ಚಂಡೀಗಢ: ಪಂಜಾಬ್‌ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಿರುದ್ಧ ಪಂಜಾಬ್ ಗೃಹ ಸಚಿವ ಸುಖಜಿಂದರ್ ರಾಂಧವ ಅವರು ಭಾರಿ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷದ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದ ಸಿಂಗ್‌ ಮುಖ್ಯಮಂತ್ರಿ ಸ್ಥಾನವನ್ನು ತೊರೆಯುತ್ತಿದ್ದಂತೆಯೇ ಅವರು ಮತ್ತು ಕಾಂಗ್ರೆಸ್‌ ನಡುವೆ ತಿಕ್ಕಾಟ ಶುರುವಾಗಿದ್ದು, ಇದರ ಬೆನ್ನಲ್ಲೇ ಈ ಆರೋಪ ಕೇಳಿಬಂದಿದೆ.
ಸ್ವಂತ ಪಕ್ಷವನ್ನು ಸ್ಥಾಪಿಸಿ, ಭಾರತೀಯ ಜನತಾ ಪಕ್ಷದೊಂದಿಗೆ ಕೈಜೋಡಿಸುವ ಯೋಜನೆ ಬಗ್ಗೆ ಘೋಷಿಸಿರುವ ಬೆನ್ನಲ್ಲೇ ಅಮರೀಂದರ್‌ ಸಿಂಗ್‌ ವಿರುದ್ಧ ಕಾಂಗ್ರೆಸ್‌ ಟಾರ್ಗೆಟ್‌ ಮಾಡುತ್ತಿದ್ದು, ಇದೀಗ ಸುಖಜಿಂದರ್ ರಾಂಧವ ಆರೋಪ ಮಾಡಿದ್ದಾರೆ.
ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ ಪಾಕಿಸ್ತಾನದಲ್ಲಿ ಸ್ನೇಹಿತೆ ಇದ್ದಾರೆ. ಆಕೆ ಹೆಸರು ಆರೋಸಾ ಆಲಂ. ಇವರಿಗೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಜತೆ ಲಿಂಕ್‌ ಇದೆ ಎಂದು ಆರೋಪಿಸಿರುವ ರಾಂಧವ, ಪಾಕಿಸ್ತಾನದ ಸೇನಾ ಅಧಿಕಾರಿಗಳೊಂದಿಗೆ ಪಾಕಿಸ್ತಾನದ ರಕ್ಷಣಾ ಪತ್ರಕರ್ತೆಯಾಗಿರುವ ಆರೋಸಾ ಆಲಂ ಇರುವ ಫೋಟೋ ಮತ್ತು ವಿಡಿಯೋಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಪಂಜಾಬ್ ಐಎಸ್‌ಐನಿಂದ ಬೆದರಿಕೆಯನ್ನು ಎದುರಿಸುತ್ತಿದೆ ಎಂದು ಕ್ಯಾಪ್ಟನ್ ಹೇಳಿಕೆ ನೀಡಿದ್ದಕ್ಕೆ ತಿರುಗೇಟು ನೀಡಿರುವ ರಾಂಧವ ಅಸಲಿಗೆ ಇವರಿಗೇ ಐಎಸ್‌ಐ ಜತೆ ಲಿಂಕ್‌ ಇದೆ ಎಂದು ಹೇಳಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಪಂಜಾಬ್ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿರುವುದಾಗಿ ಅವರು ಹೇಳಿದ್ದಾರೆ.
2018ರಲ್ಲಿ ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಅರೂಸಾ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥನನ್ನು ಅವರು ಅಪ್ಪಿಕೊಂಡಿದ್ದರು. ಇದನ್ನು ಗಮನಿಸಿದ್ದ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಅಮರೀಂದರ್‌ ಸಿಂಗ್‌ ವಿರುದ್ಧ ಹರಿಹಾಯ್ದಿದ್ದರು. ಅಷ್ಟೇ ಅಲ್ಲದೇ 2004ರ ವೇಳೆ ಅಮರೀಂದರ್‌ ಸಿಂಗ್‌ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅರೂಸ್‌ ಅವರ ಮನೆಗೆ ತೆರಳಿದ್ದರು. ಇದನ್ನೆಲ್ಲಾ ಉಲ್ಲೇಖಿಸಿರುವ ರಾಂಧವ್‌ ಈಗ ಈ ಆರೋಪ ಮಾಡಿದ್ದಾರೆ.
ಇದರ ಬೆನ್ನಲ್ಲೇ ಬಿಜೆಪಿಗೆ ಅವರು ಸೇರುವುದಾಗಿ ಹೇಳಿಕೆ ನೀಡಿರುವುದನ್ನು ಖಂಡಿಸಿರುವ ಕೆಲ ಕಾಂಗ್ರೆಸ್ ಕಾರ್ಯಕರ್ತರು, “ಕ್ಯಾಪ್ಟನ್ ಸಾಹೇಬರೇ, ನೀವು ಈ ದಾರಿಯಲ್ಲಿ ಹೋಗಬೇಡಿ. ನಾವು ನಿಮ್ಮನ್ನು ಗೌರವಿಸುತ್ತೇವೆ. ಬಿಜೆಪಿಯೊಂದಿಗೆ ಸೇರಿಕೊಂಡು ಪಂಜಾಬ್ ಅನ್ನು ತೊಂದರೆಗೆ ಸಿಲುಕಿಸಬೇಡಿ. ಅವರು ಪಂಜಾಬ್‌ನಲ್ಲಿ ರಾಜ್ಯಪಾಲರ ಆಳ್ವಿಕೆಯನ್ನು ಹೇರಲು ಬಯಸುತ್ತಾರೆ. ಬಿಜೆಪಿಗೆ ಅದರಲ್ಲಿ ಯಶಸ್ವಿಯಾಗಲು ನಾವು ಅವಕಾಶ ನೀಡುವುದಿಲ್ಲ, ನೀವು ಅವರ ಹಿಂದೆ ಹೋಗಬೇಡಿ’ ಎಂದಿದ್ದಾರೆ.
ಸೇನೆಯಲ್ಲಿ ಕಾಯಂ ಸ್ಥಾನಕ್ಕಾಗಿ ಹೋರಾಟ ನಡೆಸಿದ ಮಹಿಳೆಯರಿಗೆ ಭರ್ಜರಿ ಗೆಲುವು: ‘ಸುಪ್ರೀಂ’ ಗ್ರೀನ್‌ ಸಿಗ್ನಲ್‌

ಸ್ವಿಗ್ಗಿ, ಡೋಂಜೋದಲ್ಲಿ ಡ್ರಗ್ಸ್‌ ಸಪ್ಲೈ, ಪುಸ್ತಕದೊಳಗೂ ಮಾದಕ ದ್ರವ್ಯ- ಬೆಚ್ಚಿಬಿದ್ದ ಬೆಂಗಳೂರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
