ ಸಂದರ್ಭದಲ್ಲಿ ಪ್ರತೀಪ್ ಅವರ ಕ್ಯಾಪ್ ಮತ್ತು ನೇಮ್ ಬ್ಯಾಡ್ಜ್ ಹಿಂದಿರುಗಿಸಲು ಆದೇಶಿಸಿತ್ತು. ಆದರೆ ರಾಜೀವಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐನ ವಿಶೇಷ ಆಯೋಗವು (ಎಂಡಿಎಂಎ) ಈ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕಾರಣದಿಂದ ಪ್ರತೀಪ್‌ ಅವರ ಕ್ಯಾಪ್ ಮತ್ತು ನೇಮ್‌ ಬ್ಯಾಡ್ಜ್​ ಬಹು ದೊಡ್ಡ ಸಾಕ್ಷ್ಯವಾಗಿದ್ದು, ಅದನ್ನು ಸದ್ಯ ಹಿಂದಿರುಗಿಸಲಾರದು ಎಂದ ಕಾರಣ ಇದುವರೆಗೂ ಅದು ಕೋರ್ಟ್‌ ವಶದಲ್ಲಿಯೇ ಇದೆ.
ಈ ನಡುವೆಯೇ, ಇದೀಗ ಪ್ರತೀಪ್‌ ಸೇವೆಯಿಂದ ನಿವೃತ್ತರಾಗಿದ್ದಾರೆ. ತಮ್ಮ ಸೇವಾ ಅವಧಿಯ ಅಂತಿಮ ಬೇಡಿಕೆಯನ್ನು ಈಡೇರಿಸುವಂತೆ ಅವರು ಕೋರ್ಟ್ ಮೊರೆ ಹೋಗಿದ್ದರು.
ಅದೇನೆಂದರೆ ಈ ಬ್ಯಾಡ್ಜ್‌ ಮತ್ತು ಕ್ಯಾಪ್‌ ಅನ್ನು ನಿವೃತ್ತಿಗೂ ಮುನ್ನ ಒಮ್ಮೆ ಕಣ್ತುಂಬಿಸಿಕೊಳ್ಳಬೇಕು ಎನ್ನುವುದು ಅವರ ಆಸೆಯಾಗಿತ್ತು. ಇದಕ್ಕೆ ಸ್ಪಂದಿಸಿರುವ ಕೋರ್ಟ್‌, ಒಂದು ಲಕ್ಷ ರೂಪಾಯಿ ಬಾಂಡ್‌ ಪಡೆದು ಅವುಗಳನ್ನು ಹಿಂದಿರುಗಿಸಿದೆ. ಆದರೆ ಒಂದು ತಿಂಗಳ ಮಟ್ಟಿಗೆ ಮಾತ್ರ ಅದನ್ನು ತಮ್ಮ ಬಳಿ ಇಟ್ಟುಕೊಳ್ಳಬಹುದು ಎಂದಿರುವ ಕೋರ್ಟ್‌ ಅಕ್ಟೋಬರ್ 28 ಅಥವಾ ಅದಕ್ಕಿಂತ ಮೊದಲು ನ್ಯಾಯಾಲಯಕ್ಕೆ ಹಿಂದಿರುಗಿಸಬೇಕು ಎಂದು ಸೂಚಿಸಿದೆ. ಇದನ್ನು ನೋಡಿ ಐಪಿಎಸ್‌ ಅಧಿಕಾರಿ ಕಣ್ಣೀರಾಗಿದ್ದು, ಅದನ್ನು ತಿಂಗಳ ಮಟ್ಟಿಗೆ ತಮ್ಮ ಬಳಿ ಇಟ್ಟುಕೊಳ್ಳಲಿದ್ದಾರೆ.
ಚಪಾತಿ ಮಾಡು, 3 ಗಂಟೆಯಲ್ಲಿ ಬರ್ತೇನೆ ಎಂದೋಳು ಆತ್ಮಹತ್ಯೆ ಏಕೆ ಮಾಡ್ಕೋತಾಳೆ? ನಟಿಯ ಅಮ್ಮನ ಕಣ್ಣೀರು

ಬೆಂಗಳೂರಿನಲ್ಲಿ ಲವ್‌ ಜಿಹಾದ್‌? ಮಗಳಿಗಾಗಿ ರಾಜಸ್ಥಾನದ ಪಾಲಕರ ದೌಡು- ಠಾಣೆಯ ಮುಂದೆ ಗಲಾಟೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
