ಚೆನ್ನೈ:ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ಬೆಳಗ್ಗೆ ನಾಚಿ ನೀರಾಗುವಂಥ ಘಟನೆ ನಡೆದಿದೆ. ವಾಯುವಿಹಾರಕ್ಕೆ ಹೋದಾಗ ಯುವತಿಯೊಬ್ಬರು ಕೇಳಿದ ಪ್ರಶ್ನೆಗೆ ಖುಷಿಯಿಂದ ನಾಚಿಕೊಂಡಿದ್ದಾರೆ.‘ನೀವು ಸದಾ ಯುವಕರಂತೆ ಕಾಣುತ್ತೀರಲ್ಲ, ನಿಮ್ಮ ಸೌಂದರ್ಯ, ಉತ್ಸಾಹದ ಗುಟ್ಟೇನು?’ ಎನ್ನುವುದು ಯುವತಿಯ ಪ್ರಶ್ನೆ. ದಿನವೂ ಟ್ರಾಕ್ ಪ್ಯಾಂಟ್ ಹಾಕಿಕೊಂಡು ವಾಯುವಿಹಾರಕ್ಕೆ ಹೋಗುವ ಸ್ಟಾಲಿನ್‌ ಅವರನ್ನು ಉದ್ಯಾನಕ್ಕೆ ಬರುವವರು ದಿನವೂ ನೋಡುವುದು ಸಹಜವೇ. ಒಂದು ಅವರು ಮುಖ್ಯಮಂತ್ರಿ ಎಂದು, ಇನ್ನೊಂದು 68 ವರ್ಷ ವಯಸ್ಸಾದರೂ ಅವರ ಶರೀರ ಫಿಟ್‌ ಆಗಿರುವುದು. ಆದರೆ ಇಂದು ಮಾತ್ರ ಯುವತಿಯೊಬ್ಬರು ನೇರವಾಗಿ ಸೌಂದರ್ಯದ ಗುಟ್ಟನ್ನು ಕೇಳಿಯೇ ಬಿಟ್ಟಿದ್ದಾರೆ.ನಾಚುತ್ತಲೇ ಉತ್ತರಿಸಿದ ಅವರು, ‘ನಾನು ಡಯಟ್ ಕಂಟ್ರೋಲ್ ಮಾಡುತ್ತೇನೆ. ಅದರಿಂದಲೇ ನಾನಿನ್ನೂ ಫಿಟ್ ಆಗಿದ್ದೇನೆ’ ಎಂದಿದ್ದಾರೆ. ಮಾತ್ರವಲ್ಲದೇ ಫಿಟ್‌ನೆಸ್‌ ವಿಡಿಯೋ ಜತೆ, ಯುವತಿ ಕೇಳಿರುವ ಪ್ರಶ್ನೆ ಮತ್ತು ತಾವು ನೀಡಿರುವ ಉತ್ತರದ ವಿಡಿಯೋ ಕೂಡ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.ನನ್ನ ಬಿಡುವಿಲ್ಲದ ದಿನಚರಿ. ಆದರೆ ಇದರ ಮಧ್ಯೆಯೇ ಆರೋಗ್ಯಕ್ಕೆಂದು ಸ್ವಲ್ಪ ಸಮಯ ಮೀಸಲಿಟ್ಟಿದ್ದೇನೆ. ಮೊಮ್ಮಕ್ಕಳೊಂದಿಗೆ ಎಂಜಾಯ್ ಮಾಡಿ, ರಿಲ್ಯಾಕ್ಸ್ ಕೂಡ ಆಗುತ್ತೇನೆ. ಬೆಳಗ್ಗೆ ಬಹಳ ಬೇಗ ಎದ್ದು ವಾಕಿಂಗ್, ಯೋಗ ಮಾಡುವೆ. 10 ದಿನಗಳಿಗೆ ಒಮ್ಮೆ ಸೈಕ್ಲಿಂಗ್ ಮಾಡುತ್ತೇನೆ. ಇದರಿಂದ ನನ್ನ ದೇಹ ಫಿಟ್ ಆಗಿರುತ್ತದೆ. ಇದರಿಂದಲೇ ನಾನು ಎಷ್ಟೇ ಬ್ಯುಸಿಯಾಗಿದ್ದರೂ ಸುಸ್ತಾಗುವುದಿಲ್ಲ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.ಈ ಹಿಂದೆ ವಾಕಿಂಗ್‌ಗೆ ಹೋದ ಸಂದರ್ಭದಲ್ಲಿ ರಸ್ತೆ ಬದಿಯ ಚಹಾ ಅಂಗಡಿಯಲ್ಲಿ ಚಹಾ ಕುಡಿದು, ಅಲ್ಲಿದ್ದವರ ಜೊತೆ ಮಾತನಾಡಿ, ಸೆಲ್ಫೀ ಕ್ಲಿಕ್ಕಿಸಿಕೊಂಡ ವಿಡಿಯೋ ಕೂಡ ವೈರಲ್ ಆಗಿತ್ತು.
M K Stalin blushes as a lady asks the secret of his youthful look, during his morning walk. He responds "diet control".pic.twitter.com/178TnzrNxE— J Sam Daniel Stalin (@jsamdaniel)September 21, 2021
M K Stalin blushes as a lady asks the secret of his youthful look, during his morning walk. He responds "diet control".pic.twitter.com/178TnzrNxE
What keeps M K Stalin busy during weekends.pic.twitter.com/vvXH6Xb8ur— J Sam Daniel Stalin (@jsamdaniel)August 21, 2021
What keeps M K Stalin busy during weekends.pic.twitter.com/vvXH6Xb8ur
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eighteen − one =
Remember me
