ಮುಂಬೈ:1988ರಲ್ಲಿ ಕಳುವಾಗಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುವನ್ನು 22 ವರ್ಷಗಳ ಕಾನೂನು ಹೋರಾಟದ ಬಳಿಕ ಪೊಲೀಸರಿಂದ ಪಡೆದಿರುವ ವಿಲಕ್ಷಣ ಘಟನೆಯಿಂದು ಮುಂಬೈನಲ್ಲಿ ನಡೆದಿದೆ.
ಉತ್ಕೃಷ್ಟ ಫ್ಯಾಷನ್​ ಬ್ರ್ಯಾಂಡ್​ ಚರಗ್​ ದಿನ್​ ಮಾಲೀಕರಾದ ರಾಜು ದಾಸ್ವಾನಿ ಕುಟುಂಬ, ತಮ್ಮ ಕಳುವಾಗಿರುವ ವಸ್ತುಗಳನ್ನು 22 ವರ್ಷಗಳ ಬಳಿಕ ವಾಪಸ್‌ ಪಡೆದಿದೆ. ಆಗ 13 ಲಕ್ಷ ರೂಪಾಯಿ ಬೆಲೆ ಬಾಳುತ್ತಿದ್ದ ಈ ವಸ್ತುಗಳು ಈಗ ಎಂಟು ಕೋಟಿ ರೂಪಾಯಿ ಬೆಲೆ ಬಾಳುವುದಾಗಿ ಅವರು ಹೇಳಿದ್ದಾರೆ.
ಆಗಿದ್ದೇನು? 1998ರಲ್ಲಿ ಕಳ್ಳರು . ಮುಂಬೈನ ಕೋಲಾಬಾದಲ್ಲಿರುವ ರಾಜು ದಾಸ್ವಾನಿ ಮನೆಗೆ ಕನ್ನ ಹಾಕಿದ್ದರು. ಸಶಸ್ತ್ರಗಳೊಂದಿಗೆ ಬಂದಿದ್ದ ಅವರು, ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದರು. ರಾಜು ದಾಸ್ವಾನಿ ಮತ್ತು ಅವರ ಪತ್ನಿಯನ್ನು ಕಟ್ಟಿ ಹಾಕಿದ್ದರು. ಅವರಿಗೆ ಬೆದರಿಸಿ ಮನೆಯಲ್ಲಿರುವ ಕಪಾಟುಗಳ ಕೀ ಪಡೆದುಕೊಂಡಿದ್ದರು. ಅಲ್ಲಿಂದ 13 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದರು. ಅದರಲ್ಲಿ ವಿಕ್ಟೋರಿಯಾ ರಾಣಿಯ ಚಿತ್ರವುಳ್ಳ ಗೋಲ್ಡ್ ಕಾಯಿನ್‌ಗಳು, ಎರಡು ಬಂಗಾರದ ಕಡಗಗಳು, 100 ಗ್ರಾಂ ಮತ್ತು 200 ಮಿಲಿಗ್ರಾಂ ತೂಕವುಳ್ಳ ಎರಡು ಬಂಗಾರದ ಗಟ್ಟಿಗಳೂ ಸೇರಿದ್ದವು.
ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಸ್ವಲ್ಪ ದಿನಗಳಲ್ಲಿಯೇ ಮೂವರು ಆರೋಪಿಗಳನ್ನು ಬಂಧಿಸಿ, ಕಳವು ಮಾಡಿದ್ದ ಚಿನ್ನಾಭರಣಗಳ ಒಂದು ಭಾಗವನ್ನು ವಶಪಡಿಸಿಕೊಂಡಿದ್ದರು. ಆರು ಮಂದಿ ಖದೀಮರ ಪೈಕಿ ಮೂವರು ತಲೆಮರೆಸಿಕೊಂಡಿದ್ದು, ಸಿಕ್ಕಿಬಿದ್ದ ಮೂವರು ಒಂದೇ ವರ್ಷದಲ್ಲಿ ಬಿಡುಗಡೆಯಾಗಿದ್ದರು.
ಪೊಲೀಸರ ಬಳಿ ಇರುವ ಎಲ್ಲಾ ಸಂಪತ್ತನ್ನು ತಮಗೆ ಹಿಂದಿರುಗಿಸುವಂತೆ ರಾಜು ದೇಸ್ವಾನಿ ನ್ಯಾಯಾಲಯದ ಮೊರೆ ಹೋಗಿದ್ದರು. ಅದಕ್ಕೆ ಸಂಬಂಧಪಟ್ಟ ಬಿಲ್​ಗಳು, ರಶೀದಿಗಳನ್ನೂ ಸೆಷನ್ಸ್​ ಕೋರ್ಟ್​ಗೆ ನೀಡಿದ್ದರು. ಈ ನಡುವೆಯೇ 2007ರಲ್ಲಿ ಅರ್ಜನ್​ ದಾಸ್ವಾನಿ ಮೃತಪಟ್ಟರು. ಆದರೆ ಅಲ್ಲಿಯವರೆಗೂ ಪೊಲೀಸರು ವಶಪಡಿಸಿಕೊಂಡಿರುವ ಚಿನ್ನಾಭರಣಗಳು ಅವರ ಕೈಸೇರಿರಲಿಲ್ಲ.
ಇದೀಗ ಅವರ ಕುಟುಂಬಸ್ಥರು ಕೋರ್ಟ್‌ನಲ್ಲಿ ಈ ಮೊಕದ್ದಮೆಯನ್ನು ಮುಂದುವರೆಸಿದರು. ಇದೀಗ ಕೋರ್ಟ್‌ ಸಂಪತ್ತನ್ನು ಹಿಂದಿರುಗಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ. ಆಗ 13 ಲಕ್ಷ ರೂ. ಬೆಲೆ ಬಾಳುತ್ತಿದ್ದ ಈ ಸಂಪತ್ತು ಇದೀಗ 18 ಕೋಟಿ ರೂಪಾಯಿಗಳದ್ದಾಗಿದ್ದು, ಪೊಲೀಸರು ವಾಪಸ್ ಮಾಡಿದ್ದಾರೆ.
ಪಬ್ಲಿಕ್​ ಪ್ರಾಸಿಕ್ಯೂಟರ್ ಇಕ್ಬಾಲ್​ ಸೋಲ್ಕರ್​ ಮತ್ತು ಕೊಲಾಬಾ ಪೊಲೀಸ್​ ಸಂಜಯ್​ ಡೊನ್ನರ್​ ಸಮ್ಮುಖದಲ್ಲಿ ಎಲ್ಲವನ್ನೂ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.
ಇದು ವಿಭಿನ್ನ ಲವ್‌ ಸ್ಟೋರಿ: ಅತ್ತಿಗೆಯ ತಂಗಿಯನ್ನು ವರಿಸಿದ ಯುವತಿ- ಓಡಿಹೋಗಿ ಮದುವೆಯಾದ ಜೋಡಿ

ಸೂಕ್ತ ಸಮಯಕ್ಕೆ ಕಾಯುತ್ತಿದ್ದ ಪೊಲೀಸರ ಕೈಗೆ ರೆಡ್‌ಹ್ಯಾಂಡ್‌ ಸಿಕ್ಕಿಬಿದ್ದರು ಉಡುಪಿಯ ‘ಭ್ರಷ್ಟ’ ಅಧಿಕಾರಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − four =
Remember me
