ಹೈದರಾಬಾದ್:ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ 2ನೇ ಟಿ20 ಮ್ಯಾಚ್​ಗಾಗಿ ಟಿಕೆಟ್ ಖರೀದಿಸಲು ಹೈದರಾಬಾದ್​ನ ಜಿಮ್​ಖಾನಾ ಕ್ರೀಡಾಂಗಣಕ್ಕೆ ಏಕಾಏಕಿ ಸಾವಿರಾರು ಮಂದಿ ನುಗ್ಗಿ ಬಂದು ಕಾಲ್ತುಳಿತ ಉಂಟಾಯಿತು. ಘಟನೆಯಲ್ಲಿ ನಾಲ್ಕು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಲ್ಲಿ ಕೆಲ ಪೊಲೀಸ್ ಸಿಬ್ಬಂದಿಯೂ ಸೇರಿದಂತೆ ಹಲವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 25 ರಂದು ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯ ಆರಂಭವಾಗಲಿದೆ. ಹೀಗಾಗಿ ಇಲ್ಲಿ ಪ್ರೇಕ್ಷಕರಿಗೆ ಟಿಕೆಟ್ ವಿತರಣೆ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಏಕಾಏಕಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಸಿಎ) ಜಿಮ್ಖಾನಾ ಮೈದಾನದಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ಬಂದ ಕಾರಣದಿಂದ ಕಾಲ್ತುಳಿತ ಸಂಭವಿಸಿದೆ. ಕ್ರೀಡಾಂಗಣದ ಒಳಗೆ ಪ್ರವೇಶಿಸಲೆಂದು ಅಭಿಮಾನಿಗಳು ಗೇಟ್​ ಒಡೆದ ಹಿನ್ನೆಲೆಯಲ್ಲಿ ಈ ಗಲಾಟೆ ಆಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.
HYD: Uncontrolled situation at#GymkhanaGrounds. Police baton charge. Thousands of cricket fans. Fans standing in the queue from 2 AM.1 woman killed and 4 Injured in the#stampedeto buy tickets in#Hyderabad#IndiaVsAustralia#Gymkhana#Secunderabad#Cricket#IndiavsAustraliapic.twitter.com/0kkTBI4Bx2— Chaudhary Parvez (@ChaudharyParvez)September 22, 2022
HYD: Uncontrolled situation at#GymkhanaGrounds. Police baton charge. Thousands of cricket fans. Fans standing in the queue from 2 AM.1 woman killed and 4 Injured in the#stampedeto buy tickets in#Hyderabad#IndiaVsAustralia#Gymkhana#Secunderabad#Cricket#IndiavsAustraliapic.twitter.com/0kkTBI4Bx2
ಟಿಕೆಟ್​ಗಾಗಿ ಬೆಳಗ್ಗೆ 5 ಗಂಟೆಯಿಂದಲೇ ಕ್ಯೂ ನಿಲ್ಲಲಾಗಿತ್ತು. ಟಿಕೆಟ್ ಕೌಂಟರ್​ಗಳನ್ನು 10 ಗಂಟೆಗೆ ತೆರೆಯಲಾಯಿತು. ಏಕಕಾಲಕ್ಕೆ 20 ಮಂದಿಯನ್ನು ಮಾತ್ರ ಒಳಗೆ ಬಿಡಲಾಗುತ್ತಿತ್ತು. ಆದರೆ ಇದು ಅಭಿಮಾನಿಗಳನ್ನು ಕೆರಳಿಸಿದೆ. ಟಿಕೆಟ್​ ಕೊಡಲು ತಡವಾಗುತ್ತಿದೆ ಎಂದು ಆಕ್ರೋಶದಿಂದ ಏಕಾಏಕಿ ನುಗ್ಗಿದರು. ಇದರಿಂದಾಗಿ ಕಾಲ್ತುಳಿತ ಉಂಟಾಯಿತು.
ಆನ್​ಲೈನ್ ಪೇಮೆಂಟ್​ಗೆ ಅವಕಾಶವಿರಲಿಲ್ಲ, ಸ್ಥಳಕ್ಕೆ ಹೋಗಿ ನಗದು ಕೊಟ್ಟೇ ಟಿಕೆಟ್​ ಖರೀದಿ ಮಾಡಬೇಕಿತ್ತು. ಇದರಿಂದಲೂ ಅಭಿಮಾನಿಗಳು ಆಕ್ರೋಶ ಹೊರಹಾಕಿದರು. ಒಬ್ಬರಿಗೆ ಎರಡು ಟಿಕೆಟ್ ಮಾತ್ರ ಕೊಡಲಾಗುತ್ತಿದೆ. ಟಿಕೆಟ್​ಗಾಗಿ ಬರುವವರು ಆಧಾರ್​ ಕಾರ್ಡ್​ನ ಜೆರಾಕ್ಸ್​ ಪ್ರತಿಯೊಂದಿಗೆ ಇಮೇಲ್ ವಿಳಾಸ ಹಾಗೂ ಮೊಬೈಲ್ ನಂಬರ್ ಕೊಡಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಎಲ್ಲಾ ಪರಿಶೀಲನೆ ಮಾಡಿ ಟಿಕೆಟ್​ ಕೊಡುತ್ತಿದ್ದ ಕಾರಣ, ಟಿಕೆಟ್​ ಕೊಡಲು ವಿಳಂಬವಾಗಿರುವುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಯಿತು. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಬೇಕಾಯಿತು.(ಏಜೆನ್ಸೀಸ್​)
ಕನ್ನಡ ಭಾಷೆ ಕಡ್ಡಾಯಕ್ಕೆ ಮಂಡನೆಯಾಯ್ತು ಮಸೂದೆ: ತಪ್ಪು ಮಾಡಿದ್ರೆ ಇರಲಿದೆ ದಂಡ- ಇಲ್ಲಿದೆ ಡಿಟೇಲ್ಸ್​
ಎಐಸಿಸಿ ಅಧ್ಯಕ್ಷರ ಚುನಾವಣೆಗೆ ಅಧಿಸೂಚನೆ ಪ್ರಕಟ: 22 ವರ್ಷಗಳ ದಾಖಲೆ ಮುರಿಯುವುದೆ? ಇಲ್ಲಿಯವರೆಗೆ ಆಗಿದ್ದೇನು?
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:four × 4 =
Remember me
