ಲಂಡನ್:ಅವೆಷ್ಟೊ ಘಟನೆಗಳು ವಿಜ್ಞಾನಕ್ಕೂ ನಿಲುಕದ್ದು ನಮ್ಮ ಸುತ್ತಮುತ್ತಲೂ ನಡೆಯುತ್ತಲೇ ಇರುತ್ತದೆ. ಈ ಪೈಕಿ ಕೆಲವು ಘಟನೆಗಳಿಗೆ ಮಾತ್ರ ಏನೋ ಒಂದು ಉತ್ತರ ಕಂಡುಕೊಳ್ಳಲು ಸಾಧ್ಯವಾಗಿದೆ.
ಆದರೆ ಸದ್ಯಕ್ಕೆ ಉತ್ತರಿಸಲಾಗದ ನಿಗೂಢ ಘಟನೆಯೊಂದು ಲಂಡನ್‌ನಲ್ಲಿ ನಿನ್ನೆ ನಡುರಾತ್ರಿ ನಡೆದಿದೆ. ಇಂಗ್ಲೆಂಡ್‌ನ ಎರಡನೇ ಪ್ರಮುಖ ನಗರ ಎಂದೇ ಎನ್ನಿಸಿಕೊಂಡಿರುವ ಬರ್ಮಿಂಗ್‌ಹ್ಯಾಮ್‌ನಲ್ಲಿ ವಿಚಿತ್ರ ಘಟನೆ ನಡೆದಿದೆ.
ಹಲವೆಡೆ ಜನರು ಸಾಮೂಹಿಕ ಇರಿತಕ್ಕೊಳಗಾಗಿ ಚೀರಾಟ ನಡೆಸಿದರು. ಆದರೆ ಇರಿತ ಹೇಗೆ ಉಂಟಾಯಿತು, ಇದನ್ನು ಮಾಡಿದವರು ಯಾರು, ಏಕೆ, ಹೇಗೆ ಎಲ್ಲವೂ ಸದ್ಯ ಪ್ರಶ್ನೆಯಾಗಿಯೇ ಉಳಿದಿದೆ.
ಸುಮಾರು ಮಧ್ಯರಾತ್ರಿ 12:30ರ ಹೊತ್ತಿಗೆ ಬರ್ಮಿಂಗ್ ಹ್ಯಾಮ್ ಸಿಟಿ ಸೆಂಟರ್ ಬಳಿ ಹಲವರನ್ನು ಸಾಮೂಹಿಕವಾಗಿ ಇರಿಯಲಾಗಿದೆ ಎಂದು ವರದಿ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅನೇಕ ಮಂದಿ ನೋವಿನಿಂದ ಚೀರುತ್ತಿದ್ದರು. ಆದರೆ ಪೊಲೀಸರು ತಪಾಸಣೆ ನಡೆಸಿದರೂ ಏನೊಂದೂ ಸುಳಿವು ಸಿಗಲಿಲ್ಲ.
ವೀಕೆಂಡ್‌ ಇದ್ದುದರಿಂದ ಇಲ್ಲಿ ಹೆಚ್ಚಿನ ಜನರು ಮನೆಯ ಹೊರಗಡೆ ಕುಳಿತು ಊಟ, ಪಾರ್ಟಿ ಮಾಡುತ್ತಾರೆ. ಇದೀಗ ಲಾಕ್‌ಡೌನ್‌ ಘೋಷಣೆಯಾದಂದಿನಿಂದ ಘಟನೆ ನಡೆದಿರುವ ಸ್ಥಳದಲ್ಲಿ ರಸ್ತೆಯನ್ನು ಮುಚ್ಚಿರುವ ಕಾರಣ, ಜನರು ಆರಾಮಾಗಿ ಮನೆಯ ಹೊರಗಡೆ ಇರುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಈ ಘಟನೆ ನಡೆದಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಇದನ್ನೂ ಓದಿ:ಮುಸ್ಲಿಂ ಸಮುದಾಯಕ್ಕೆ ತೆಲಂಗಾಣ ಭರ್ಜರಿ ಗಿಫ್ಟ್‌: ಹಲವಾರು ಯೋಜನೆಗೆ ಗ್ನೀನ್‌ ಸಿಗ್ನಲ್‌
ಎಷ್ಟು ಮಂದಿ ಇರಿತಕ್ಕೊಳಗಾಗಿದ್ದಾರೆ, ಎಷ್ಟು ಮಂದಿಗೆ ಗಂಭೀರ ಗಾಯಗಳಾಗಿವೆ ಎಂಬ ಬಗ್ಗೆ ಇದುವರೆಗೂ ಸರಿಯಾದ ಮಾಹಿತಿ ಸಿಕ್ಕಿಲ್ಲ ಎಂದಿರುವ ಪೊಲೀಸರು, ಸ್ಥಳದಲ್ಲಿದ್ದವರನ್ನು ಆಸ್ಪತ್ರೆಗಳಿಗೆ ಕೂಡಲೇ ರವಾನಿಸಿದ್ದಾರೆ.
