ಸುರ್ಖೇದಾ (ಗುಜರಾತ್​): ಭಾರತ ಎಂದರೆ ವಿಭಿನ್ನ ರೀತಿಯ ಸಂಪ್ರದಾಯಗಳ ತವರು. ಇಲ್ಲಿ ಇರುವ ಸಂಪ್ರದಾಯಗಳು ಒಂದಲ್ಲಾ… ಎರಡಲ್ಲಾ… ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಸಂಪ್ರದಾಯ, ಒಂದೊಂದು ರೀತಿಯ ವಿಶೇಷತೆ. ಅದರಲ್ಲಿಯೂ ಮದುವೆ ಸಂಪ್ರದಾಯಗಳದ್ದಂತೂ ಭಿನ್ನ… ವಿಭಿನ್ನ… ಅವುಗಳ ಪೈಕಿ ಕೆಲವು ವಿಚಿತ್ರವೂ ಎನಿಸುವುದುಂಟು.
ಅಂಥದ್ದೇ ಒಂದು ನಗು ತರಿಸುವಂಥ ಸಂಪ್ರದಾಯ ಇರುವುದು ಗುಜರಾತ್‍ನ ಸುರ್ಖೇದಾ, ಸನಾದಾ ಮತ್ತು ಅಂಬಲಾ ಗ್ರಾಮದಲ್ಲಿನ ಆದಿವಾಸಿಗಳದ್ದು. ಇಲ್ಲೊಂದು ವಿಚಿತ್ರ ಪದ್ಧತಿದೆ. ಅದೇನೆಂದರೆ ವಧುವಿಗೆ ಸಿಂಧೂರ ಹಚ್ಚುವುದು, ತಾಳಿ ಕಟ್ಟುವುದು ಎಲ್ಲವೂ ಗಂಡನಲ್ಲ ಬದಲಿಗೆ ಆತನ ಸಹೋದರಿ! ಒಂದು ವೇಳೆ ಅವನಿಗಾನದರೂ ಅಕ್ಕ-ತಂಗಿ ಇಲ್ಲದಿದ್ದರೆ ಅವನ ಕುಟುಂಬದಲ್ಲಿ ಮದುವೆಯಾಗದೇ ಇರುವ ಯಾವುದಾದರೂ ಯುವತಿ ಇದ್ದಳೆ ಅವಳು ಈ ಕಾರ್ಯ ಮಾಡಬೇಕು.
ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಇನ್ನೂ ಇದೆ ಕುತೂಹಲದ ಕಥೆ. ಇಲ್ಲಿಯ ಜನಾಂಗದಲ್ಲಿ ತನ್ನದೇ ಮದುವೆಗೆ ಪಾಪ ವರ ಮಹಾಶಯ ಹೋಗುವ ಹಾಗೆಯೇ ಇಲ್ವಂತೆ! ಅವನು ಮದುವೆ ಮುಗಿಯುವವರೆಗೆ ಮನೆಯಲ್ಲಿಯೇ ಇರಬೇಕು. ಸಂಪ್ರದಾಯದ ಪ್ರಕಾರ ಶೇರ್ವಾನಿ ಹಾಕಿಕೊಂಡು ಸೆಹರಾದಿಂದ (ಹೂವಿನ ಮಾಲೆ) ಮುಖವನ್ನು ಯಾರಿಗೂ ತೋರಿಸದಂತೆ ಮುಚ್ಚಿಕೊಂಡು ಕುಳಿತಿರಬೇಕು. ವರ ಅತ್ತಿತ್ತ ಕದಲದಂತೆ ಆತನ ತಾಯಿ ಅವನ ಪಕ್ಕದಲ್ಲಿಯೇ ಇರುತ್ತಾಳೆ.
ಮದುವೆ ಮುಗಿದ ಬಳಿಕ ವರನ ಸಹೋದರಿ ವಧುವನ್ನು ಅತ್ತೆ ಮನೆಯಿಂದ ಕರೆದುಕೊಂಡು ಅಣ್ಣನಿಗೆ ಒಪ್ಪಿಸುವಳು. ಒಂದು ವೇಳೆ ಈ ಸಂಪ್ರದಾಯ ಪಾಲಿಸದೇ ಮದುವೆಯಾದರೆ ಅವರ ಸಂಬಂಧ ಮುರಿದು ಬೀಳುತ್ತದೆ ಎಂಬ ನಂಬಿಕೆ ಇದೆಯಂತೆ.
ಅಷ್ಟಕ್ಕೂ ಇಂಥ ಆಚರಣೆ ಹಿಂದೆ ಕುತೂಹಲ ಕಥೆಯೂ ಇದೆ. ಅದೇನೆಂದರೆ ಈ ಗ್ರಾಮಗಳ ದೈವ ಅಪ್ಪಟ ಬ್ರಹ್ಮಾಚಾರಿಯಂತೆ. ಆದ್ದರಿಂದ ಮದುವೆ ಗಂಡಸಿನ ಜತೆಯಾದರೂ ತಾಳಿ ಕಟ್ಟುವುದು ಹೆಣ್ಣಂತೆ. ಅಲ್ಲಿಗೆ ಹೆಣ್ಣಿಗೆ ಹೆಣ್ಣಿನ ಜತೆ ಮದುವೆ ಮಾಡಿದಂತೆ, ಇದರಿಂದ ತಮ್ಮ ದೇವರು ಮುನಿಸಿಕೊಳ್ಳುವುದಿಲ್ಲ ಎಂಬ ನೆಮ್ಮದಿ ಈ ಗ್ರಾಮಸ್ಥರದ್ದು.
ಕ್ಲಾಸ್​ರೂಂ ಒಳಗೇ ಗೆಳತಿಯ ಮದ್ವೆಯಾದ ಹೈಸ್ಕೂಲ್​​ ವಿದ್ಯಾರ್ಥಿ! ಮುಂದೇನಾಯ್ತು ನೋಡಿ…

ಲವ್‌ ಮಾಡಿದ್ದು 13 ವರ್ಷ: ಗರ್ಭಪಾತ ಮಾಡಿಸಿ ಮದ್ವೆ ದಿನ ಎಸ್ಕೇಪ್‌- ಉಡುಪಿ ಯುವತಿಯ ಪ್ರತಿಭಟನೆ

ತುಮಕೂರು ಟು ಬೆಂಗಳೂರು- ಹೆಲಿಕಾಪ್ಟರ್​ನಲ್ಲಿ​ ಮದುಮಗನ ಭರ್ಜರಿ ಎಂಟ್ರಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − eight =
Remember me