ಸಿಟಿ ಸೆಂಟರ್‌ನ ಪ್ರಮುಖ ಸ್ಥಳಗಳನ್ನು ಪೊಲೀಸರು ಸುತ್ತುವರೆದಿದ್ದು, ಇದುವರೆಗೆ ಘಟನೆಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ಬಿರ್ಮಿಂಗ್‌ಹ್ಯಾಮ್ ಹಲವೆಡೆ ತುರ್ತು ಘೋಷಣೆಗಳನ್ನು ಹೊರಡಿಸಲಾಗಿದ್ದು, ಘಟನೆ ನಡೆದ ಸ್ಥಳದಿಂದ ದೂರವಿರುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.ಸ್ಥಳದಲ್ಲಿಯೇ ಇರುವ ಪಬ್‌ ಒಂದಕ್ಕೆ ಹೋಗಿದ್ದ ಮಹಿಳೆಯೊಬ್ಬಳು ಹೇಳಿದಂತೆ, ‘ಇದ್ದಕ್ಕಿದ್ದಂತೆಯೇ ಹೊರಗಡೆ ಚೀರಾಟ ಕೇಳಿಸಿತು. ನಾನು ಮತ್ತು ನನ್ನ ಸ್ನೇಹಿತರು ಕೂಡಲೇ ಹೊರಕ್ಕೆ ಹೋಗಿ ನೋಡಿದೆವು. ಹಲವರು ಇರಿತಕ್ಕೆ ಒಳಗಾಗಿದ್ದರು. ಆದರೆ ಸುತ್ತಲೂ ಯಾರೂ ಕಾಣಿಸಲಿಲ್ಲ. ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದೆವು’ ಎಂದಿದ್ದಾಳೆ.
ಸದ್ಯ ಎಲ್ಲವೂ ನಿಗೂಢವಾಗಿದೆ. ಇದರ ಹಿಂದಿರುವ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ತೊಡಗಿದ್ದಾರೆ. ಇರಿತಕ್ಕೆ ಒಳಗಾದವರು ಕೂಡ ಯಾರು ತಮ್ಮನ್ನೆಲ್ಲಾ ಒಟ್ಟಿಗೇ ಇರಿದರು ಎನ್ನುವುದು ತಿಳಿದೇ ಇಲ್ಲ ಎನ್ನುತ್ತಿದ್ದಾರೆ!
ಮುಸ್ಲಿಂ ಸಮುದಾಯಕ್ಕೆ ತೆಲಂಗಾಣ ಭರ್ಜರಿ ಗಿಫ್ಟ್‌: ಹಲವಾರು ಯೋಜನೆಗೆ ಗ್ನೀನ್‌ ಸಿಗ್ನಲ್‌

ವಿಚಾರಣೆ ಮಾಡೋದಿದ್ರೆ ಆಫ್ರಿಕನ್‌ ಭಾಷೆಯಲ್ಲಿ ಮಾಡಿ, ಉತ್ತರಿಸುವೆ ಎಂದ ಡ್ರಗ್ಸ್ ಪೆಡ್ಲರ್‌!

ಸೋಂಕಿತೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಅತ್ಯಾಚಾರ ಮಾಡಿದ ಆಂಬ್ಯುಲೆನ್ಸ್ ಚಾಲಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
